For Quick Alerts
  ALLOW NOTIFICATIONS  
  For Daily Alerts

  ಬಿಹಾರ ಮೂಲದ ನಟ ಮುಂಬೈನಲ್ಲಿ ಆತ್ಮಹತ್ಯೆ: ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬ

  |

  ಸುಶಾಂತ್ ಸಿಂಗ್ ಸಾವಿನ ಪ್ರಕರಣವೇ ಗೋಜಲಾಗಿರುವಾಗ, ಮತ್ತೊಬ್ಬ ಬಿಹಾರ ಮೂಲದ ನಟ, ಮುಂಬೈ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಬಿಹಾರದಿಂದ ನಟನೆ ಅವಕಾಶ ಅರಸಿ ಮುಂಬೈಗೆ ಬಂದು ಇಲ್ಲಿಯೇ ನೆಲೆಸಿದ್ದ ನಟ ಅಕ್ಷತ್ ಉತ್ಪರ್ಷ್ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

  ಭಾನುವಾರ ನಟ ಅಕ್ಷತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಭಾನುವಾರ ರಾತ್ರಿ 11:30 ರ ವೇಳೆಗೆ ಆತನ ರೂಂ ಮೇಟ್‌ ಅಕ್ಷತ್ ನಿವಾಸಕ್ಕೆ ಬಂದಾಗ ಆತ್ಮಹತ್ಯೆ ವಿಷಯ ಗೊತ್ತಾಗಿದೆ. ಇಂದು ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

  ಅಕ್ಷತ್‌ನದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಅಕ್ಷತ್ ಕುಟುಂಬ ಅನುಮಾನ ವ್ಯಕ್ತಪಡಿಸಿದೆ. ಭಾನುವಾರ ಅಕ್ಷತ್ ನಮಗೆ ಕರೆ ಮಾಡಿ ಮಾತನಾಡಿದ್ದಾನೆ, ಅಂದು ಆತ ಸಾಮಾನ್ಯವಾಗಿಯೇ ನಮ್ಮೊಂದಿಗೆ ಮಾತನಾಡಿದ ಎಂದಿದೆ ಅಕ್ಷತ್ ಕುಟುಂಬ.

  ರಾಗಿಣಿ, ಸಂಜನಾ ಮೊಬೈಲ್ ನಿಂದ ಬಯಲಾಯ್ತು ಸ್ಪೋಟಕ ಮಾಹಿತಿ..? | Filmibeat Kannada

  ಅಕ್ಷತ್ ಕೆಲವು ಭೋಜಪುರಿ ಸಿನಿಮಾಗಳು ಹಾಗೂ ಧಾರಾವಾಹಿಗಳನ್ನು ನಟಿಸಿದ್ದಾರೆ. ಅಕ್ಷತ್ ಸಾವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸುಶಾಂತ್ ಸಿಂಗ್ ಸಾವಿಗೆ ಹೋಲಿಸುತ್ತಿದ್ದಾರೆ.

  English summary
  Actor Akshat Utkarsh who hailed from Bihar commit suicide in Mumbai on Sunday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X