»   »  ಸಲ್ಮಾನ್ ಖಾನ್ ಟವಲ್ ಗೆ ರು.1.42 ಲಕ್ಷ!

ಸಲ್ಮಾನ್ ಖಾನ್ ಟವಲ್ ಗೆ ರು.1.42 ಲಕ್ಷ!

Subscribe to Filmibeat Kannada

ಆನ್ ಲೈನ್ ಹರಾಜಿನಲ್ಲಿ ಸಲ್ಮಾನ್ ಖಾನ್ ಟವಲ್ ಗೆ ರು.1.42 ಲಕ್ಷ ಬೆಲೆ ಕಟ್ಟಲಾಗಿದೆ. ಸಲ್ಲು ಹಸ್ತಾಕ್ಷರವಿರುವ ಈ ಟವಲನ್ನು ಹಾಂಕಾಂಗ್ ನ ಅಭಿಮಾನಿಯೊಬ್ಬ್ಬ ಹರಾಜಿನಲ್ಲಿ ದುಬಾರಿ ಬೆಲೆ ಕಟ್ಟಿದ್ದಾನೆ. ಈ ಹರಾಜು ಪ್ರಕ್ರಿಯೆ ಆ.30ರವೆಗೂ ನಡೆಯಲಿದ್ದು ಟವಲ್ ನ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇದೆ.

ಸ್ಟಾರ್ ಪ್ಲಸ್ ಟಿವಿ ವಾಹಿನಿ ಸಹಯೋಗದಲ್ಲಿ ಆನ್ ಲೈನ್ ಹರಾಜು ಸಂಸ್ಥೆ eBay ಈ ಟವಲನ್ನು ಮಾರಾಟಕ್ಕಿಟ್ಟಿದೆ. ಹರಾಜಿನಲ್ಲಿ ಬಂದ ಹಣವನ್ನು ಸ್ನೇಹ ಸೊಸೈಟಿ ಎಂಬ ಸರಕಾರೇತರ ಸಂಸ್ಥೆಗೆ ನೀಡಲು ಉದ್ದೇಶಿಸಲಾಗಿದೆ. ಸ್ಟಾರ್ ಪ್ಲಸ್ ನಲ್ಲಿ ಫಾರಾ ಖಾನ್ ಅವರ 'ತೇರೆ ಮೇರೆ ಬೀಚ್ ಮೆ' ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳ ವಸ್ತುಗಳನ್ನು eBay ಮೂಲಕ ಹರಾಜಿಗಿಡಲಾಗುತ್ತದೆ.

ತೇರೆ ಮೇರೆ ಬೀಚ್ ಮೆ ಕಾರ್ಯಕ್ರಮದ ಮೊದಲ ಸೆಲಿಬ್ರಿಟಿಯಾಗಿ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಹಳದಿ ಬಣ್ಣದ ಈ ಟವಲನ್ನು 'ಮುಜ್ ಸೆ ಶಾದಿ ಕರೋಗಿ' ಚಿತ್ರದ ಹಾಡೊಂದರಲ್ಲಿ ಸಲ್ಮಾನ್ ಖಾನ್ ಬಳಸಿದ್ದರು. ಈ ಹಾಡಿಗೆ ನೃತ್ಯ ಸಂಯೋಜನೆಯನ್ನು ಫರಾ ಖಾನ ಮಾಡಿದ್ದಿದ್ದು ವಿಶೇಷ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada