For Quick Alerts
  ALLOW NOTIFICATIONS  
  For Daily Alerts

  ಮಿಲ್ಕಾ ಸಿಂಗ್ ಪಾತ್ರಕ್ಕೆ ಜೀವ ತುಂಬಿದ್ದ ನಟ ಫರಾನ್ ಅಖ್ತಾರ್ ಹೃದಯಸ್ಪರ್ಶಿ ಪತ್ರ

  |

  'ಫ್ಲೈಯಿಂಗ್ ಸಿಖ್' ಖ್ಯಾತಿಯ ಲೆಜೆಂಡರಿ ಅಥ್ಲೀಟ್ ಮಿಲ್ಕಾ ಸಿಂಗ್ ಶುಕ್ರವಾರ ತಡರಾತ್ರಿ ನಿಧಹೊಂದಿದರು. 91 ವರ್ಷದ ಮಿಲ್ಕಾ ಸಿಂಗ್ ಕೊರೊನಾ ವೈರಸ್ ಗೆ ತುತ್ತಾಗಿದ್ದರು. ಒಂದು ತಿಂಗಳ ಕೊರೊನಾ ವಿರುದ್ಧ ಹೋರಾಟದಲ್ಲಿ ಮಿಲ್ಕಾ ಸಿಂಗ್ ಕೊನೆಯುಸಿರೆಳೆದರು. ಲೆಜೆಂಡರಿ ಆಟಗಾರನ ನಿಧನಕ್ಕೆ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ.

  ಬಾಲಿವುಡ್ ನ ಸಾಕಷ್ಟು ಗಣ್ಯರು ಕಂಬನಿ ಮಿಡಿದಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್, ರವೀನಾ ಟಂಡನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಖ್ಯಾತ ಆಟಗಾರನ ಜೀವನ ಭಾಗ್ ಮಿಲ್ಕಾ ಭಾಗ್ ಶೀರ್ಷಿಕೆಯಲ್ಲಿ ಸಿನಿಮಾ ಆಗಿ ತೆರೆಮೇಲೆ ಬಂದಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  ಮಿಲ್ಕಾ ಸಿಂಗ್ ಆಗಿ ಬಾಲಿವುಡ್ ಖ್ಯಾತ ನಟ ಫರಾನ್ ಅಖ್ತಾರ್ ಮಿಂಚಿದ್ದರು. ಜೆಲೆಂಡರಿ ಆಟಗಾರನ ಪಾತ್ರಕ್ಕೆ ಜೀವತುಂಬುವಲ್ಲಿ ಫರಾನ್ ಯಶಸ್ವಿಯಾಗಿದ್ದರು. ಅಂದಹಾಗೆ ಈ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡಬೇಕಿತ್ತು. ಆದರೆ ಡೇಟ್ ಸಮಸ್ಯೆಯಿಂದ ಈ ಸಿನಿಮಾ ಕೈ ಬಿಟ್ಟಿದ್ದರು. ಈ ಬಗ್ಗೆ ಅಕ್ಷಯ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಟ್ವೀಟ್ ಮಾಡಿರುವ ಅಕ್ಷಯ್, " ಅವರ ಪಾತ್ರವನ್ನು ಮಾಡದಿರುವುದಕ್ಕೆ ನಾನು ಶಾಶ್ವತವಾಗಿ ವಿಷಾದಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

  ದಿಗ್ಗಜ ಅಥ್ಲೀಟ್ ಮಿಲ್ಕಾ ಸಿಂಗ್ ನಿಧನಕ್ಕೆ ಸಿನಿ ಗಣ್ಯರ ಕಂಬನಿದಿಗ್ಗಜ ಅಥ್ಲೀಟ್ ಮಿಲ್ಕಾ ಸಿಂಗ್ ನಿಧನಕ್ಕೆ ಸಿನಿ ಗಣ್ಯರ ಕಂಬನಿ

  2013ರಲ್ಲಿ ಬಿಡುಗಡೆಯಾಗಿದ್ದ ಭಾಗ ಮಿಲ್ಕಾ ಭಾಗ್ ಸಿನಿಮಾ ಸೂಪರ್ ಆಗಿತ್ತು. ನಟ ಫರಾಖ್ ಅಖ್ತಾರ್ ಅವರಿಗೂ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾವಾಗಿದೆ. ಇಂದು ಇಹಲೋಕ ತ್ಯಜಿಸಿರುವ ಮಿಲ್ಕಾ ಸಿಂಗ್ ಬಗ್ಗೆ ಫರಾನ್ ಭಾವುಕ ಪತ್ರ ಹಂಚಿಕೊಂಡಿದ್ದಾರೆ. ಮುಂದೆ ಓದಿ..

  ನೀವಿಲ್ಲ ಎನ್ನುವುದನ್ನು ನಾನು ನಿರಾಕರಿಸುತ್ತೇನೆ

  ನೀವಿಲ್ಲ ಎನ್ನುವುದನ್ನು ನಾನು ನಿರಾಕರಿಸುತ್ತೇನೆ

  "ಆತ್ಮೀಯ ಮಿಲ್ಕಾ ಸಿಂಗ್ ಜಿ, ನನ್ನಲ್ಲಿ ಒಂದು ಭಾಗವಾಗಿದ್ದ ನೀವು ಇನ್ಮುಂದೆ ಇಲ್ಲ ಎಂದು ಒಪ್ಪಿಕೊಳ್ಳಲು ನಾನು ನಿರಾಕರಿಸುತ್ತೇನೆ. ಬಹುಶಃ ನಾನು ನಿಮ್ಮಿಂದ ಪಡೆದ ಮೊಂಡುತನ ಕಡೆಯವರೆಗೂ ಇರಬಹುದು. ಅದನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ" ಎಂದಿದ್ದಾರೆ.

