For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಬೆಂಜ್ ಕಾರು ಜಖಂ

  By Rajendra
  |

  ಬಾಲಿವುಡ್ ತಾರೆ, ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಅವರ ಮರ್ಸಿಡೆಸ್ ಬೆಂಜ್ ಕಾರನ್ನು ವಿದ್ಯಾರ್ಥಿಗಳು ಜಖಂಗೊಳಿಸಿದಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಹೊಚ್ಚ ಹೊಸ ಚಿತ್ರ 'ಅಂಜಾನಾ ಅಂಜಾನಿ' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

  ರಣಬೀರ್ ಕಪೂರ್ ಮತ್ತು ಪ್ರಿಯಾಂಕಾ ಮುಖ್ಯಭೂಮಿಕೆಯಲ್ಲಿರುವ 'ಅಂಜಾನಾ ಅಂಜಾನಿ' ಚಿತ್ರದ ಪ್ರಚಾರ ಸಲುವಾಗಿ ಪ್ರಿಯಾಂಕಾ ದೇಶದಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಮೊನ್ನೆ ಮುಂಬೈನ ಕಾಲೇಜೊಂದಕ್ಕೆ ಭೇಟಿ ನೀಡಿದ್ದರು. ಆಗ ವಿದ್ಯಾರ್ಥಿಗಳ ಗುಂಪೊಂದು ಪ್ರಿಯಾಂಕರನ್ನು ನೋಡುವ ತರಾತುರಿಯಲ್ಲಿ ಕಾರನ್ನು ಜಖಂಗೊಳಿಸಿದೆ.

  ಈ ಬಗ್ಗೆ ಪ್ರಿಯಾಂಕಾ ಚೋಪ್ರಾ ಏನೂ ಬೇಸರಿಸಿಕೊಂಡಿಲ್ಲವಂತೆ. ಆದರೆ ನೊಂದುಕೊಂಡಿದ್ದಾರೆ. ಬೆಲೆಬಾಳುವ ಈ ಕಾರನ್ನು ಆಕೆಯ ತಂದೆ ಉಡುಗೊರೆಯಾಗಿ ನೀಡಿದ್ದರಂತೆ. ಅಂತಹ ಕಾರಿಗೆ ಜಖಂ ಆದರೆ ಮನಸ್ಸಿಗೆ ಜಖಂ ಆದಂತೆ ಅಲ್ಲವೆ? ಒಟ್ಟಿನಲ್ಲಿ ಮುಂಬೈ ಕೆ ಸಿ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರಿಯಾಂಕಾ ದೊಡ್ಡ ಮನಸ್ಸಿನಿಂದ ಕ್ಷಮಿಸಿದ್ದಾರಂತೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X