»   » ಅಮೀರ್ ಖಾನ್‌ ವಿರುದ್ಧ ಈಗ ಜಾಮೀನು ರಹಿತ ವಾರೆಂಟ್

ಅಮೀರ್ ಖಾನ್‌ ವಿರುದ್ಧ ಈಗ ಜಾಮೀನು ರಹಿತ ವಾರೆಂಟ್

Subscribe to Filmibeat Kannada

ಭೂಪಾಲ್, ಅ.25 : ಅಮೀರ್ ಖಾನ್ ವಿರುದ್ಧ ಭೂಪಾಲ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪ ಎದುರಿಸುತ್ತಿರುವ ಖಾನ್ ವಿಚಾರಣೆಗಾಗಿ ಹಾಜರಾಗದೆ 3ಬಾರಿ ಕೋರ್ಟ್ ಆಜ್ಞೆಯನ್ನು ಉಲ್ಲಂಘಿಸಿದ್ದಾರೆ. ಈ  ಕಾರಣ ಕೋರ್ಟ್ ವಾರೆಂಟ್  ಹೊರಡಿಸಿದೆ.
 
ಕೋರ್ಟ್‌ನ ಯಾವುದೇ ಆದೇಶ ಗೊತ್ತಿಲ್ಲದ ಕಾರಣ ಅವರು ಹಾಜರಾಗಲು ವಿಫಲರಾಗಿದ್ದಾರೆ ಎಂದು ವಿವರಣೆ ನೀಡಲು ಅಮೀರ್ ಖಾನ್ ವಕೀಲರು ಪ್ರಯತ್ನಿಸಿದರು. ಆದರೆ, ಅವರ ವಾದವನ್ನು ತಿರಸ್ಕರಿಸಿದ ದಂಡಾಧಿಕಾರಿಗಳು ನ.7ರಂದು ಅಮೀರ್ ಖಾನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಪೋಲೀಸರಿಗೆ ಆಜ್ಞಾಪಿಸಿದ್ದಾರೆ.

ಹಿನ್ನೆಲೆ : ಕಾರು ಕಂಪನಿಯೊಂದರ ರಾಯಭಾರಿಯಾಗಿದ್ದ ಅಮೀರ್ ಖಾನ್, ಜಾಹೀರಾತಿನಲ್ಲಿ ಭಾಗವಹಿಸಲು ಆಗಸ್ಟ್‌ನಲ್ಲಿ ಇಂಧೋರ್‌ಗೆ ಬಂದಿದ್ದರು. ಆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ನಡೆದಿದೆ ಎಂದು ಸ್ಥಳೀಯ ವಕೀಲರೊಬ್ಬರು ಆರೋಪಿಸಿ, ಅಮೀರ್ ಖಾನ್ ವಿರುದ್ಧ ದೂರು ದಾಖಲಿಸಿದ್ದರು.

ರಾಷ್ಟ್ರಧ್ವಜ ಕಾರಿನ ಮೇಲ್ಚಾವಣಿಗೆ ಅಂಟಿಕೊಂಡಿತ್ತು. ಕಾರ್ಯಕ್ರಮ ಮುಗಿದ ಮೇಲೂ ರಾತ್ರಿಯಲ್ಲಾ ಅದು ಹಾಗೆಯೇ ಇತ್ತು. ಈ ವಿಚಾರವಾಗಿ ಕೋರ್ಟ್ ನನ್ನ ದೂರನ್ನು ಅಂಗೀಕರಿಸಿ ಅಮೀರ್ ಖಾನ್‌ಗೆ ಹಾಜರಾಗಲು ಆದೇಶಿಸಿತು. ಎರಡು ಬಾರಿ ವಾರೆಂಟ್ ಹೊರಡಿಸಲಾಯಿತು. ಆದರೂ ಕೋರ್ಟ್‌ಗೆ ಹಾಜರಾಗಲಿಲ್ಲ ಎಂದು ದೂರು ಕೊಟ್ಟಿರುವ ಸುರೇಶ್ ಕಂಗಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada