For Quick Alerts
  ALLOW NOTIFICATIONS  
  For Daily Alerts

  16 ವರ್ಷಗಳ ನಂತರ ತಮ್ಮದೇ ರೆಕಾರ್ಡ್ ಬ್ರೇಕ್ ಮಾಡಿದ ಅಮೀರ್

  By Suneel
  |

  ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿನಯದಲ್ಲಿ, ನಿರ್ದೇಶನದಲ್ಲಿ ಮಾತ್ರ ಖ್ಯಾತರಲ್ಲದೇ ತಾವು ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ಏಕೈಕ ನಟನಾಗಿಯೂ ಪ್ರಸಿದ್ಧರು.

  16 ವರ್ಷಗಳಿಂದ ಯಾವುದೇ ಪ್ರಶಸ್ತಿ ಸಮಾರಂಭಗಳಿಗೂ ತಮ್ಮ ಕಾಲಿಡದ ಬಾಲಿವುಡ್ ಸ್ಟಾರ್ ಈಗ ತಮ್ಮದೇ ರೆಕಾರ್ಡ್ ಅನ್ನು ಬ್ರೇಕ್ ಮಾಡಿದ್ದಾರೆ. ಅದು ನಿನ್ನೆ(ಏಪ್ರಿಲ್ 24) ಮುಂಬೈ ನಲ್ಲಿ ನಡೆದ 'ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ' ಪ್ರದಾನ ಸಮಾರಂಭಕ್ಕೆ ಭೇಟಿ ನೀಡುವ ಮುಖಾಂತರ.

  ಅಮೀರ್ ಖಾನ್ ರವರಿಗೆ 'ದಂಗಲ್' ಚಿತ್ರಕ್ಕಾಗಿ, ಲತಾ ಮಂಗೇಶ್ಕರ್ ರವರ ತಂದೆಯ 75ನೇ ಪುಣ್ಯತಿಥಿ ಸ್ಮಾರಣಾರ್ಥವಾಗಿ 'ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ' ನೀಡಿ ವಿಶೇಷವಾಗಿ ಗೌರವಿಸಲಾಗಿದೆ. ಇನ್ನೊಂದು ವಿಶೇಷ ಅಂದ್ರೆ 'ಪಿಕೆ' ಚಿತ್ರದ ನಟ ಅಮೀರ್ ಖಾನ್ 16 ವರ್ಷಗಳ ನಂತರ ಮೊದಲ ಬಾರಿಗೆ ಭಾಗಿಯಾದ ಪ್ರಶಸ್ತಿ ಸಮಾರಂಭ ಮತ್ತು ಸ್ವೀಕರಿಸಿದ ಮೊದಲ ಪ್ರಶಸ್ತಿ ಇದಾಗಿದೆ.['ಮಹಾಭಾರತ'ದಲ್ಲಿ ಅಮೀರ್ ಖಾನ್: ರಾಜಮೌಳಿ ಎಕ್ಸ್ ಕ್ಲೂಸಿವ್ ಮಾಹಿತಿ]

  16 ವರ್ಷಗಳ ಹಿಂದೆ ಅಮೀರ್ ಖಾನ್ ತಮ್ಮದೇ ಪ್ರೊಡಕ್ಷನ್ ಚಿತ್ರದ 'ಲಗಾನ್' ಚಿತ್ರ ವಿದೇಶಿ ಸಿನಿಮಾ ವಿಭಾಗದಲ್ಲಿ 'ಆಸ್ಕರ್' ಪ್ರಶಸ್ತಿಗೆ ನಾಮನಿರ್ದೇಶನ ಆಗಿದ್ದ ವೇಳೆ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿದ್ದೆ ಕೊನೆಯಾಗಿತ್ತು. ಆದರೆ ಈಗ ಪ್ರಶಸ್ತಿ ಸಮಾರಂಭದಲ್ಲಿ ಅಮೀರ್ ಕಾಣಿಸಿಕೊಂಡಿರುವುದು ಬಾಲಿವುಡ್ ಮಂದಿಯೆಲ್ಲಾ ಬಾಯ ಮೇಲೆ ಬೆರಳಿಟ್ಟು ಆಚ್ಚರಿ ಪಟ್ಟಿದ್ದಾರೆ. ಅಲ್ಲದೇ ಎಲ್ಲರ ಗಮನಸೆಳೆದಿದ್ದಾರೆ.[ಬಾಲಿವುಡ್ ಗೆ ಅಮೀರ್ ಖಾನ್ ಮಗಳ ಎಂಟ್ರಿ?]

  English summary
  Bollywood Star Aamir Khan attends an award function after 16 years, receives one from RSS chief.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X