»   »  ಅಂತಿಂತ ಹೆಣ್ಣು ನಾನಲ್ಲ ಎನ್ನುತ್ತಿರುವ ತ್ರಿಶಾ

ಅಂತಿಂತ ಹೆಣ್ಣು ನಾನಲ್ಲ ಎನ್ನುತ್ತಿರುವ ತ್ರಿಶಾ

Subscribe to Filmibeat Kannada
Trisha
ಕನ್ನಡ ನಿರ್ಮಾಪಕರು ಬೀಸಿದ ಬಲೆಗೆ ನಟಿ ತ್ರಿಶಾ ಬೀಳಲಿಲ್ಲ ಎಂಬುದು ನಿಜ. ಆದರೆ ಈ ಬಂಗಾರದ ಮೀನಿಗೆ ತಮಿಳು, ತೆಲುಗು ಚಿತ್ರರಂಗದಲ್ಲಿ ಬಲು ಬೇಡಿಕೆ ಇದೆ. ಸದಾ ಉತ್ಸಾಹದಿಂದ ಪುಟಿಯುವ ತ್ರಿಶಾ ತಮ್ಮ ಆರೋಗ್ಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

''ಬೆಳಗಿನಿಂದ ಸಂಜೆಯ ತನಕ ಕತ್ತೆ ತರಹ ದುಡಿದು ನೇರವಾಗಿ ಮನೆಗೆ ಬರುವುದು ನನ್ನಿಂದಾಗದ ಕೆಲಸ. ಹೆಣ್ಣು ಮಕ್ಕಳೆಂದರೆ ಹಾಗಿರಬೇಕು, ಹೀಗಿರಬೇಕು ಎಂದು ಎಲ್ಲರೂ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಆದರೆ ಈ ವಿಷಯದಲ್ಲಿ ನಾನು ತುಂಬಾ ಲಕ್ಕಿ. ನಮ್ಮ ತಂದೆ ತಾಯಿ ಯಾವತ್ತೂ ಈ ರೀತಿಯ ನಿರ್ಬಂಧ ಹೇರಿಲ್ಲ. ಪಾರ್ಟಿ, ಪಬ್, ಫ್ರೆಂಡ್ಸ್ ...ಎಂದು ಈ ವಯಸ್ಸಿನಲ್ಲಿ ಅಲ್ಲದೆ ಮತ್ಯಾವಾಗ ಸಂತೋಷವಾಗಿ ಕಳೆಯಬೇಕು ಹೇಳಿ? ಎಂದು ಪ್ರಶ್ನಿಸುತ್ತಾರೆ ತ್ರಿಶಾ.

ನನಗೆ ಸ್ವಲ್ಪ ಸಮಯ ಸಿಕ್ಕರೂ ಸಾಕು...ಹೊಸ ಉತ್ಸಾಹಕ್ಕಾಗಿ ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ನಾಯಿ ಮರಿಯೊಂದಿಗೆ ಆಟ ಆಡಿದರೂ ಸಾಕು ಮನಸು ಹಾಯ್ ಎನ್ನಿಸುತ್ತದೆ. ನನ್ನ ಸಂತೋಷ ಎಲ್ಲಿದಿಯೋ ನನಗೆ ಗೊತ್ತು. ಅದಕ್ಕಾಗಿ ಸಮಯವನ್ನು ಮೀಸಲಾಗಿಡುತ್ತೇನೆ. ಅಷ್ಟೇ ಹೊರತು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಹುಡುಗಿ ನಾನಲ್ಲ ಎನ್ನುತ್ತಾರೆ ಈ ಶತಮಾನದ ಸ್ವಾಭಿಮಾನಿ ಹುಡುಗಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಡ್ಯಾನಿ ಬಾಯ್ಲ್ ನಿರ್ದೇಶನದಲ್ಲಿ ಐಶ್ವರ್ಯ ರೈ?
ಐಶ್ವರ್ಯ ರೈ ತಾರಾ ವರ್ಚಸ್ಸು ಒಂದಿನಿತು ಕುಗ್ಗಿಲ್ಲ!
ಸಲ್ಮಾನ್ ಖಾನ್ ನನ್ನ ಸಹ ನಟ ಮಾತ್ರ: ಅಸಿನ್
ನಯನ ತಾರಾ ಸೊಂಟದ ವಿಷಯ ಬೇಡವೊ ಶಿಷ್ಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada