ಒಂದೇ ಟೇಕ್‌ನಲ್ಲಿ ರಣಬೀರ್ ಕಿಸ್ಸಿಂಗ್ ಸೀನ್ ಓಕೆ
ಬಾಲಿವುಡ್ ಸೆಕ್ಸಿಯಸ್ಟ್ ಬ್ಯಾಚುಲರ್ ಎಂದೇ ಖ್ಯಾತನಾಗಿರುವ ರಣಬೀರ್ ಕಪೂರ್ ಈಗ ಪಕ್ಕಾ ಅನುಭವಸ್ಥ. ಈ ಹಿಂದೆಲ್ಲಾ ಕಿಸ್ಸಿಂಗ್ ಸೀನ್‌ಗಳಿಗೆ ಎರಡು ಮೂರು ಟೇಕ್‌ಗಳನ್ನು ತೆಗೆದರೂ ಓಕೆ ಆಗುತ್ತಿರಲಿಲ್ಲ. ಈಗ ಒಂದೇ ಟೇಕ್‌ಗೆ ಕಿಸ್ಸಿಂಗ್ ಸೀನ್ ಓಕೆ ಮಾಡಿದ್ದಾನೆ. ರಣಬೀರ್‌ನನ್ನು ಎಕ್ಸೀಪೀರಿಯನ್ಸ್ ಎನ್ನುವುದಕ್ಕಿಂತಲೂ ಎಕ್ಸ್‌ಫರ್ಟ್ ಎಂದರೆ ಸೂಕ್ತವೇನೋ!
ಅಂದಹಾಗೆ ಇದು 'ರಾಕ್‌ಸ್ಟಾರ್' ಚಿತ್ರದ ಶೂಟಿಂಗ್. ಚಿತ್ರದ ನಾಯಕಿ ನರ್ಗಿಸ್ ಫಖ್ರಿ. ಕಿಸ್ಸಿಂಗ್ ಸೀನ್‌ಗೆ ಇಷ್ಟೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದೂ ಒಂಥರಾ ಆಕ್ಷನ್ ಸೀನ್ ಇದ್ದಂತೆ. ಒಂದೇ ಟೇಕ್‌ನಲ್ಲಿ ಹಿರೋಯಿನ್ ತುಟಿಗೆ ತುಟಿ ಒತ್ತಿಬಿಟ್ಟರೆ ಮುಗಿಯಿತು ಎಂದಿದ್ದಾನೆ!
ರಣಬೀರ್ ತಮ್ಮ ಲಿಪ್‌ಲಾಕ್ ಸನ್ನಿವೇಶಗಳ ಬಗ್ಗೆ ಮಾತನಾಡುತ್ತಾ, ಕಿಸ್ಸಿಂಗ್ ಸೀನ್‌ಗಳನ್ನು ಏಕಾಂತದಲ್ಲೇನು ಚಿತ್ರೀಕರಿಸುವುದಿಲ್ಲ. ಅಲ್ಲಿ ನೂರಾರು ಜನ ನೋಡುತ್ತಿರುತ್ತಾರೆ. ಡೈರೆಕ್ಟರ್ ಆಕ್ಷನ್ ಎನ್ನುತ್ತಿದ್ದಂತೆ ಚುಂಬಿಸಬೇಕು. ಈ ರೀತಿಯ ದೃಶ್ಯಗಳಿಗೆಲ್ಲಾ ನಾವೇನು ಮಾನಸಿಕವಾಗಿ ಸಿದ್ಧರಾಗಿರಲ್ಲ. ಇದೊಂದು ತರಹ ಯಾಂತ್ರಿಕ ಕೆಲಸವಿದ್ದಂತೆ.
ಅಂದಹಾಗೆ ರಣಬೀರ್ ಈ ರೀತಿಯ ಲಿಪ್‌ಲಾಕ್ ಸೀನ್‌ಗಳಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಬಚ್‌ನಾ ಏ ಹಸೀನೋ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ, ಅಂಜನಾ ಅಂಜಾನಿ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ಹಾಗೂ ಅಮೆರಿಕಾ ತಾರೆ ಸಾರ್‍ಹ ಥಾಂಪ್ಸನ್ ಜೊತೆ ರಾಜನೀತಿ ಚಿತ್ರಗಳಲ್ಲಿ ಅಧರಾಮೃತ ಸವಿದಿದ್ದಾನೆ. (ಏಜೆನ್ಸೀಸ್)


Click it and Unblock the Notifications











