ಬಾಲಿವುಡ್ ತಾರೆ ಮಲ್ಲಿಕಾ ಶೆರಾವತ್‌ಗೆ ನಾಗದೋಷ!
ಬಾಲಿವುಡ್ ತಾರೆ ಮಲ್ಲಿಕಾ ಶೆರಾವತ್‌ಗೆ ಈಗ ನಾಗದೋಷದ ಭಯ ಕಾಡುತ್ತಿದೆ. ಈಕೆ 'ಹಿಸ್' ಚಿತ್ರದಲ್ಲಿ ನಟಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಪಡ್ಡೆಗಳ ನಿದ್ದೆ ಕೆಡಿಸಿದ್ದ ಮಲ್ಲಿಕಾಗೂ ಈಗ ನಾಗದೋಷದ ಕಾರಣ ನಿದ್ದೆ ಬರುತ್ತಿಲ್ಲವಂತೆ.ನಾಗಿಣಿ ಪಾತ್ರ ಮಾಡಿದರೆ ನಾಗದೋಷ ಕಾಡುತ್ತದೆ ಎಂದು ಯಾರೋ ಮಲ್ಲಿಕಾಗೆ ಹೇಳಿದ್ದೇ ತಡ ಆಕೆ ತರಗುಟ್ಟಿ ಹೋಗಿದ್ದಾರೆ.
ನಾಗದೋಷ ಪರಿಹಾರಕ್ಕೆ ತಿರುವನಂತಪುರದ ರಾಣಿ ಲಕ್ಷ್ಮಿಬಾಯಿ ಎನ್ನುವವರು ಮಲ್ಲಿಕಾಗೆ ಉಚಿತ ಸಲಹೆಗಳನ್ನು ನೀಡಿದ್ದಾರೆ. ನಾಗನ ಆರಾಧಕ ಕ್ಷೇತ್ರಗಳಿಗೆ ಭೇಟಿ ನೀಡಿದರೆ ಈ ದೋಷ ಪರಿಹಾರವಾಗುತ್ತದೆ ಎಂಬುದು ಆಕೆಯ ಸಲಹೆ. ಈ ಕಾರಣಕ್ಕಾಗಿಯೆಇತ್ತೀಚೆಗೆ ಮಲ್ಲಿಕಾ ಕೇರಳಕ್ಕೆ ಹೋಗಿ ನಾಗಪೂಜೆ ಮಾಡಿದ್ದು .
ಮುಂದೊಂದು ದಿನ ಮಲ್ಲಿಕಾ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆ ಇತ್ಯಾದಿ ಪೂಜೆಗಳನ್ನು ಮಾಡಿಸುವ ಸಲುವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ನೀಡುವ ಸಾಧ್ಯತೆಗಳಿವೆ. ಈಗಾಗಲೆ ಹಲವಾರು ತಾರೆಗಳು ಕುಕ್ಕೆಗೆ ಬಂದು ನಾಗದೋಷ ಪರಿಹರಿಸಿಕೊಂಡು ಹೋಗಿದ್ದಾರೆ. ಈಗ ಮಲ್ಲಿಕಾಳ ಸರದಿ.
More from Filmibeat
English summary
Mallika Sherawat, who recently appeared in the Bollywood movie Hisss, is facing Naga Dosha. According to sources, a swamiji has suggested her to do Sarpa Samskara (funeral of cobra) to get rid off from the Naga Dosha. So she is expected to visit Kukke Subramanya for this pooja.
ಮಲ್ಲಿಕಾ ಶೆರಾವತ್ ಹಿಸ್ ನಾಗದೋಷ ಸರ್ಪ ಸಂಸ್ಕಾರ ಬಾಲಿವುಡ್ mallika sherawat naga dosha sarpa samskara hisss bollywood


Click it and Unblock the Notifications











