»   » ಸೋನಾಲಿ ಕುಲಕರ್ಣಿಗೆ ತಾಳಿಭಾಗ್ಯ ಕರುಣಿಸಿದ ನಚಿಕೇತ!

ಸೋನಾಲಿ ಕುಲಕರ್ಣಿಗೆ ತಾಳಿಭಾಗ್ಯ ಕರುಣಿಸಿದ ನಚಿಕೇತ!

Subscribe to Filmibeat Kannada

ಸೈಫ್ ಅಲಿ ಖಾನ್ ಮಾಜಿ ಪ್ರೇಯಸಿ ಸೋನಾಲಿ ಕುಲಕರ್ಣಿ ರಹಸ್ಯವಾಗಿ ಮದುವೆಯಾಗಿದ್ದಾರೆ. ಕರೀನಾ ಕಪೂರ್ ಜೊತೆ ಸೈಫ್ ಕಣ್ಣಾಮುಚ್ಚಾಲೆ ಆಡುತ್ತಿರುವುದನ್ನು ಸಹಿಸಲಾಗದೆ ನಚಿಕೇತ ಎಂಬ ಹುಡುಗನಿಗೆ ಕೊರಳೊಡ್ಡಿದ್ದಾರೆ. ಸೋನಾಲಿ ಕುಲಕರ್ಣಿಗೆ ನಚಿಕೇತ ತಾಳಿಭಾಗ್ಯ ಕರುಣಿಸಿದ್ದಾನೆ. ಈ ಮೂಲಕ ಸೈಫ್ ಮೇಲೆ ಸೋನಾಲಿ ಸೇಡಿನ ಬೆಂಕಿ ತಣ್ಣಗಾಗಿದೆ.

'ದಿಲ್ ಛಾಹ್ತಾ ಹೈ' ಬೆಡಗಿ ಸೋನಾಲಿ ಕುಲಕರ್ಣಿ ಮದುವೆ ನಚಿಕೇತ ಪಂಟವೈದ್ಯ ಎಂಬ ಹುಡುಗನ ಜೊತೆ ರಹಸ್ಯವಾಗಿ ನಡೆದುಹೋಗಿದೆ. ಫಾಕ್ಸ್ ಟೆಲಿವಿಷನ್ ಸ್ಟುಡಿಯೋದ ವ್ಯವಸ್ಥಾಪಕ ನಿರ್ದೇಶಕನಾಗಿ ನಚಿಕೇತ ಕಾರ್ಯನಿರ್ವಹಿಸುತ್ತಿದ್ದಾನೆ. ಇವರಿಬ್ಬರ ಮದುವೆ ಪುಣೆಯಲ್ಲಿ ಬಾಜಾ ಬಜಂತ್ರಿಗಳಿಲ್ಲದೆ ನೆರೆವೇರಿದೆ.

ಸೋನಾಲಿ ಮದುವೆಯಾಗುತ್ತಿರುವುದು ಇದೇ ಮೊದಲಲ್ಲ ಬಿಡಿ. ಈಗಾಗಲೆ ಈಕೆ ಮರಾಠಿ ನಿರ್ದೇಶಕ ಚಂದ್ರಕಾಂತ್ ಜೊತೆ ಮದುವೆಯಾಗಿತ್ತು. ಬಳಿಕ ಆ ಮದುವೆ ಮೂರು ದಿನಕ್ಕೆ ಮುರಿದು ಬಿದ್ದಿತ್ತು. ಆಗ ಸೋನಾಲಿ ಕೈಗೆ ಸಿಕ್ಕಿದ್ದೇ ಸೈಫ್ ಅಲಿ ಖಾನ್. ಆದರೆ ಸೈಫ್ ತೆಕ್ಕೆಗೆ ಕರೀನಾ ಬಂದ ಮೇಲೆ ಸೋನಾಲಿ ಸೈಡಿಗೆ ಸರಿಯಬೇಕಾಯಿತು.

ಅಂದಹಾಗೆ ಈ ನಚಿಕೇತ ಕಮ್ಮಿ ಆಸಾಮಿಯೇನಲ್ಲ. ಅನಿವಾಸಿ ಭಾರತೀಯನಾದ ಈತ ಇಡೀ ವಿಶ್ವದಲ್ಲಿ ಹಬ್ಬಿರುವ ಫಾಕ್ಸ್ ನೆಟ್ ವರ್ಕ್ ನ ವ್ಯವಸ್ಥಾಪಕ ನಿರ್ದೇಶಕ. ಒಟ್ಟಿನಲ್ಲಿ ಇಬರಿಬ್ಬರ ಮದುವೆ ಮಹಾರಾಷ್ಟ್ರದ ವಿಧಿ ವಿಧನಾಗಳಂತೆ ಗುಟ್ಟಾಗಿ ನಡೆದಿದೆ. ಮಿಷನ್ ಕಾಶ್ಮೀರ್, ದಿಲ್ ವಿಲ್ ಪ್ಯಾರ್ ವ್ಯಾರ್, ಟ್ಯಾಕ್ಸಿ ನಂಬರ್ 9211, ಡರ್ ನಾ ಜರೂರಿ ಹೈ ಇವು ಸೋನಾಲಿ ನಟಿಸಿದ ಹಿಂದಿ ಚಿತ್ರಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada