»   » ಬಾಕ್ಸಾಫೀಸ್ :ರಾವಣ್ ಫ್ಲಾಪ್, ರಾಜ್ ನೀತಿ ಹಿಟ್

ಬಾಕ್ಸಾಫೀಸ್ :ರಾವಣ್ ಫ್ಲಾಪ್, ರಾಜ್ ನೀತಿ ಹಿಟ್

Posted By:
Subscribe to Filmibeat Kannada

ಕರ್ನಾಟಕದಲ್ಲಿ ಸಾಕಷ್ಟು ಜಟಾಪಟಿ ಮಾಡಿ ತೆರೆಕಂಡಿದ್ದ ರಾವಣ್ ಚಿತ್ರಕ್ಕೆ ಜಗತ್ತಿನೆಲ್ಲೆಡೆಯಿಂದ ನೀರಸ ಪ್ರತಿಕ್ರಿಯೆ ಲಭ್ಯವಾಗಿದ್ದು, ಮೊದಲ ವಾರದ ಗಳಿಕೆ ಆಧಾರದ ಮೇಲೆ ಅಧಿಕೃತವಾಗಿ ಫ್ಲಾಪ್ ಚಿತ್ರಗಳ ಪಟ್ಟಿಗೆ ಸೇರಿಸಲಾಗಿದೆ. ಮಣಿರತ್ನಂ ರಂತಹ ಪ್ರಬುದ್ಧ ನಿರ್ದೇಶಕ, ಐಶ್ವರ್ಯಾ ರೈಮ್, ಅಭಿಷೇಕ್ ಬಚ್ಚನ್ ಇದ್ದರೂ ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಿದೆ.

ಬಚ್ಚನ್ ಜೂನಿಯರ್ , ಐಶ್ವರ್ಯಾ ಇದ್ದ 'ಗುರು' ಚಿತ್ರ ಕೂಡಾ ಈ ಹಿಂದೆ ಬಾಕ್ಸಾಫೀಸ್ ನಲ್ಲಿ ಹಿನ್ನೆಡೆ ಕಂಡು ಮೊದಲ ವಾರ ಕೇವಲ 24 ಕೋಟಿ ಮಾತ್ರ ಗಳಿಸಿತ್ತು. ಈಗ ರಾವಣ್ ಕೂಡಾ ಅದೇ ಹಾದಿ ಹಿಡಿದಿದ್ದು ಅಬ್ಬಬ್ಬಾ ಎಂದರೆ ಒಟ್ಟಾರೆ 30 ಕೋಟಿ ಗಳಿಸಬಹುದು ಅಷ್ಟೇ.

ಅದೇ ಪ್ರಕಾಶ್ ಝಾರ 'ರಾಜ್ ನೀತಿ' ವಿಷಯಕ್ಕೆ ಬಂದರೆ, ಬಾಲಿವುಡ್ ನ ಬ್ಲಾಕ್ ಬಾಸ್ಟರ್ ಆಗುವ ಎಲ್ಲಾ ಸೂಚನೆಗಳು ಕಂಡು ಬಂದಿವೆ. ಕೊನೆಪಕ್ಷ 50 ಕೋಟಿ ಲಾಭ ಬಾಚಲಿದೆ . ಕೈಟ್ಸ್ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಗೆ ರಾಜ್ ನೀತಿ ಹೊಸ ನೀತಿ ಪಾಠ ಹೇಳಿದೆ.

ಗುರು, ರಾವಣ್ ಚಿತ್ರದ ಗಳಿಕೆಯ ಗ್ರಾಫ್ ಚಿತ್ರವನ್ನು ಕೈಲಿಡಿದು ಮಣಿರತ್ನಂ ಮುಗುಳ್ನಕ್ಕು ಮತ್ತೊಂದು ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಬಾಲಿವುಡ್ ಚಿತ್ರಗಳ ಯಶಸ್ಸಿನ ಫಾರ್ಮುಲಾ ಬದಲಾಗಿರುವ ಲಕ್ಷಣಗಳು ತೋರುತ್ತಿದೆ. ಅದೇ ಹಳೆ ಪ್ರೇಮಕಥೆ, ಭೂಗತ ಜಗತ್ತಿನ ಸುತ್ತಾ ಹೆಣೆದ ಚಿತ್ರಗಳಿಂದ ಹೊರತಾದ ಬಾಲಿವುಡ್ ಚಿತ್ರಗಳು ಜನರಿಗೆ ಆಪ್ತ ಎನಿಸುವ ಕಾಲ ಸನ್ನಿಹಿತವಾಗಿದೆ ಎನ್ನುತ್ತಾರೆ ಬಾಲಿವುಡ್ ಪಂಡಿತರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada