»   » ಆಸ್ಕರ್ ರೇಸಿಗೆ ಅರ್ಹತೆ ಪಡೆದ ಎಂಎಸ್ ಧೋನಿ ಹಾಗೂ ಸರಬ್ಜಿತ್!

ಆಸ್ಕರ್ ರೇಸಿಗೆ ಅರ್ಹತೆ ಪಡೆದ ಎಂಎಸ್ ಧೋನಿ ಹಾಗೂ ಸರಬ್ಜಿತ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರತೀಯ ಚಿತ್ರರಂಗದಿಂದ ಅಧಿಕೃತವಾಗಿ ಶ್ರೇಷ್ಠ ವಿದೇಶಿ ಚಿತ್ರ ವಿಭಾಗಕ್ಕೆ ಸ್ಪರ್ಧಿಸಿದ್ದ ತಮಿಳು ಚಿತ್ರ 'ವಿಸಾರಣೈ' ರೇಸಿನಿಂದ ಹೊರಬಿದ್ದಿದೆ. ಆದರೆ, ಮತ್ತೆರಡು ಚಿತ್ರಗಳು ರೇಸ್ ಗೆ ಎಂಟ್ರಿ ಕೊಡಲು ಅರ್ಹತೆ ಪಡೆದುಕೊಂಡಿವೆ.

ಎಂಎಸ್ ಧೋನಿ: ದಿ ಅನ್ ಟೋಲ್ಡ್ ಸ್ಟೋರಿ ಹಾಗೂ ಸಬರ್ಜಿತ್ ಚಿತ್ರಗಳು ಈಗ 336ಕ್ಕೂ ಅಧಿಕ ಚಿತ್ರಗಳ ಜತೆ ಸ್ಪರ್ಧೆಗಿಳಿಯಬಹುದಾಗಿದೆ. [ಲಿಯಾನಾರ್ಡೋ ಡಿಕಾಪ್ರಿಯೋಗೆ ಕೊನೆಗೂ ಆಸ್ಕರ್ ಸಿಕ್ತು!]

ಕ್ರಿಕೆಟರ್ ಧೋನಿ ಅವರ ಜೀವನ ಆಧಾರಿತ ಚಿತ್ರದಲ್ಲಿ ಸುಶಾಂತ್ ಸಿಂಗ್ ಅವರು ಧೋನಿ ಪಾತ್ರ ನಿರ್ವಹಿಸಿದ್ದಾರೆ. ಪಾಕಿಸ್ತಾನದ ಜೈಲಿನಲ್ಲಿ ಮೃತಪಟ್ಟ ಭಾರತೀಯ ಸರಬ್ಜಿತ್ ಕುರಿತ ಚಿತ್ರದಲ್ಲಿ ರಣದೀಪ್ ಹೂಡಾ ಹಾಗೂ ಐಶ್ವರ್ಯ ರೈ ಬಚ್ಚನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದಲ್ಲದೆ ಭಾರತೀಯ ಮೂಲದ ಅಮೆರಿಕನ್ ಚಿತ್ರ ನಿರ್ಮಾಪಕಿ ಮೀರಾ ನಾಯರ್ ನಿರ್ದೇಶನದ ಕ್ವೀನ್ ಆಫ್ ಕಾಟ್ವೆ ಕೂಡಾ ಪಟ್ಟಿಯಲ್ಲಿದೆ.

Academy Awards 2017: MS Dhoni: The Untold Story, Sarbjit are eligible for Oscar nomination

ಅಕಾಡಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸ್, ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿರುವ ಚಿತ್ರಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಲಾಸ್‌ಎಂಜಲೀಸ್‌ನ ವಾಣಿಜ್ಯ ಚಿತ್ರಮಂದಿರದಲ್ಲಿ ಜನವರಿ 1 ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಈ ಚಿತ್ರ ಕನಿಷ್ಠ ಏಳು ದಿನಗಳ ಕಾಲ ಪ್ರದರ್ಶನಗೊಂಡಿರಬೇಕು ಹಾಗೂ ಚಿತ್ರ 40 ನಿಮಿಷಕ್ಕಿಂತ ಹೆಚ್ಚು ಅವಧಿಯದ್ದಾಗಿರಬೇಕು.

ಜನಪ್ರಿಯ ಚಿತ್ರಗಳಾದ ಲಾ ಲಾ ಲ್ಯಾಂಡ್, ಮೂನ್‌ಲೈಟ್, ಮ್ಯಾಂಚೆಸ್ಟರ್ ಬೈ ದ ಸೀ, ಸೈಲೆನ್ಸ್, ಅರೈವಲ್ ಹಾಗೂ ಹ್ಯಾಕ್ಸೊ ರಿಡ್ಜ್ ಚಿತ್ರಗಳು ಕೂಡಾ ಪಟ್ಟಿಯಲ್ಲಿವೆ. ಸೂಪರ್‌ ಹೀರೊ ಚಿತ್ರಗಳಾದ ಡೆಡ್‌ಪೂಲ್, ಸುಸೈಡ್ ಸ್ಕ್ವಾಡ್, ಕ್ಯಾಪ್ಟನ್ ಅಮೆರಿಕ, ಸಿವಿಲ್ ವಾರ್, ಎಕ್ಸ್ ಮನ್ ಅಪೋಕ್ಲಿಪ್ಸ್ ಕೂಡಾ ರೇಸ್‌ ನಲ್ಲಿವೆ.

ಮೂರು ರಾಷ್ಟ್ರಪ್ರಶಸ್ತಿ ವಿಜೇತ ತಮಿಳು ಚಿತ್ರ ವಿಸಾರಣೈ (ವಿಚಾರಣೆ) ರೇಸಿನಿಂದ ಹೊರಬಿದ್ದಿದೆ. ಈ ಬಗ್ಗೆ ನಟ ನಿರ್ಮಾಪಕ ಧನುಶ್ ಟ್ವೀಟ್ ಮಾಡಿದ್ದಾರೆ. ಉಳಿದಂತೆ ಎಆರ್ ರೆಹಮಾನ್ ಅವರು ಸಂಗೀತ ನೀಡಿರುವ 'ಪೀಲೆ: ಎ ಲೆಜೆಂಡ್ ಇಸ್ ಬಾರ್ನ್' ಕೂಡಾ ಆಸ್ಕರ್ ರೇಸಿನಲ್ಲಿದೆ. ಫೆಬ್ರವರಿ 26ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

English summary
Visaranai's Best Foreign Film Oscar hope has been crushed but two Indian films are on the long list for Best Picture. MS Dhoni: The Untold Story and Sarbjit are among the 336 films that the Academy of Motion Picture Arts and Sciences have declared eligible for nomination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada