»   »  ಲಲಿತ್ ಮೋದಿಯಾಗಿ ಕಿಂಗ್ ಖಾನ್ ಶಾರುಖ್!

ಲಲಿತ್ ಮೋದಿಯಾಗಿ ಕಿಂಗ್ ಖಾನ್ ಶಾರುಖ್!

Posted By:
Subscribe to Filmibeat Kannada

ಐಪಿಎಲ್ ಪಂದ್ಯಾವಳಿಗಳ ಮೂಲಕ ಕ್ರಿಕೆಟ್ ನ ಸ್ವರೂಪವನ್ನು ಬದಲಾಯಿಸಿದ ಘನತೆ ಲಲಿತ್ ಮೋದಿಗೆ ಸಲ್ಲುತ್ತದೆ. ಚುನಾವಣೆ...ಭದ್ರತಾ ಕಾರಣಗಳಿಂದ ಐಪಿಎಲ್ ಸೀಜನ್ 2ನ್ನು 17 ದಿನಗಳ ಕಾಲವಧಿಯಲ್ಲಿ ದಕ್ಷಿಣ ಆಫ್ರಿಕಾಗೆ ವರ್ಗಾಯಿಸಿದ ಶ್ರೇಯಸ್ಸು ಅವರಿಗೇ ಸಲ್ಲುತ್ತದೆ. ಕ್ರಿಕೆಟ್ ನಲ್ಲಿ ಬದಲಾವಣೆಯ ಗಾಳಿಗೆ ಕಾರಣರಾದ ಲಲಿತ್ ಮೋದಿ ಜೀವನ ಚರಿತ್ರೆ ಹಿಂದಿ ಬೆಳ್ಳಿತೆರೆಗೆ ದಾಂಗುಡಿಯಿಡುವ ಸಿದ್ಧತೆಯಲ್ಲಿದೆ. ಶೈಲೇಂದ್ರ ಸಿಂಗ್ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ.

ಶೈಲೇಂದ್ರ ಸಿಂಗ್ ಮಾತನಾಡುತ್ತಾ, ಒಂದು ವರ್ಷ ಕಾಲ ಲಲಿತ್ ಮೋದಿ ಕುರಿತು ಸಂಶೋಧನೆ ಮಾಡಿದ್ದೇವೆ. ಅವರ ಬಾಲ್ಯ ಜೀವನ... ಯೌವನ...ಹೀಗೆ ಬಹಳಷ್ಟು ಅಂಶಗಳನ್ನು ಸಂಗ್ರಹಿಸಿದ್ದೇವೆ. ಅವರ ಜೀವನ ಬಗ್ಗೆ ಅವರಿಗೇ ಗೊತ್ತಿಲ್ಲದಷ್ಟು ಅಂಶಗಳನ್ನು ತಿಳಿದುಕೊಂಡಿದ್ದೇವೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ ಎನ್ನುತ್ತಾರೆ.

ಇತ್ತೀಚೆಗೆ ಚಾಂಪಿಯನ್ಸ್ ಲೀಗ್ ಸಂದರ್ಭದಲ್ಲಿ ಲಲಿತ್ ಮೋದಿಯೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ತಮ್ಮ ಜೀವನ ಕತೆಯನ್ನು ತೆರೆಗೆ ತರುತ್ತಿರುವುದರ ಬಗ್ಗೆ ಅವರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅವರ ಪಾತ್ರವನ್ನು ಶಾರುಖ್ ಖಾನ್ ಗೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಭಾವಿಸಿದ್ದೇವೆ. ಕತೆಯನ್ನು ಅವರಿಗೆ ಈಗಾಗಲೇ ಹೇಳಿದ್ದೇವೆ. ಚಿತ್ರದಲ್ಲಿ ಅವರು ನಟಿಸಲು ಒಪ್ಪಿದರೆ ಕೂಡಲೆ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಇಲ್ಲದಿದ್ದರೆ ಶಾಹಿದ್ ಕಪೂರ್, ಇರ್ಫಾನ್ ಖಾನ್ ಇಬ್ಬರಲ್ಲಿ ಒಬ್ಬರನ್ನು ಮುಖ್ಯಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಿದ್ದೇವೆ ಎನ್ನುತ್ತಾರೆ ಶೈಲೇಂದ್ರ ಸಿಂಗ್.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X