  ಫ್ಲಾಪ್ ಚಿತ್ರಕ್ಕಾಗಿ ಸೂಪರ್ ಹಿಟ್ ಸಿನಿಮಾ ಕೈ ಬಿಟ್ಟಿದ್ದ ಅಕ್ಷಯ್ ಕುಮಾರ್?ಫ್ಲಾಪ್ ಚಿತ್ರಕ್ಕಾಗಿ ಸೂಪರ್ ಹಿಟ್ ಸಿನಿಮಾ ಕೈ ಬಿಟ್ಟಿದ್ದ ಅಕ್ಷಯ್ ಕುಮಾರ್?

  ನೀವು ಯಾವಾಗಲು ಜೀವಂತವಾಗಿ ಇರುತ್ತೀರಿ

  ನೀವು ಯಾವಾಗಲು ಜೀವಂತವಾಗಿ ಇರುತ್ತೀರಿ

  "ಸತ್ಯ ಏನು ಎಂದರೆ ನೀವು ಯಾವಾಗಲು ಜೀವಂತವಾಗಿ ಇರುತ್ತೀರಿ. ಏಕೆಂದರೆ ನೀವು ದೊಡ್ಡ ಹೃದಯವಂತ, ಪ್ರೀತಿಯ, ವಾರ್ಮ್ ಮತ್ತು ತುಂಬಾ ಸರಳ ವ್ಯಕ್ತಿ. ನೀವು ಕನಸನ್ನು ಪ್ರತಿನಿಧಿಸುತ್ತೀರಿ, ನೀವು ಐಡಿಯಾವನ್ನು ಪ್ರತಿನಿಧಿಸುತ್ತೀರಿ. ನೀವು ಕಠಿಣ ಪರಿಶ್ರಮ, ಪ್ರಾಮಾಣಿಕತೆ, ದೃಢ ನಿರ್ಧಾರವನ್ನು ಪ್ರತಿನಿಧಿಸುತ್ತೀರಿ. ಒಬ್ಬ ವ್ಯಕ್ತಿಯನ್ನು ಮೊಣಕಾಲುಗಳಿಂದ ಎತ್ತಿ ಆಕಾಶ ಮುಟ್ಟುವಂತೆ ಮಾಡಬಹುದು."

  ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ

  ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ

  "ನೀವು ನಮ್ಮೆಲ್ಲರ ಜೀವನವನ್ನು ಮುಟ್ಟಿದ್ದೀರಿ. ನಿಮ್ಮನ್ನು ತಂದೆ ಮತ್ತು ಸ್ನೇಹಿತ ಎಂದು ತಿಳಿದವರಿಗೆ ಇದು ಆಶೀರ್ವಾದ. ನಿರಂತರ ಸ್ಫೂರ್ತಿಯ ಮೂಲ. ನಾನು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ದೀರ್ಘವಾಗಿ ಬರೆದಿದ್ದಾರೆ. ಜೊತೆಗೆ ಮಿಲ್ಕಾ ಸಿಂಗ್ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಪಾಕಿಸ್ತಾನವನ್ನು ಸೋಲಿಸಿ ಪಾಕ್ ಪ್ರಧಾನಿಯಿಂದ ಬಿರುದು ಪಡೆದಿದ್ದ ಭಾರತೀಯ | Milkha Singh | Oneindia Kannada
  ಅತೀ ಹೆಚ್ಚು ಗಳಿಕೆ ಮಾಡಿದ ಬಯೋಪಿಕ್

  ಅತೀ ಹೆಚ್ಚು ಗಳಿಕೆ ಮಾಡಿದ ಬಯೋಪಿಕ್

  ಭಾಗ್ ಮಿಲ್ಕಾ ಭಾಗ್ ಸಿನಿಮಾ ಸುಮಾರು 200 ಕೋಟಿ ಗಳಿಕೆ ಕಂಡಿದೆ. ಕೇವಲ ಭಾರತದಲ್ಲೇ 100 ಕೋಟಿಗೂ ಅಧಿಕ ಹಣ ಗಳಿಸಿತ್ತು. ಆ ಸಮಯದಲ್ಲಿ ಬಾಲಿವುಡ್‌ ಇಂಡಸ್ಟ್ರಿಯಲ್ಲಿ ಹೆಚ್ಚು ಸಕ್ಸಸ್ ಮತ್ತು ಮೆಚ್ಚುಗೆ ಪಡೆದ ಚಿತ್ರ ಇದು. ಓಂಪ್ರಕಾಶ್ ಮೆಹ್ರಾ ಸಾರಥ್ಯದಲ್ಲಿ ಬಂದ ಈ ಸಿನಿಮಾ ಸಕ್ಸಸ್ ಫುಲ್ ಬಯೋಪಿಕ್ ಗಳಲ್ಲಿ ಒಂದಾಗಿದೆ.

  English summary
  Bollywood Actor Farhan Akhtar heartfelt note on Milkha Singh, Says I love you with all my heart.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X