»   » ಅಮೀರ್ ಖಾನ್ ಪ್ರಕಾರ ಬಾಲಿವುಡ್‌ನ ಸೂಪರ್ ಸ್ಟಾರ್ ಯಾರು?

ಅಮೀರ್ ಖಾನ್ ಪ್ರಕಾರ ಬಾಲಿವುಡ್‌ನ ಸೂಪರ್ ಸ್ಟಾರ್ ಯಾರು?

Posted By:
Subscribe to Filmibeat Kannada

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಸದ್ಯದಲ್ಲಿ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ ನಿನ್ನೆಯಷ್ಟೇ ತಮ್ಮ ಅಭಿನಯದ 'ಸೀಕ್ರೇಟ್ ಸೂಪರ್‌ಸ್ಟಾರ್' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇಂದು ಚಿತ್ರದ ಟ್ರೈಲರ್ ಲಾಂಚ್‌ಗೆ ಸಜ್ಜಾಗಿರುವ ಅಮೀರ್ ಖಾನ್ ಮಾಧ್ಯಮದವರ ಹಲವು ಪ್ರಶ್ನೆಗಳಿಗೆ ಮೌನ ಮುರಿದು ಉತ್ತರಿಸಿದ್ದಾರೆ.

ಅಮೀರ್ ಖಾನ್ ಮೇಲೆ ಅಪ್‌ಸೆಟ್ ಆದ ಕತ್ರಿನಾ ಕೈಫ್!

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರೀಕರಣದ ವೇಳೆ ಅಮೀರ್ ಖಾನ್ ಕೇವಲ ಫಾತಿಮಾ ಸನಾ ಶೇಖ್ ಬಗ್ಗೆ ಗಮನ ಹರಿಸುತ್ತಿದ್ದು, ಚಿತ್ರದ ಲೀಡಿಂಗ್ ಲೇಡಿ ಕತ್ರಿನಾ ಕೈಫ್ ರನ್ನು ಕಡೆಗಣಿಸಿದ್ದಾರೆ. ಆದ್ದರಿಂದ ಕ್ಯಾಟ್, ಅಮೀರ್ ಬಗ್ಗೆ ಬೇಸರಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತು ಮತ್ತು ತಮ್ಮ ಪ್ರಕಾರ ಬಾಲಿವುಡ್ ನ ಸೂಪರ್ ಸ್ಟಾರ್ ಯಾರು ಎಂಬ ಪ್ರಶ್ನೆಗೆ ಈ ಕೆಳಗಿನಂತೆ ಉತ್ತರಿಸಿದ್ದಾರೆ.

ಕತ್ರಿನಾ ಕೈಫ್ ನಿಮ್ಮ ಬಗ್ಗೆ ಬೇಸರಗೊಂಡಿದ್ದಾರೆ ಎಂಬುದಕ್ಕೆ ಅಮೀರ್ ಉತ್ತರ

ಅಮೀರ್ ಕಡೆಗಣನೆಯಿಂದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ತಮ್ಮ ಪಾತ್ರದ ಬಗ್ಗೆ ಕತ್ರಿನಾ ಬೇಸರಗೊಂಡಿದ್ದಾರೆ ಎಂಬ ರೂಮರ್ಸ್ ಅನ್ನು ಮಿಸ್ಟರ್ ಪರ್ಫೆಕ್ಷನಿಸ್ಟ್ ನಿರಾಕರಿಸಿದ್ದು, 'ಇದು ಸಂಪೂರ್ಣವಾಗಿ ಸುಳ್ಳು' ಎಂದಿದ್ದಾರೆ.

ಅಮೀರ್ ಪ್ರಕಾರ ಬಾಲಿವುಡ್ ನ ಸೂಪರ್ ಸ್ಟಾರ್ ಯಾರು?

ಈ ಪ್ರಶ್ನೆಗೆ ಅಮೀರ್ ಖಾನ್, 'ನನ್ನ ಪ್ರಕಾರ ಅಮಿತಾಬ್ ಬಚ್ಚನ್ ರವರು ಮೊದಲ ಸೂಪರ್‌ಸ್ಟಾರ್. ನಂತರ ಸಲ್ಮಾನ್ ಖಾನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಹೃತಿಕ್ ರೋಷನ್. ಅಲ್ಲದೇ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಸಹ ಸೂಪರ್ ಸ್ಟಾರ್‌ಗಳೇ' ಎಂದಿದ್ದಾರೆ.

ಸೂಪರ್‌ಸ್ಟಾರ್ ಚಿತ್ರ ಹಿಟ್ ಆಗುವಲ್ಲಿ ಫೇಲ್ ಆದರೆ?

ಈ ಮೇಲಿನ ಪ್ರಶ್ನೆಗೂ ಉತ್ತರಿಸಿದ ನಟ, 'ಒಂದು ಅಥವಾ ಎರಡು ಚಿತ್ರಗಳು ಫೇಲ್‌ ಆಗುವುದರಿಂದ ಸ್ಟಾರ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಶಾರುಖ್ ಮತ್ತು ಸಲ್ಮಾನ್ ಖಾನ್ ಮೆಗಾಸ್ಟಾರ್‌ಗಳು' ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಹುಡುಗಿಯರಿಗೆ ಅಮೀರ್ ಪತ್ನಿಯ ಸಂದೇಶ

ಮಾಧ್ಯಮದವರೊಂದಿಗೆ ಅಮೀರ್ ಮಾತನಾಡುವಾಗ ಜೊತೆಯಲ್ಲಿದ್ದ ಅವರ ಪತ್ನಿ ಕಿರಣ್ ರಾವ್ ರವರು ಸಹ ಮಾತನಾಡಿ ಹುಡುಗಿಯರಿಗೆ ಸ್ಟ್ರಾಂಗ್ ಮೆಸೇಜ್ ನೀಡಿದ್ದಾರೆ. 'ಸಿನಿಮಾ ಮೂಲಕ ನಾನು ಎಲ್ಲಾ ಹುಡುಗಿಯರಿಗೆ ಹೇಳಬಯಸುವುದು ಏನೆಂದರೆ, ಯಾರು ಸಹ ತಮ್ಮ ಕನಸು ನನಸು ಮಾಡಿಕೊಳ್ಳಲು ಹೆದರದಿರಿ. ನಿಮ್ಮ ಕನಸನ್ನು ಫಾಲೋ ಮಾಡಲು ನಿಮಗೆ ಹಕ್ಕಿದೆ' ಎಂದು ಹೇಳಿದ್ದಾರೆ.

English summary
Today, at the trailer launch event of Secret Superstar, Aamir Khan interacted with media and from his alleged fallout with Katrina Kaif to Salman Khan's Tubelight failure, the actor answered each and every question without any kind of diplomacy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada