»   »  ಶಾರುಖ್ ಸ್ನೇಹಕ್ಕಾಗಿ ಸಲ್ಮಾನ್ ಖಾನ್ ಹಂಬಲ

ಶಾರುಖ್ ಸ್ನೇಹಕ್ಕಾಗಿ ಸಲ್ಮಾನ್ ಖಾನ್ ಹಂಬಲ

Subscribe to Filmibeat Kannada

ಬಾಲಿವುಡ್ ನಲ್ಲಿ ಕೋಪಕ್ಕೆ ಮತ್ತೊಂದು ಹೆಸರು ಸಲ್ಮಾನ್ ಖಾನ್. ಆತನಿಗೆ ಕೋಪ ಬಂದರೆ ಎದುರಿಗಿರುವ ವ್ಯಕ್ತಿ ಯಾರೆಂಬುದನ್ನೂ ಮರೆಯುತ್ತಾನೆ. ಕಳೆದ ವರ್ಷ ಕತ್ರಿನಾ ಕೈಫ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಷಾರುಖ್ ಖಾನ್ ರೊಂದಿಗೆ ಕೈಕೈ ಮಿಸಲಾಯಿಸಿದ್ದ!

ಈಗ ಸಲ್ಲು ಕೋಪ ಕೊಂಚ ಕಡಿಮೆಯಾಗಿದೆ. ಇತ್ತೀಚೆಗೆ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಷಾರುಖ್ ರೊಂದಿಗೆ ನಟಿಸುವುದುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಂದು ಗೊಂದಲವನ್ನು ಸಲ್ಲು ಸೃಷ್ಟಿಸಿದ. ಶಾರುಖ್ ರೊಂದಿಗೆ ಗೆಳೆತನ ಇನ್ನೇನು ಸುಸೂತ್ರವಾಗಿ ಮುಂದುವರಿಯುತ್ತಲ್ಲಾ? ಎಂದು ಪ್ರಶ್ನಿಸಿದ್ದಕ್ಕೆ... ಅದಲ್ಲಾ ಆ ಭಗವಂತನ ಕೈಯಲ್ಲಿದೆ ಎಂದು ಅಡ್ಡಗೋಡೆ ಮೆಲೆ ದೀಪ ಇಟ್ಟಂತೆ ಸಲ್ಲು ಉತ್ತರಿಸಿದ್ದಾರೆ.

ಸಲ್ಮಾನ್ ಖಾನ್ ನೇತೃತ್ವದ 'ದಸ್ ಕಾ ದಮ್ 2' ಕಾರ್ಯಕ್ರಮಕ್ಕೆ ಕರಿಷ್ಮಾ ಕಪೂರ್, ಕರೀನಾ ಕಪೂರ್, ಫರಾ ಖಾನ್ ರಂತಹ ಶಾರುಖ್ ಗೆಳೆಯರನ್ನು ಸಲ್ಲು ಆಹ್ವಾನಿಸುತ್ತಿದ್ದಾರೆ. ಇವರೆಲ್ಲರ ಮೂಲಕ ಷಾರುಖ್ ಗೆ ಮತ್ತಷ್ಟು ಸನಿಹವಾಗುತ್ತಿದ್ದಾರೆ ಎನ್ನಿಸುತ್ತದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada