»   » ಐಶ್ವರ್ಯ ರೈ ಮೀರಿಸಿದ ಕರೀನಾ ಕಪೂರ್ ಸಂಭಾವನೆ

ಐಶ್ವರ್ಯ ರೈ ಮೀರಿಸಿದ ಕರೀನಾ ಕಪೂರ್ ಸಂಭಾವನೆ

Posted By:
Subscribe to Filmibeat Kannada

ಸಂಭಾವನೆ ವಿಚಾರದಲ್ಲಿ ಬಾಲಿವುಡ್ ತಾರೆ ಕರೀನಾ ಕಪೂರ್ ಎಲ್ಲ ಸಿನಿಮಾ ನಟಿಯರನ್ನೂ ಹಿಂದಿಕ್ಕಿದ್ದಾರೆ. ಭಾರತದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ನಟಿ ಮಣಿಯಾಗಿ ಕರೀನಾ ಹೊರಹೊಮ್ಮಿದ್ದಾರೆ. ಈಕೆಯ ಸಂಭಾವನೆ ಐಶ್ವರ್ಯ ರೈ ಸಂಭಾವನೆಯನ್ನು ಮೀರಿಸಿರುವುದು ವಿಶೇಷ.

2011ನೇ ವರ್ಷ ಕರೀನಾ ಪಾಲಿಗೆ ಅದೃಷ್ಟದ ವರ್ಷ ಎಂದೇ ಹೇಳಬೇಕು. ಕರೀನಾ ಅಭಿನಯದ ಬಾಡಿಗಾರ್ಡ್, ರಾ.ಒನ್ ಚಿತ್ರಗಳು ಬಾಕ್ಸಾಫೀಸನ್ನು ಚಿಂದಿ ಚಿತ್ರಾನ್ನ ಮಾಡಿಬಿಟ್ಟವು. ಆ ಚಿತ್ರಗಳು ಯಶಸ್ವಿಯಾಗಿದ್ದೇ ತಡ ಕರೀನಾ ಸಂಭಾವನೆಯ ಗ್ರಾಫಿನ ಚಿತ್ರಣವೇ ಬದಲಾಯಿತು.

ಈಗ ಚಿತ್ರವೊಂದಕ್ಕೆ ಕರೀನಾ ಪಡೆಯುತ್ತಿರುವ ಸಂಭಾವನೆ ಈಗ ರು.7ಕೋಟಿ. ಮಧುರ್ ಭಂಡಾರಕರ್ ಅವರ 'ಹೀರೋಯಿನ್' ಚಿತ್ರಕ್ಕೆ ಕರೀನಾ ಈ ಪಾಟಿ ದುಡ್ಡನ್ನು ಎಣಿಸಿದ್ದಾರೆ. ರಜನಿಕಾಂತ್ ಜೊತೆಗಿನ 'ರೋಬೋ' ಚಿತ್ರಕ್ಕಾಗಿ ಐಶ್ವರ್ಯ ರೈ ಕೇವಲ ರು.6 ಕೋಟಿ ಸಂಭಾವನೆ ಪಡೆದಿದ್ದರು. ಈಗ ಅವರಿಗಿಂತಲೂ ಒಂದು ಕೋಟಿ ಜಾಸ್ತಿ ಎಣಿಸಿದ್ದಾರೆ ಕರೀನಾ. (ಏಜೆನ್ಸೀಸ್)

English summary
The year 2011 has been a very successful year for actress Kareena Kapoor, who has got two Blockbuster hits to her credits in 2011. Babo starrer films like Bodyguard and Ra.One have raked in over Rs 100 crore each. Now, the Bollywood star is said to be cashing in on the success by hiking her fee.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada