»   »  'ನ್ಯೂಯಾರ್ಕ್'ನಲ್ಲಿ ಕತ್ರಿನಾ, ಅಬ್ರಹಾಂ ಮತ್ತು ನೀಲ್!

'ನ್ಯೂಯಾರ್ಕ್'ನಲ್ಲಿ ಕತ್ರಿನಾ, ಅಬ್ರಹಾಂ ಮತ್ತು ನೀಲ್!

Subscribe to Filmibeat Kannada

ಜಾನ್ ಅಬ್ರಹಾಮ್, ಕತ್ರಿನಾ ಕೈಫ್, ನೀಲ್ ನಿತಿನ್ ಮುಖೇಶ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಹಿಂದಿ ಚಿತ್ರ 'ನ್ಯೂಯಾರ್ಕ್'. ಯಶ್ ಚೋಪ್ರಾ, ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು ಕಬೀರ್ ಖಾನ್ ನಿರ್ದೇಶನಚಿತ್ರಕ್ಕಿದೆ. ಚಿತ್ರದ ಕಥಾ ಸಾರಾಂಶ ಹೀಗಿದೆ.

ಒಮರ್ ನ ಗೆಳೆಯರಾದ ಶಾಮ್ ಮತ್ತು ಮಾಯ ನ್ಯೂಯಾರ್ಕ್ ನಗರದಲ್ಲಿರುತ್ತಾರೆ. ಇವರೆಲ್ಲಾ ಪ್ರತಿ ದಿನ ಫೋನ್ ನಲ್ಲಿ ಒಬ್ಬರನ್ನೊಬ್ಬರು ಸಂಪರ್ಕಿಸುತ್ತಿರುತ್ತಾರೆ. ಒಂದು ದಿನ ಒಮರ್ ಸಹ ನ್ಯೂಯಾರ್ಕ್ ನಗರಕ್ಕೆ ಅಡಿಯಿಡುತ್ತ್ತಾನೆ. ಒಮರ್ ಆನಂದಕ್ಕೆ ಪಾರವೇ ಇಲ್ಲದಂತಾಗುತ್ತದೆ. ನ್ಯೂಯಾರ್ಕ್ ನಗರದ ಅಂದಚೆಂದಕ್ಕೆ ಬೆರಗಾಗುತ್ತಾನೆ.

ಇಷ್ಟು ದಿನ ಫೋನ್ ನಲ್ಲಿ ಗೆಳೆಯರು ಹೇಳುತ್ತಿದ್ದ ನ್ಯೂಯಾರ್ಕ್ ನಗರವನ್ನು ಕಣ್ಣಾರೆ ಕಂಡು ಕುಣಿದಾಡುತ್ತಾನೆ. ಮೂವರು ಗೆಳೆಯರ ನಡುವೆ ಅದೂ ಇದೂ ಹರಟೆ! ಗೆಳೆಯರೆಲ್ಲಾ ಖುಷಿಯಾಗಿ ಮಾತಿನಲ್ಲಿ ಮೈಮರೆತಿರುತ್ತಾರೆ, ಅಷ್ಟರಲ್ಲೇ ಧುತ್ತನೆ ಒಂದು ಪ್ರಮಾದ ಸಂಭಾವಿಸಿ ಬಿಡುತ್ತದೆ.

ಇಷ್ಟಕ್ಕೂ ಅವರಿಗೆ ಸಂಭವಿಸಿದ ಪ್ರಮಾದವಾದರೂ ಏನು? ಅದರಿಂದ ಅವರು ಪಾರಾಗುತ್ತಾರಾ ಅಥವಾ ಇಲ್ಲವೆ? ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು. ಜಾನ್(ಶಾಮ್), ಕತ್ರಿನಾ (ಮಾಯಾ), ನೀಲ್ (ಒಮರ್) ಪಾತ್ರಗಳ ನಡುವೆ ಕತೆ ಸಾಗುತ್ತದೆ. ಸಾಹಸ, ರೋಮಾಂಚಕಾರಿ ದೃಶ್ಯಗಳ ಈ ಚಿತ್ರ ಶುಕ್ರವಾರ (ಜೂನ್ 26) ತೆರೆಕಂಡಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada