For Quick Alerts
  ALLOW NOTIFICATIONS  
  For Daily Alerts

  ಅದ್ಧೂರಿ ನಡೆಯಿತು 63ನೇ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮ

  By Naveen
  |

  63ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮ ನಿನ್ನೆ (ಶನಿವಾರ) ಮುಂಬೈನಲ್ಲಿ ನಡೆದಿದೆ. 2017ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಅತ್ಯುತ್ತಮ ಸಿನಿಮಾಗಳು, ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಟ ಶಾರೂಖ್ ಖಾನ್ ಮತ್ತು ನಿರ್ದೇಶಕ ಕರಣ್ ಜೋಹರ್ ಈ ಕಾರ್ಯಕ್ರಮದ ನಿರೂಪಣೆ ಮಾಡಿದರು.

  ನಟಿ ರೇಖಾ, ಕಾಜಲ್, ವಿದ್ಯಾಬಾಲನ್, ಸನ್ನಿಲಿಯೋನ್, ಪರಿಣಿತಿ ಚೋಪ್ರಾ, ಮನುಷಿ ಚಿಲ್ಲರ್, ನಟ ಅಕ್ಷಯ್ ಕುಮಾರ್, ಶಾಹಿದ್ ಕಪೂರ್, ರಣವೀರ್ ಸಿಂಗ್ ಸೇರಿದಂತೆ ಬಾಲಿವುಡ್ ಚಿತ್ರರಂಗ ದಿಗ್ಗಜರು ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಬಾರಿ 'ಹಿಂದಿ ಮೀಡಿಯಂ' ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡರೆ ಅದೇ ಚಿತ್ರದ ನಟನೆಗಾಗಿ ಇರ್ಫಾನ್ ಅತ್ಯುತ್ತಮ ನಟ ಪ್ರಶಸ್ತಿಗಳಿಸಿದ್ದಾರೆ.

  'ತುಮ್ಹಾರಿ ಸುಲು' ಚಿತ್ರದ ನಟನೆಗಾಗಿ ವಿದ್ಯಾ ಬಾಲನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ವಿಮರ್ಶಕರ ವಿಭಾಗದಲ್ಲಿ ರಾಜ್ ಕುಮಾರ್ ರಾವ್ ಗೆ ಅತ್ಯುತ್ತಮ ನಟ ಹಾಗೂ 'ಸೀಕ್ರೆಟ್ ಸೂಪರ್ ಸ್ಟಾರ್' ಜೈರಾ ವಾಸೀಂಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. 'ನ್ಯೂಟನ್' ಸಿನಿಮಾ ವಿಮರ್ಶಕರ ವಿಭಾಗದ ಅತ್ಯುತ್ತಮ ಸಿನಿಮಾವಾಗಿದೆ. ಸಲ್ಮಾನ್ ಖಾನ್ ನಟನೆಯ 'ಟೈಗರ್ ಜಿಂದಾ ಹೈ' ಅತ್ಯುತ್ತಮ ಆಕ್ಷನ್ ಸಿನಿಮಾವಾಗಿದೆ.

  English summary
  63rd Filmfare Awards were held on January 20, 2018 at the NSCI Dome in Worli, Mumbai. 'Hindi Medium' bagged honours in the categories of Best Film and Best Actor in a Leading Role (Male) for Irrfan Khan's impeccable performance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X