»   »  ನಿಶ್ಚಿತಾರ್ಥಕ್ಕೆ ಎರಡು ಗಂಟೆ ತಡವಾಗಿ ಬಂದ ಶಿಲ್ಪಾ

ನಿಶ್ಚಿತಾರ್ಥಕ್ಕೆ ಎರಡು ಗಂಟೆ ತಡವಾಗಿ ಬಂದ ಶಿಲ್ಪಾ

Subscribe to Filmibeat Kannada

ಶನಿವಾರ ತೀರಾ ಖಾಸಗಿಯಾಗಿ ನಡೆದ ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನಟಿ ಶಿಲ್ಪಾಶೆಟ್ಟಿ ತಡವಾಗಿ ಬಂದ ಸುದ್ದಿ ಇದೀಗ ಬಹಿರಂಗವಾಗಿದೆ! ನಿಶ್ಚಿತಾರ್ಥಕ್ಕೆ ಹೋದವರು ಈ ಸುದ್ದಿಯನ್ನು ಮಾಧ್ಯಮಗಳ ಕಿವಿಗೆ ಹಾಕಿದ್ದಾರೆ. ಬ್ಲಾಗ್ ನಲ್ಲೂ ತನ್ನ ನಿಶ್ಚಿತಾರ್ಥದ ಬಗ್ಗೆ ಶಿಲ್ಪಾ ಬರೆದುಕೊಂಡಿದ್ದಾರೆ.

ರಾಜ್ ಕುಂದ್ರಾ ಸ್ವಗೃಹದಲ್ಲಿ ನಿಶ್ಚಿತಾರ್ಥಕ್ಕೆ ಶನಿವಾರ ಸಂಜೆ 5.30 ಸಮಯ ನಿಗದಿಯಾಗಿತ್ತು. ಆದರೆ ರಾಜ್ ಕುಂದ್ರಾ ಅವರ ನಿವಾಸಕ್ಕೆ ಶಿಲ್ಪಾಶೆಟ್ಟಿ ಬಂದಿದ್ದು ಸಂಜೆ 7.30ಕ್ಕೆ. ಅಂದರೆ ಎರಡು ಗಂಟೆಗಳ ತಡವಾಗಿ. ತದನಂತರ ಶಿಲ್ಪಾಶೆಟ್ಟಿ ತನ್ನ ಭಾವಿ ಪತಿಯೊಂದಿಗೆ ಮಾಧ್ಯಮಗಳಿಗೆ ಛಾಯಾಚಿತ್ರ ತೆಗೆಯಲು ಅನುವು ಮಾಡಿಕೊಟ್ಟಿದ್ದು ಮಧ್ಯರಾತ್ರಿ ಬಳಿಕವಂತೆ!

ಶಿಲ್ಪಾಶೆಟ್ಟಿ ತನ್ನ ಬ್ಲಾಗಿನಲ್ಲೂ ತಮ್ಮ ನಿಶ್ಚಿತಾರ್ಥದ ಬಗ್ಗೆ ಬರೆದುಕೊಂಡಿದ್ದು, ನಿಶ್ಚಿತಾರ್ಥ ಕಾರ್ಯಕ್ರಮ ಒಂದು ರೀತಿ ಖುಷಿ ಮತ್ತೊಂದು ರೀತಿ ದುಃಖಕ್ಕೆ ಕಾರಣವಾಗಿದೆ ಎಂದಿದ್ದಾರೆ. ನನ್ನ ಬಾಳಿನಲ್ಲಿ ರಾಜ್ ಪ್ರವೇಶಿಸುತ್ತಿರುವುದು ಖುಷಿಗೆ ಕಾರಣವಾದರೆ, ತಂಗಿ ಶಮಿತಾ ನಿಶ್ಚಿತಾರ್ಥಕ್ಕೆ ಬರದೇ ಇದದ್ದೇ ದುಃಖಕ್ಕೆ ಕಾರಣವಾಗಿದೆಯಂತೆ.

ನಿಶ್ಚಿತಾರ್ಥ ಮುಂದೂಡಬೇಕಾದರೆ ಒಳ್ಳೆಯ ಮುಹೂರ್ತಕ್ಕೆ ದೀರ್ಘ ಸಮಯ ಕಾಯಬೇಕಾಗಿತ್ತು. ಹಾಗಾಗಿ ತರಾತುರಿಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಳ್ಳಬೇಕಾಯಿತು. ಈ ಎಲ್ಲಾ ವಿಚಾರಗಳು ಶಮಿತಾಗೆ ಗೊತ್ತಿಲ್ಲ. ಒಂದು ವಾರದ ಬಳಿಕ 'ಡಿಸೈರ್' ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದೇನೆ. ಐಪಿಎಲ್ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ರಾಜ್ ಕುಂದ್ರಾ ಲಂಡನ್ ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಶಿಲ್ಪಾಶೆಟ್ಟಿ ತನ್ನ ಬ್ಲಾಗಿನಲ್ಲಿ ಕಷ್ಟಸುಖ ತೋಡಿಕೊಂಡಿದ್ದಾರೆ.  ಶಿಲ್ಪಾಶೆಟ್ಟಿ ನಿಶ್ಚಿತಾರ್ಥದ ಪೋಟೋಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada