ಶಾಕಾಹಾರಕ್ಕೆ ವಿವೇಕ್ ಒಬೆರಾಯ್ ಕುಟುಂಬ
ವಿವೇಕ್ ಒಬೆರಾಯ್ ನಾಯಕನಟನಾಗಿ ಅಭಿನಯಿಸಿರುವ 'ಪ್ರಿನ್ಸ್' ಚಿತ್ರಕ್ಕೆ ಉತ್ತ್ತರ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬಗ್ಗೆ ವಿವೇಕ್ ಪೋಷಕರು ಖುಷಿಯಾಗಿದ್ದಾರಂತೆ. ವಿವೇಕ್ ರ ಅಪ್ಪ ಸುರೇಶ್ ಹಾಗೂ ಅವರ ಅಮ್ಮ ಯಶೋಧರಾ ಮಗನ ಗೆಲುವನ್ನು ಕಂಡು ಸಂಭ್ರಮಿಸುತ್ತಿದ್ದಾರೆ.
ಈ ಸಂತಸದಲ್ಲೆ ಅವರು ಮತ್ತೊಂದು ದೃಢ ನಿರ್ಧಾರವನ್ನು ಕೈಗೊಂಡಿದ್ದಾರೆ. ಅದೇನೆಂದರೆ ವಿವೇಕ್ ರ ಇಡೀ ಕುಟುಂಬ ಶಾಕಾಹಾರಕ್ಕೆ ಹೊರಳಿರುವುದು. ಮುಖ್ಯವಾಗಿ ವಿವೇಕ್ ರ ತಾಯಿ ಯಶೋಧರಾ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ಕೆಲಕಾಲ ಸಿಹಿತಿಂಡಿಗಳಿಂದ ದೂರವಾಗಲಿದ್ದಾರಂತೆ.
ಇಷ್ಟೆಲ್ಲಾ ಬದಲಾವಣೆಗೆ ಕಾರಣ ಆರೋಗ್ಯ. ಮಾಂಸಾಹಾರಕ್ಕಿಂತ ಶಾಕಾಹಾರವೇ ಉತ್ತಮ ಎಂಬುದು ಅವರ ಈ ನಿರ್ಧಾರಕ್ಕೆ ಕಾರಣವಂತೆ. ಒಟ್ಟಿನಲ್ಲಿ ವಿವೇಕ್ ಇಡೀ ಕುಟುಂಬ ಸಸ್ಯಾಹಾರಕ್ಕೆ ಹೊರಳಿರುವುದು ಬಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ವಿವೇಕ್ ಒಬೆರಾಯ್ ಸಸ್ಯಾಹಾರ ಶಾಕಾಹಾರ ಬಾಲಿವುಡ್ ಆರೋಗ್ಯ vivek oberoi vegetarian movie prince bollywood health


Click it and Unblock the Notifications