»   » ಬಾಕ್ಸ್ ಆಫೀಸಲ್ಲಿ ಕೇಕೆ ಹಾಕಿದ ಅಮೀರ್ ಖಾನ್ 'ಪಿಕೆ'

ಬಾಕ್ಸ್ ಆಫೀಸಲ್ಲಿ ಕೇಕೆ ಹಾಕಿದ ಅಮೀರ್ ಖಾನ್ 'ಪಿಕೆ'

Posted By:
Subscribe to Filmibeat Kannada

ಅಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರ ಹೊಸದೊಂದು ದಾಖಲೆ ಸೃಷ್ಟಿಸಿದೆ. ಈ ಚಿತ್ರ ಬಾಕ್ಸ್ ಆಫೀಸಲ್ಲಿ ಸಾರ್ವಕಾಲಿಕ ದಾಖಲೆಗೆ ಪಾತ್ರವಾಗಿದೆ. ಒಂದೇ ವಾರದಲ್ಲಿ ರು.180 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಎಲ್ಲಾ ದಾಖಲೆಗಳನ್ನೂ ಧೂಳಿಪಟ ಮಾಡಿದೆ.

ಅಮೀರ್ ಅಭಿನಯದ 'ಧೂಮ್ 3' ಚಿತ್ರ ಮೊದಲ ವಾರದಲ್ಲಿ ರು.179 ಕೋಟಿ ಸಂಗ್ರಹಿಸಿತ್ತು. ಆ ದಾಖಲೆಯನ್ನೂ ಮಟಾಶ್ ಮಾಡಿದೆ 'ಪಿಕೆ'. ಮುಂಬೈನಲ್ಲೇ ಚಿತ್ರದ ಗಳಿಕೆ ರು.6-7 ಕೋಟಿ ಎನ್ನುತ್ತದೆ ಬಾಕ್ಸ್ ಆಫೀಸ್ ಇಂಡಿಯಾ ಡಾಟ್ ಕಾಮ್. ಚಿತ್ರದ ಗಳಿಕೆ ಹೀಗೇ ಮುಂದುವರಿದರೆ ರು.300 ಕೋಟಿ ದಾಟುವ ಎಲ್ಲಾ ನಿರೀಕ್ಷೆಗಳನ್ನೂ ಹುಟ್ಟುಹಾಕಿದೆ. [ಪಿಕೆ ಚಿತ್ರ ವಿಮರ್ಶೆ]

A Still from movie PK

ಕ್ರಿಸ್ಮಸ್ ಹಬ್ಬದಂದು ಒಂದೇ ದಿನದಲ್ಲಿ 'ಪಿಕೆ' ಚಿತ್ರ ಭಾರತದಲ್ಲಿ ರು. 27 ಕೋಟಿ ಸಂಗ್ರಹಿಸಿದೆ. ವಾರಾಂತ್ಯದ ರಜೆಗಳು ಚಿತ್ರದ ಗಳಿಕೆಯನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ರಾಜ್ ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಾಜ್ ಪುತ್, ಬೋಮನ್ ಇರಾನಿ, ಸೌರಭ್ ಶುಕ್ಲ ಹಾಗೂ ಸಂಜಯ್ ದತ್ ಸೇರಿದಂತೆ ಮುಂತಾದವರಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

'ಪಿಕೆ' ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ. ಚಿತ್ರ ವಿಮರ್ಶಕರು ಅಮೀರ್ ಅಭಿನಯವನ್ನು ಕೊಂಡಾಡುತ್ತಿದ್ದಾರೆ. ಜೊತೆಗೆ ಯಾವುದೇ ಪ್ರತಿಸ್ಪರ್ಧಿ ಚಿತ್ರವಿಲ್ಲದಿರುವುದು ಇನ್ನೊಂದು ಪ್ಲಸ್ ಪಾಯಿಂಟ್ ಎನ್ನಬಹುದು. ಒಟ್ಟಾರೆ ವರ್ಷದ ಕೊನೆಯಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಭರ್ಜರಿ ಫಸಲು ತಂದಿದೆ 'ಪಿಕೆ'. (ಏಜೆನ್ಸೀಸ್)

English summary
Aamir Khan starrer PK has set an all-time record with collections above Rs 180 crore during the first 7 days of its release. The film also stars Anushka Sharma, Sushant Singh Rajput, Boman Irani, Saurabh Shukla, and Sanjay Dutt in supporting roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada