For Quick Alerts
  ALLOW NOTIFICATIONS  
  For Daily Alerts

  ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್

  |

  ಬಾಲಿವುಡ್ ನಟ, ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಗೆ ಟ್ರೋಲ್ ಗಳ ಕಾಟ ಇನ್ನೂ ತಪ್ಪಿಲ್ಲ. ಒಂದಲ್ಲೊಂದು ಕಾರಣಕ್ಕೆ ಅಭಿಷೇಕ್ ಟ್ರೋಲ್ ಗಳಿಗೆ ಗುರಿಯಾಗುತ್ತಿದ್ದಾರೆ. ಸ್ಟಾರ್ ಕುಟುಂಬದಿಂದ ಬಂದ ಕಾರಣಕ್ಕಾಗಿ ಅಭಿಷೇಕ್ ಹೆಚ್ಚು ಬಾರಿ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಿದ್ದಾರೆ.

  ಚಿತ್ರರಂಗದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಅಭಿಷೇಕ್, ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಲು ಸಾಧ್ಯವಾಗಿಲ್ಲ. ಸ್ಟಾರ್ ನಟನ ಮಗನಾದರೂ ಅಭಿಷೇಕ್ ಚಿತ್ರರಂಗದಲ್ಲಿ ತನ್ನ ಸ್ಥಾನ ಭದ್ರ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ಅಭಿಷೇಕ್ ಸಿನಿಮಾಗಳು ನಿರೀಕ್ಷೆಯ ಯಶಸ್ಸು ಕಾಣಲಿಲ್ಲ. ಈ ಎಲ್ಲಾ ಕಾರಣಕ್ಕೆ ಅಭಿಷೇಕ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಆದರೆ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಅಭಿಷೇಕ್, ಟ್ರೋಲ್ ಗಳಿಗೆ ಖಡಕ್ ಉತ್ತರ ನೀಡುತ್ತಿದ್ದಾರೆ. ಮುಂದೆ ಓದಿ..

  ಅಮಿತಾಬ್ ಬಚ್ಚನ್ ಅಭಿಮಾನಿ WWE ಸೂಪರ್ ಸ್ಟಾರ್ ಜಾನ್ ಸೀನ!ಅಮಿತಾಬ್ ಬಚ್ಚನ್ ಅಭಿಮಾನಿ WWE ಸೂಪರ್ ಸ್ಟಾರ್ ಜಾನ್ ಸೀನ!

  ಅಭಿಷೇಕ್ ಗೆ ಮುಳುವಾಯ್ತಾ ನೆಪೋಟಿಸಂ

  ಅಭಿಷೇಕ್ ಗೆ ಮುಳುವಾಯ್ತಾ ನೆಪೋಟಿಸಂ

  ನೆಪೋಟಿಸಂ ಕಾರಣಕ್ಕೆ ಅಭಿಷೇಕ್ ಬಚ್ಚನ್ ಚಿತ್ರರಂಗದಲ್ಲಿ ಇದ್ದಾರೆ, ಸಿನಿಮಾ ಅವಕಾಶಗಳು ಸಿಗುತ್ತಿವೆ ಎಂದು ಅನೇಕರು ನೇರವಾಗಿ ಟ್ವೀಟ್ ಮಾಡಿ ಹೇಳುತ್ತಿದ್ದಾರೆ. ಇತ್ತೀಚಿಗೆ ನೆಟ್ಟಿಗನೊಬ್ಬ ಟ್ವೀಟ್ ಮಾಡಿ ಅಭಿಷೇಕ್ ಅವರನ್ನು ಕೆಣಕಿದ್ದಾರೆ. "ಹೇ ಅಭಿಷೇಕ್ ನೀವು ನೆಪೋಟಿಸಂ ಪ್ರಾಡಕ್ಟ್. ನೀವು ಕಷ್ಟಪಡುತ್ತೀರಿ ಎಂದರೆ ಅದೆ ರೀತಿ ಕಷ್ಟ ಎಲ್ಲರಿಗೂ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.' ಎಂದಿದ್ದಾರೆ.

  ಬಿಗ್ ಬ್ಯಾನರ್ ಸಿನಿಮಾಗಳಿಂದ ಯೂಟ್ಯೂಬ್ ವಿಡಿಯೋ ಭಿನ್ನ

  ಬಿಗ್ ಬ್ಯಾನರ್ ಸಿನಿಮಾಗಳಿಂದ ಯೂಟ್ಯೂಬ್ ವಿಡಿಯೋ ಭಿನ್ನ

  ಅಷ್ಟೆಯಲ್ಲ 'ನಾನು ಮತ್ತು ಸ್ನೇಹಾ ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತೇನೆ. ನಿಮ್ಮ ಬಿಗ್ ಬಜೆಟ್ ಸಿನಿಮಾಗಳಿಂತ ಇದು ವಿಭಿನ್ನವಾಗಿದೆ. ನಾನು ಇದನ್ನ ಸ್ವಂತವಾಗಿ ಮಾಡುತ್ತೇನೆ. ನಾನು ಅಪ್ಪನ ಸಹಾಯ ಪಡೆಯುವುದಿಲ್ಲ' ಎಂದು ಟ್ವೀಟ್ ಮಾಡಿ ಅಭಿಷೇಕ್ ಬಚ್ಚನ್ ಕಾಲೆಳೆಯುತ್ತಿದ್ದಾರೆ.

  ಹಲವು ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿದ್ದಕ್ಕೆ ಕಾರಣ ತಿಳಿಸಿದ ಅಭಿಷೇಕ್ ಬಚ್ಚನ್ಹಲವು ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿದ್ದಕ್ಕೆ ಕಾರಣ ತಿಳಿಸಿದ ಅಭಿಷೇಕ್ ಬಚ್ಚನ್

  ಟ್ರೋಲ್ ಗೆ ಅಭಿಷೇಕ್ ತಿರುಗೇಟು

  ಟ್ರೋಲ್ ಗೆ ಅಭಿಷೇಕ್ ತಿರುಗೇಟು

  ನೆಟ್ಟಿಗನ ಟ್ವೀಟ್ ಗೆ ಅಭಿಷಕ್ ಬಚ್ಚನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 'ನೀವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ನೀವು ಪ್ರಬುದ್ಧರಲ್ಲ. ತಪ್ಪಾದ ಮತ್ತು ಬೋಗಸ್ ಕಥೆಗಳನ್ನು ನಂಬುವುದನ್ನು ನಿಲ್ಲಿಸಿ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಪತ್ನಿಯ ಸಲುವಾಗಿಯಾದರು ಯೋಚಿಸಿ' ಎಂದು ತಿರುಗೇಟು ನೀಡಿದ್ದಾರೆ.

  ಗಾಂಜಾ ಇದಿಯಾ ಎಂದು ಕೇಳಿದ ನೆಟ್ಟಿಗರು

  ಗಾಂಜಾ ಇದಿಯಾ ಎಂದು ಕೇಳಿದ ನೆಟ್ಟಿಗರು

  ಇತ್ತೀಚಿಗಷ್ಟೆ ನೆಟ್ಟಿಗನೊಬ್ಬ ಟ್ವೀಟ್ ಮಾಡಿ ಅಭಿಷೇಕ್ ಗೆ, 'ನಿಮ್ಮ ಬಳಿ ಗಾಂಜಾ ಇದಿಯಾ' ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಭಿಷೇಕ್ 'ಇಲ್ಲ, ಕ್ಷಮಿಸಿ. ಹಾಗೆ ಮಾಡಬೇಡಿ. ನಿಮಗೆ ಸಹಾಯ ಮಾಡಲು ಮತ್ತು ನಿಮ್ಮನ್ನು ಮುಂಬೈ ಪೊಲೀಸರಿಗೆ ಪರಿಚಯಿಸಲು ತುಂಬಾ ಸಂತೋಷವಾಗುತ್ತೆ. ಖಂಡಿತವಾಗಿ ಅವರಿಗೆ ನಿಮ್ಮ ಅವಶ್ಯಕತೆಗಳನ್ನು ತಿಳಿದುಕೊಳ್ಳಲು ತುಂಬಾ ಸಂತೋಷವಾಗುತ್ತೆ ಮತ್ತು ನಿಮಗೆ ಸಹಾಯ ಮಾಡುತ್ತಾರೆ' ಎಂದು ಮುಂಬೈ ಪೋಲಿಸರಿಗೆ ಟ್ಯಾಗ್ ಮಾಡಿ ತಿರುಗೇಟು ನೀಡಿದ್ದರು.

  English summary
  Actor Abhishek Bachchan hits back at troll who said he’s a product of nepotism. Abhishek calls him ill informed immature, naive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X