»   »  ಕ್ರಿಸ್ಮಸ್ ಹಬ್ಬಕ್ಕೆ ಅಮೀರ್ ಅಭಿನಯದ ತ್ರಿ ಇಡಿಯಟ್ಸ್

ಕ್ರಿಸ್ಮಸ್ ಹಬ್ಬಕ್ಕೆ ಅಮೀರ್ ಅಭಿನಯದ ತ್ರಿ ಇಡಿಯಟ್ಸ್

Subscribe to Filmibeat Kannada

ಅಮೀರ್ ಖಾನ್ ನಾಯಕ ನಟನಾಗಿ ಅಭಿನಯಿಸಿರುವ ಬಾಲಿವುಡ್ ಚಿತ್ರ 'ತ್ರೀ ಇಡಿಯಟ್ಸ್'. ಕರೀನಾ ಕಪೂರ್ ಚಿತ್ರದ ನಾಯಕಿ. ಮಾಧವನ್, ಶರ್ಮಾನ್ ಜೋಶಿ ಮುಖ್ಯಪಾತ್ರದಲ್ಲಿರುವ ಚಿತ್ರ. ವಿಧುವಿನೋದ್ ಚೋಪ್ರಾ ನಿರ್ಮಿಸಿರುವ ಈ ಚಿತ್ರವನ್ನು ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ.

ಚೇತನ್ ಭಗತ್ ಅವರ 'ಫೈವ್ ಪಾಯಿಂಟ್ ಸಮ್ ವನ್' ಎಂಬ ಕೃತಿ ಆಧಾರವಾಗಿ ತ್ರಿ ಇಡಿಯಟ್ಸ್ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬಕ್ಕೆ ಈ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಆ ದಿನಾಂಕದಂದು ಚಿತ್ರ ಬಿಡುಗಡೆಯಾಗುವುದು ಅನುಮಾನ ಎಂದು ಬಾಲಿವುಡ್ ನಲ್ಲಿ ಕೆಲವರು ಪ್ರಚಾರ ಮಾಡುತ್ತ್ತಿದ್ದಾರೆ.

ಈ ಬಗ್ಗೆ ಅಮೀರ್ ಖಾನ್ ಮಾತನಾಡುತ್ತಾ, ಈ ಹಿಂದಿನ ನನ್ನ ಚಿತ್ರಗಳಾದ 'ತಾರೆ ಜಮೀನ್ ಪರ್' ಮತ್ತು 'ಗಜನಿ' ಚಿತ್ರಗಳು ಅದೇ ದಿನಾಂಕದಂದು ಬಿಡುಗಡೆಯಾಗಿ ಭರ್ಜರಿ ದಾಖಲೆ ನಿರ್ಮಿಸಿದವು. ಹಾಗಾಗಿ ಏನೇ ಆದರೂ ಆ ದಿನಾಂಕದಂದೇ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಅಂದುಕೊಂಡ ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಮುಗಿಸುತ್ತೇವೆ. ಡಿಸೆಂಬರ್ 25ಕ್ಕೆ ಸರಿಯಾಗಿ 'ತ್ರೀ ಇಡಿಯಟ್ಸ್ 'ಚಿತ್ರ ಪ್ರೇಕ್ಷಕರ ಮುಂದಿರುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada