»   » ಹೊಸ ಚಿತ್ರಕ್ಕಾಗಿ ಬರೋಬ್ಬರಿ 50KG ತೂಕ ಇಳಿಸಿದ ಅಮೀರ್ ಖಾನ್

ಹೊಸ ಚಿತ್ರಕ್ಕಾಗಿ ಬರೋಬ್ಬರಿ 50KG ತೂಕ ಇಳಿಸಿದ ಅಮೀರ್ ಖಾನ್

Posted By:
Subscribe to Filmibeat Kannada

ಒಂದು ಪಾತ್ರಕ್ಕಾಗಿ ಅಮೀರ್ ಖಾನ್ ಏನು ಬೇಕಾದರೂ ಮಾಡುತ್ತಾರೆ ಎಂಬುದು ಮತ್ತೆ ಸಾಬೀತು ಆಗಿದೆ. ಯಾಕಂದ್ರೆ, ಅಮೀರ್ ಖಾನ್ ಈಗ ತಮ್ಮ ಹೊಸ ಸಿನಿಮಾಗಾಗಿ ಮತ್ತೊಂದು ಸಾಹಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ವರ್ಲ್ಡ್ ವೈಡ್ 5ನೇ ಸ್ಥಾನ ಪಡೆದ ಅಮೀರ್ ಖಾನ್ 'ದಂಗಲ್'

'Aamir Khan' undergoes another unbelievable transformation

ಬ್ಲಾಕ್ಸ್ ಬಾಸ್ಟರ್ 'ದಂಗಲ್' ಸಿನಿಮಾದ ಬಳಿಕ ಅಮೀರ್ 'ಥಗ್ಸ್ ಆಫ್‌ ಹಿಂದೂಸ್ತಾನ್‌' ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಮೀರ್ 50KG ತೂಕವನ್ನು ಇಳಿಸಿದ್ದಾರೆ. 'ದಂಗಲ್' ಸಿನಿಮಾಗಾಗಿ 120 ಕೆ.ಜಿ ಇದ್ದ ಅಮೀರ್ ಈಗ 70 ಕೆ.ಜಿ ಆಗಿದ್ದಾರೆ.

ಅಮೀರ್ 'ಥಗ್ಸ್ ಆಫ್ ಹಿಂದೂಸ್ತಾನ್' ಲೋಗೋ ರಿಲೀಸ್, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

'Aamir Khan' undergoes another unbelievable transformation

'ಥಗ್ಸ್ ಆಫ್‌ ಹಿಂದೂಸ್ತಾನ್‌' ಸೆಟ್‌ ನಲ್ಲಿನ ಕೆಲ ಫೋಟೋಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಅಮೀರ್ ಪೋಸ್ಟ್‌ ಮಾಡಿದ್ದು, 'ದಂಗಲ್' ಚಿತ್ರದ ಸಮಯಕ್ಕೆ ಹೋಲಿಸಿದರೆ ಇಲ್ಲಿ ಅವರು ಸಿಕ್ಕಾಪಟ್ಟೆ ಸ್ಲಿಮ್ ಆಗಿ ಕಾಣುತ್ತಾರೆ. ಪ್ರತಿ ದಿನ ವರ್ಕ್‌ಔಟ್‌ ಮಾಡಿ ಗಂಟೆಗಳ ಕಾಲ ಜಿಮ್ ನಲ್ಲಿ ದೇಹವನ್ನ ದಂಡಿಸಿ, ಅಮೀರ್ ಈಗ ಹೊಸ ಶೇಪ್ ಪಡೆದಿದ್ದಾರೆ. ಈ ಮೂಲಕ 'ಪಿಕೆ' ಹಾಗೂ 'ಧೂಮ್ 3' ಚಿತ್ರಗಳಿಗಿಂತಲೂ ಈಗ ಅವರ ಫ್ಯಾಟ್ ಕಡಿಮೆ ಆಗಿದೆಯಂತೆ.

English summary
After gaining weight for Dangal, 'Aamir Khan' has gone back to his normal weight of 70kg.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada