For Quick Alerts
  ALLOW NOTIFICATIONS  
  For Daily Alerts

  ನವೆಂಬರ್ ನಲ್ಲಿ ರಾಣಿ, ಕರೀನಾ ಜೊತೆ ತೆರೆಗೆ ಅಮೀರ್

  |

  ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ಮುಂಬರುವ ಚಿತ್ರ 'ತಲಾಶ್' ತೆರೆಗೆ ಬರುವುದು ಪಕ್ಕಾ ಆಗಿದೆ. ಬಿಡುಗಡೆ ದಿನಾಂಕ ನವೆಂಬರ್ 30 (ನವೆಂಬರ್ 30, 2012) ಎಂದು ಚಿತ್ರತಂಡ ಹೇಳಿದೆ. ಇತ್ತೀಚಿಗೆ ಅಮೀರ್ ಖಾನ್ ನಟನೆಯ ಯಾವ ಚಿತ್ರವೂ ಬಾರದೇ ಅವರ ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಈಗ ತಲಾಶ್ ಬರಲಿರುವುದರಿಂದ ಅಮೀರ್ ಫ್ಯಾನ್ಸ್ ದಿಲ್ ಖುಷ್.

  ಈ ಚಿತ್ರಕ್ಕೆ ಬಾಲಿವುಡ್ ನಲ್ಲಿ ಭಾರಿ ನಿರೀಕ್ಷೆಯಿದೆ. ಹೀಗಾಗಿ ತಲಾಶ್ ಬಿಡುಗಡೆ ವೇಳೆ ತಮ್ಮ ಚಿತ್ರದ ಬಿಡುಗಡೆ ಬೇಡವೆಂದು ಅನೇಕ ನಿರ್ಮಾಪಕರು ನಿರ್ಧರಿಸಿ ತಮ್ಮ ತಮ್ಮ ಚಿತ್ರಗಳ ರಿಲೀಸ್ ಡೇಟ್ ಅನೌನ್ಸ್ ಮಾಡಿರಲಿಲ್ಲ. ಈಗ ಅವರೆಲ್ಲಾ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ತಲಾಶ್ ಚಿತ್ರ ಕಳೆದ ಜೂತ್ ತಿಂಗಳಲ್ಲೇ ಬಿಡುಗಡೆಯಾಗಬೇಕಿತ್ತು.

  ತಲಾಶ್ ಚಿತ್ರದ ಕೆಲವೊಂದು ದೃಶ್ಯಗಳನ್ನು ರೀಶೂಟ್ ಮಾಡಲಾಗುವುದೆಂಬ ಮಾತು ಕೇಳಿಬಂದಿತ್ತು. ಅಮೀರ್ ಖಾನ್ ಅವರಿಗೆ ಶೂಟ್ ಮಾಡಿದ್ದ ಕೆಲವೊಂದು ದೃಶ್ಯಗಳು ಇಷ್ಟವಾಗಿರಲಿಲ್ಲ. ಹೀಗಾಗಿ ರೀಶೂಟ್ ಮಾಡಬೇಕೆಂಬ ಮಾತನ್ನು ಅಮೀರ್ ಹೇಳಿದ್ದರು. ಆದರೆ ಅದನ್ನು ನಿರ್ದೇಶಕಿ ರೀಮಾ ಹಾಗೂ ಚಿತ್ರತಂಡ ಗಂಭೀರವಾಗಿ ಪರಿಗಣಿಸಿರಲಿಲ್ಲ.

  ಈಗ ಸ್ವತಃ ಅಮೀರ್ ಈ ಅಭಿಪ್ರಾಯದಿಂದ ಹಿಂದೆ ಸರಿದು ಆ ಇಷ್ಟವಾಗದ ಭಾಗಗಳಿಗೆ ಎಡಿಟಿಂಗ್ ನಲ್ಲಿ ಪರಿಹಾರ ಹುಡುಕುವ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಚಿತ್ರತಂಡಕ್ಕೆ ಬಿಡುಗಡೆ ದಿನಾಂಕ ಘೋಷಿಸಲು ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ನವೆಂಬರ್ 30ಕ್ಕೆ ಬಿಡುಗಡೆ ಘೋಷಿಸಿ ನಿರಾಳವಾಗಿದೆ ತಲಾಶ್ ಚಿತ್ರತಂಡ.

  ರೀಮಾ ಕಾಗ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಮೀರ್ ಖಾನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ಕರೀನಾ ಕಪೂರ್ ಹಾಗೂ ರಾಣಿ ಮುಖರ್ಜಿ ನಟಿಸಿದ್ದಾರೆ. ರಾಣಿ ಮುಖರ್ಜಿ ಅವರದು ಕಳೆದುಕೊಂಡ ಪ್ರೀತಿಯನ್ನು ಹುಡುಕುವ ಹೆಣ್ಣಿನ ಪಾತ್ರ. ಕರೀನಾ ಕಪೂರ್ ಅವರದು ಈ ಚಿತ್ರದಲ್ಲಿ ಸೆಕ್ಸ್ ವರ್ಕರ್ ಪಾತ್ರ ಎನ್ನಲಾಗಿದೆ. ಹೀಗಾಗಿ ಈ ಚಿತ್ರದ ಹೆಚ್ಚಿನ ಭಾಗವನ್ನು ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಶೂಟ್ ಮಾಡಲಾಗಿದೆ. (ಏಜೆನ್ಸೀಸ್)

  English summary
  Aaamir Khan upcoming movie 'Talaash' to releases on November 2012. Aamir Khan and Rani Mukerji are in Lead at Reema Kagti directed this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X