»   » ಖಾನ್ ಗಳ ಪ್ರಿಯನಟಿ ಕರೀನಾ ಕಪೂರ್

ಖಾನ್ ಗಳ ಪ್ರಿಯನಟಿ ಕರೀನಾ ಕಪೂರ್

Posted By:
Subscribe to Filmibeat Kannada

ಕರೀನಾ ನಂಬಿಕೊಂಡು ನಿರ್ಮಾಪಕರುಗಳು ಸುಮಾರು 300 ಕೋಟಿ ರೂಪಾಯಿ ಸುರಿದಿದ್ದಾರಂತೆ. 2011ರಲ್ಲಿ ಬಾಲಿವುಡ್ ತುಂಬಾ ಬರೀ ಕರೀನಾಳದ್ದೇ ಕಾರುಬಾರು ಎಂಬ ಸುದ್ದಿಗೆ ರೆಕ್ಕೆ ಪುಕ್ಕ ಬಂದು ಎಲ್ಲೆಡೆ ಹಾರಾಡುತ್ತಿದೆ.  ಕರೀನಾಳ ಚಿತ್ರಗಳು ಒಂದರ ಹಿಂದೆ ಒಂದು ತೆರೆ ಕಾಣಲು ಸಜ್ಜಾಗುತ್ತಿವೆ. ಶಾರುಖ್, ಸಲ್ಮಾನ್, ಅಮೀರ್, ಇರ್ಫಾನ್ ಅಲ್ಲದೆ ಗೆಳೆಯ ಸೈಫ್ ಜತೆ ಕೂಡಾ ಕರೀನಾ ಹೆಜ್ಜೆ ಹಾಕಲಿದ್ದು, 2011ರಲ್ಲಿ ಆಕೆಗೆ ಶುಕ್ರದೆಶೆ ಶುರು ಎನ್ನುತ್ತಿದ್ದಾರೆ ಖ್ಯಾತ ಜ್ಯೋತಿಷಿಗಳು.

ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಸಿನಿಮಾ "ರಾ ಒನ್" ನಲ್ಲಿ ದಬ್ಬಾಂಗ್ ಹೀರೋ ಸಲ್ಮಾನ್ ಜೋಡಿಯಾಗಿ ಬಾಡಿಗಾರ್ಡ್ ಚಿತ್ರದಲ್ಲಿ, ಇರ್ಫಾನ್ ಜೊತೆ "ಶಾರ್ಟ್ ಟರ್ಮ್ ಶಾದಿ" ಅಲ್ಲದೆ ಫರ್ಫೆಕ್ಷನಿಸ್ಟ್ ಎಂದೇ ಹೆಸರಾಗಿರುವ ಅಮೀರ್ ಜೊತೆ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಆಪ್ತ ಸಖ ಸೈಫ್ ಜತೆ "ಏಜೆಂಟ್ ವಿನೋದ್" ಚಿತ್ರದ ಕೂಡಾ ಕರೀನಾ ಇದ್ದಾರೆ. ಇಷ್ಟೇ ಅಲ್ಲ, ರೋಹಿತ್ ಶೆಟ್ಟಿಯ 'ಅಂಗೂರ್" ಚಿತದಲ್ಲಿ ಶಾರುಕ್ ಖಾನ್ ಜೊತೆ ನಟಿಸುವ ಸಾಧ್ಯತೆಯಿದೆ.

ರೆಫ್ಯೂಜಿ, ಓಂಕಾರ, ಚಮೇಲಿ ಚಿತ್ರಗಳಲ್ಲಿ ಅಭಿನಯಕ್ಕೆ ಒತ್ತು ನೀಡುವ ಪಾತ್ರಗಳನ್ನು ಆರಿಸಿಕೊಂಡು ಸೈ ಎನಿಸಿಕೊಂಡ ಕಪೂರ್ ಖಾನ್ ದಾನ್ ನ ಈ ಕುವರಿ, ಕಮರ್ಷಿಯಲ್ ಯಶಸ್ಸು ಕಾಣಲು ಪೂರ್ವ ತಯಾರಿ ನಡೆಸಿದ್ದಾಳೆ.

ಸುಮಾರು 14 ಬ್ರ್ಯಾಂಡ್ ಗಳಿಗೆ ರಾಯಭಾರಿಯಾಗಿರುವ ಕರೀನಾ, ಜಾಹೀರಾತು ವಿಷಯದಲ್ಲಿ ಪ್ರಿಯಾಂಕಾ ಛೋಪ್ರಾಳಿಗೆ ತೀವ್ರ ಸ್ಪರ್ಧೆ ಒಡ್ಡಿದ್ದಾಳೆ. ಗೋಲ್ ಮಾಲ್ 3 ಯಶಸ್ಸು ಹಾಗೂ ವಿ ಆರ್ ಫ್ಯಾಮಿಲಿ, ಮಿಲೇಂಗೆ ಮಿಲೀಂಗೆ ಚಿತ್ರದ ಅಪಯಶಸ್ಸನ್ನು ಮನಸಿನಲ್ಲಿಟ್ಟುಕೊಂಡಿರುವ ಕರೀನಾಳಿಗೆ ಮುಂಬರುವ ಐದು ಸಿನಿಮಾಗಳು ಭರ್ಜರಿ ಬ್ರೇಕ್ ನೀಡುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. [ಬಾಲಿವುಡ್]

English summary
2011 is definitely promising year to Kareena Kapoor. She is doing Ra One with Sha Rukh Khan, Bodyguard with Salman Khan, Short Term Shaadi with Imran Khan and also a psychological thriller with Aamir Khan. Apart from this Agent Vinod with her boy friend Saif Ali Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada