ಸಲ್ಲು ಶರ್ಟ್ ಬಿಚ್ಚಿದಂತೆ ಪ್ಯಾಂಟ್ ಬಿಚ್ಚಲಿ: ಅಮೀರ್
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಮಿಸ್ಟರ್ ಪರ್ಫೆಕ್ಷನಿಷ್ಟ್ ಅಮೀರ್ ಖಾನ್ ಒಂದು ಸವಾಲು ಎಸೆದಿದ್ದಾರೆ. ತಮ್ಮ 'ಪಿಕೆ' ಚಿತ್ರದಲ್ಲಿ ಅಮೀರ್ ಖಾನ್ ಅರೆಬೆತ್ತಲಾಗಿರುವುದು, ಈ ಪೋಸ್ಟರ್ ಈಗ ಭಾರತೀಯ ಚಿತ್ರರಂಗದಲ್ಲೇ ಸಂಚನಲ ಮೂಡಿಸಿರುವುದು ಗೊತ್ತೇ ಇದೆ.
ಈ ಅರೆಬೆತ್ತಲೇ ಪೋಸ್ಟರ್ ಬಗ್ಗೆ ಸಾಕಷ್ಟು ತಾರೆಗಳು ತಮಗೆ ತೋಚಿದಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಇದೇ ವಿಚಾರವಾಗಿ ಸ್ವತಃ ಅಮೀರ್ ಖಾನ್ ಮಾತನಾಡುತ್ತಾ ತಾವಾಯಿತು ತಮ್ಮ ಕೆಲಸವಾಯಿತು ಎಂದಿದ್ದ ಸಲ್ಮಾನ್ ಖಾನ್ ಅವರನ್ನು ಸುಖಾಸುಮ್ಮನೆ ಕೆಣಕಿದ್ದಾರೆ. [ಸಲ್ಮಾನ್ ಖಾನ್ ಚಿತ್ರದಲ್ಲಿ ಮಾಸ್ಟರ್ ಕಿಶನ್ ಗೆ ಚಾನ್ಸ್]

'ಧೂಮ್ 3' ಚಿತ್ರದಲ್ಲಿನ ತಮ್ಮ ಸ್ಟೈಲನ್ನು 'ಬಿಗ್ ಬಾಸ್'ನಲ್ಲಿ ಬಳಸಿಕೊಂಡಿದ್ದ ಅವರಿಗೆ ಒಂದು ಸಣ್ಣ ಸವಾಲು. ತಮ್ಮಿಬ್ಬರ ನಡುವಿನ ಗೆಳೆತನಕ್ಕೆ ಇದೊಂದು ಸವಾಲು. ಚಿತ್ರಗಳಲ್ಲಿ ಅವರು ಶರ್ಟ್ ಬಿಚ್ಚಿದಂತೆ ತಮ್ಮ ಪ್ಯಾಂಟನ್ನೂ ಬಿಚ್ಚಲಿ ನೋಡೋಣ ಎಂದಿದ್ದಾರೆ. ಆದರೆ ಈ ಬಗ್ಗೆ ಸಲ್ಲು ಮಾತ್ರ ಇನ್ನೂ ಬಾಯ್ಬಿಟ್ಟಿಲ್ಲ.
ಒಟ್ಟಾರೆಯಾಗಿ ಅಮೀರ್ ಖಾನ್ ಸವಾಲನ್ನು ಸಲ್ಲು ಹೇಗೆ ಸ್ವೀಕರಿಸುತ್ತಾರೋ ಏನೋ ಎಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ. ಅಮೀರ್ ಖಾನ್ ಈ ರೀತಿಯ ಸವಾಲು ಎಸೆದಿದ್ದಾರೆ ಎಂದರೆ ಸಲ್ಲು ಸುಮ್ಮನೆ ಕೂರುವ ವ್ಯಕ್ತಿಯಂತೂ ಅಲ್ಲ. ನೋಡೋಣ ಅವರು ಏನಂತಾರೋ ಏನೋ. (ಏಜೆನ್ಸೀಸ್)


Click it and Unblock the Notifications











