For Quick Alerts
  ALLOW NOTIFICATIONS  
  For Daily Alerts

  ರಜತ ಕಮಲವನ್ನೂ ಬಾಚಿದ ಲಾಸ್ಟ್ ಅಂಡ್ ಫೌಂಡ್

  By Prasad
  |

  ಮುಂಬೈನ ಯುವ ಪ್ರತಿಭಾವಂತ ಕನ್ನಡಿಗ ಚಿತ್ರಲೇಖಕ, ದಿಗ್ದರ್ಶಕ, ನಿರ್ಮಾಪಕ ಹರ್ಷವರ್ಧನ್ ಜಿ. ಕುಲಕರ್ಣಿಯವರು ನಿರ್ಮಿಸಿ ನಿರ್ದೇಶಿಸಿರುವ 'ಲಾಸ್ಟ್ ಅಂಡ್ ಫೌಂಡ್' ಕಿರುಚಿತ್ರ 56ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಜತ ಕಮಲ ಪ್ರಶಸ್ತಿಗೆ ಭಾಜನವಾಗಿದೆ. ನಾನ್-ಫೀಚರ್ ಫಿಲ್ಮ್ ವಿಭಾಗಯಲ್ಲಿ (ಟೂರಿಸಂ, ಎಕ್ಸ್‌ಪೋರ್ಟ್, ಕ್ರ್ಯಾಫ್ಟ್ಸ್, ಇಂಡಸ್ಟ್ರೀ ಮುಂ.) ಅತ್ಯುತ್ತಮ ಪ್ರೊಮೋಶನಲ್ ಫಿಲ್ಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  ಮಹಾರಾಷ್ಟ್ರ ಪ್ರವಾಸೋದ್ಯಮದ ಪ್ರಚಾರಾರ್ಥ ನಿರ್ಮಿಸಿದ ಈ ಚಿತ್ರ ಜಾಹೀರಾತಿನ ಉದ್ದೇಶದಿಂದ ನಿರ್ಮಾಣಗೊಂಡಿದ್ದರೂ ಇದರಲ್ಲಿ ಅಪೂರ್ವ ಕಲಾತ್ಮಕತೆ ಇದೆ, ವಸ್ತು ನಿರೂಪಣೆಯಲ್ಲಿ ವಿನೂತನ ಆವಿಷ್ಕರಣವಿದೆ. ಪ್ರವಾಸಿಗಳಿಗೆ ಮಹಾರಾಷ್ಟ್ರದ ಸಮುದ್ರತೀರಗಳೆಡೆ ಆಕರ್ಷಿಸಲು ಒಂದು ಹಳೆಯ ಬಾಟಲ್‌ನ ಪ್ರವಾಸದ ಕಥಾನಕವನ್ನು ಒಳಗೊಂಡ ವಿಧಾನ ಅಪರೂಪದ್ದಾಗಿದೆ.

  ಮುಂಬೈ ಕಡಲ ತೀರದಲ್ಲಿ ಅನಾಥವಾಗಿ ಬಿದ್ದಿದ್ದ ಶತಮಾನದಷ್ಟು ಹಳೆಯ ಬಾಟಲಿಯೊಂದು ವ್ಯಕ್ತಿಯಿಂದ ವ್ಯಕ್ತಿಗೆ ದಾಟುತ್ತ, ಮಾನವನ ದುರಾಸೆ, ವಾಂಛೆ, ಪ್ರೀತಿ, ಆಶಾವಾದಿತನಗಳಿಗೆ ಸಾಕ್ಷಿಯಾಗುವ ಕಥೆಯುಳ್ಳ 'Lost and Found' ಚಲನಚಿತ್ರ ಚಿತ್ರಕಥೆಯಲ್ಲಿನ ನವಿರುತನದಿಂದ, ಅದ್ಭುತ ದಿಗ್ದರ್ಶನದಿಂದ ವಿಶ್ವದಾದ್ಯಂತ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

  ಕಿರುತೆರೆಯ ಚಿತ್ರಪ್ರಪಂಚದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹೆಸರು ಮಾಡಿರುವ ಹರ್ಷವರ್ಧನ್‌ರ ಕಿರು ಚಿತ್ರ ಲಾಸ್ಟ್ ಅಂಡ್ ಫೌಂಡ್ ಡಿಸೆಂಬರ 2008ರಲ್ಲಿ ನಡೆದ ಶ್ರೀಲಂಕಾದ ಯುಥ್ ನ್ಯೂ ವೇವ್- ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಶ್ರೇಷ್ಠ ಚಿತ್ರವೆಂದು ಜ್ಯೂರಿಗಳಿಂದ ಪರಿಗಣಿತವಾಗಿತ್ತು. ಅಷ್ಟೇ ಅಲ್ಲ, ಫೆಸ್ಟಿವಲ್‌ನಲ್ಲಿ ಅತಿಹೆಚ್ಚು ಪ್ರೇಕ್ಷಕರು ಮೆಚ್ಚಿದ ಪಾಪ್ಯುಲರ್ ಫಿಲ್ಮ್‌ಗೆ ಇರುವ ವಿಶೇಷ ಬಹುಮಾನವನ್ನೂ ಗಳಿಸಿತ್ತು. ಈ ಕಿರುಚಿತ್ರವು ಈ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ (ಮುಂಬೈ, ನ್ಯೂಯಾರ್ಕ್, ಗೋವಾ, ಕಲಕತ್ತಾ, ಲಂಡನ್..) ಪ್ರದರ್ಶಿತವಾಗಿದ್ದು ಎಲ್ಲೆಡೆ ಅಭೂತಪೂರ್ವ ಮೆಚ್ಚುಗೆ ಪಡೆದಿದೆ. ಮುಂಬೈಯಲ್ಲಿ ನಡೆದ ಐಡಿಪಿಎ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಚಿತ್ರಕ್ಕೆ ನಾಲ್ಕು ಸ್ವರ್ಣ ಹಾಗೂ ಒಂದು ರಜತ ಪದಕಗಳು ದೊರೆತಿವೆ.

  ಹರ್ಷವರ್ಧನ ಅವರು ದಟ್ಸ್ ಕನ್ನಡ 'ಜೀವನ ಮತ್ತು ಸಾಹಿತ್ಯ' ಅಂಕಣಕಾರ ಡಾ. ಜೀವಿ ಕುಲಕರ್ಣಿ ಅವರ ಎರಡನೆಯ ಮಗ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X