»   » ಸಲ್ಮಾನ್ ಭಾವನಿಗೆ ಬಾಲಿವುಡ್ ಸ್ಟಾರ್ ಆಗುವ ಕನಸು

ಸಲ್ಮಾನ್ ಭಾವನಿಗೆ ಬಾಲಿವುಡ್ ಸ್ಟಾರ್ ಆಗುವ ಕನಸು

Posted By:
Subscribe to Filmibeat Kannada

ಮುಂಬಯಿ, ಡಿ. 22: ಬಾಲಿವುಡ್‌ನ ಬಣ್ಣದ ಜಗತ್ತು ಎಂಥೆಂತವರನ್ನೋ ಕನಸಿನಲ್ಲಿ ತೇಲಿಸುತ್ತಿದೆ. ಇನ್ನು ಬಾಲಿವುಡ್ ಜೊತೆ ಹತ್ತಿರದ ಒಡನಾಟ ಇದ್ದವರನ್ನು ಸುಮ್ಮನೆ ಬಿಡುತ್ತದೆಯೇ?

ಈಚೆಗಷ್ಟೇ ಸ್ಟಾರ್ ಸಹೋದರರಾದ ಸಲ್ಮಾನ್ ಖಾನ್ ಹಾಗೂ ಅರ್ಬಾಜ್ ಖಾನ್ ಅವರ ತಂಗಿ ಅರ್ಪಿತಾಳನ್ನು ವರಿಸಿದ ಆಯುಷ್ ಶರ್ಮಾ ಈಗ ತಾನೂ ಬಾಲಿವುಡ್ ಹೀರೊ ಆಗುವ ಕನಸು ಕಾಣಲಾರಂಭಿಸಿದ್ದಾರೆ. ತನ್ನ ಭಾವಂದಿರ ಪ್ರಭಾವ ಉಪಯೋಗಿಸಿ ಬಾಲಿವುಡ್‌ನಲ್ಲಿ ನೆಲೆಯೂರುವುದು ಆಯುಷ್ ಯೋಜನೆ.

aayush

ಇತ್ತ ಅರ್ಬಾಜ್ ಖಾನ್ ಕೂಡ ತಮ್ಮ ಭಾವನ ಕನಸಿಗೆ ನೀರೆರೆದಿದ್ದಾರೆ. "ಆಯುಷ್ ಅತ್ಯಂತ ಸುಂದರ ಹುಡುಗ. ಸಿನಿಮಾದಲ್ಲಿ ನಟಿಸುವ ಆಸಕ್ತಿಯೂ ಇದೆ. ಆದರೆ, ಆ ಕಾಲ ಯಾವಾಗ ಬರುತ್ತೋ ಗೊತ್ತಿಲ್ಲ" ಎಂದಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಇದೇ ಸಂದರ್ಭದಲ್ಲಿ ತಮ್ಮ ಕುರಿತೂ ಹೇಳಿಕೊಂಡಿರುವ ಅರ್ಬಾಜ್, "ನಾನು ನಟನೆಯನ್ನು ಬಿಟ್ಟಿಲ್ಲ. ಸ್ವಲ್ಪದಿನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ ಅಷ್ಟೇ" ಎಂದು ಸ್ಪಷ್ಟಪಡಿಸುವ ಮೂಲಕ ತಮ್ಮ ನಟನೆಯ ಕುರಿತು ಬಾಲಿವುಡ್‌ನಲ್ಲಿ ಎದ್ದಿದ್ದ ಗುಲ್ಲಿಗೆ ಮಂಗಳ ಹಾಡಿದ್ದಾರೆ.

ಅರ್ಬಾಜ್ ಈಗ ತಮ್ಮ ನಿರ್ಮಾಣದ 'ಡಾಲಿ ಕಿ ಡೋಲಿ' ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ತೊಡಗಿದ್ದಾರೆ. ಅಭಿಷೇಕ ಡೋಗ್ರಾ ನಿರ್ದೇಶಿಸಿರುವ ಈ ಚಲನಚಿತ್ರದಲ್ಲಿ ಸೋನಂ ಕಪೂರ್ ಹಾಗೂ ರಾಜಕುಮಾರ್ ರಾವ್ ನಟಿಸಿದ್ದಾರೆ.

English summary
Aayush Sharma, who recently married Salman Khan and Arbaaz Khan’s sister Arpita Khan, aspires to become an actor. Actor and filmmaker Arbaaz Khan said he doesn’t know when that time comes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada