»   »  ಗಾಢ ಚುಂಬನ ದೃಶ್ಯಕ್ಕೆ ಕರೀನಾ ಗ್ರೀನ್ ಸಿಗ್ನಲ್!

ಗಾಢ ಚುಂಬನ ದೃಶ್ಯಕ್ಕೆ ಕರೀನಾ ಗ್ರೀನ್ ಸಿಗ್ನಲ್!

Subscribe to Filmibeat Kannada

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತೆ ಕರೀನಾ ಕಪೂರ್ ತನ್ನ ಅಕ್ಕ ಕರೀಷ್ಮಾ ಕಪೂರ್ ಅವರ ದಾಖಲೆಯನ್ನು ಅಳಿಸಲು ಹೊರಟಿದ್ದಾರೆ! ಇಷ್ಟಕ್ಕೂ ಕರೀನಾ ಕಪೂರ್ ಅವರ ದಾಖಲೆಯಾದರೂ ಏನು? ಬಾಲಿವುಡ್ ನ ತಾಜಾ ಖಬರ್ ಪ್ರಕಾರ ಕರೀನಾ ಹೊಸ ಚುಂಬನ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.

'ರಾಜಾ ಹಿಂದೂಸ್ತಾನಿ' ಚಿತ್ರದಲ್ಲಿ ಕರೀಷ್ಮಾ ಅತ್ಯಧಿಕ ಸಮಯದ ಚುಂಬನ ಸನ್ನಿವೇಶದಲ್ಲಿ ಅಮೀರ್ ಖಾನ್ ರೊಂದಿಗೆ ನಟಿಸಿದ್ದರು! ಇದೀಗ ಈ ದಾಖಲೆಯನ್ನು ಮುರಿಯಲು ಕರೀನಾ ಕಪೂರ್ ನಿರ್ಧರಿಸಿದ್ದಾರೆ. ಇಷ್ಟಕ್ಕೂ ಅವರು ಯಾರಿಗೆ ಚುಂಬನ ನೀಡಲಿದ್ದಾರೆ?

ರೆನ್ಸಿಲ್ ಡಿ ಸಿಲ್ವಾ ನಿರ್ದೇಶಿಸುತ್ತಿರುವ 'ಕುರ್ಬಾನ್' ಚಿತ್ರದಲ್ಲಿ ಈಕೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕ ನಟ ಸೈಫ್ ಆಲಿಖಾನ್. ಇವರಿಬ್ಬರ ನಡುವಿನ ಗಾಢ ಚುಂಬನ ತೆರೆಯ ಮೇಲೆ ದೀರ್ಘ ಸಮಯ ಇರುತ್ತದಂತೆ! ಸರಿಸುಮಾರು ಎರಡು ನಿಮಿಷಗಳಿಗೂ ಅಧಿಕ ಸಮಯ ಇರಬಹುದು ಎನ್ನುತ್ತವೆ ಮೂಲಗಳು.

ನಿಜ ಜೀವನದ ಪ್ರಿಯಕರ ಸೈಫ್ ಆಲಿಖಾನ್ ಆದ ಕಾರಣ ಕರೀನಾ ಕಪೂರ್ ಈ ದೀರ್ಘ ಚುಂಬನ ಸನ್ನಿವೇಶಕ್ಕೆ ಒಪ್ಪಿಕೊಂಡಿದ್ದಾರಂತೆ. ಇಷ್ಟಕ್ಕೂ ಗಾಢ ಚುಂಬನ ದೃಶ್ಯವನ್ನು ನೋಡಬೇಕಾದರೆ ಸ್ವಲ್ಪ ಸಮಯ ಕಾಯಲೇ ಬೇಕು ಎನ್ನುತ್ತಾರೆ ಖುರ್ಬಾನ್ ಚಿತ್ರದ ನಿರ್ಮಾಪಕರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada