»   » ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆಯಲ್ಲ ಕೊಲೆ?

ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆಯಲ್ಲ ಕೊಲೆ?

By: ಉದಯರವಿ
Subscribe to Filmibeat Kannada

ಬಾಲಿವುಡ್ ನಟಿ ಜಿಯಾ ಖಾನ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದು, ಜಿಯಾ ಅವರದು ಆತ್ಮಹತ್ಯೆಯಲ್ಲ ಕೊಲೆ ಎಂಬ ಅನುಮಾನಗಳನ್ನು ಬಲಪಡಿಸಿವೆ.

ಜಿಯಾ ಖಾನ್ ಸತ್ತಾಗ ಆಕೆಯ ಒಳಉಡುಪಿನಲ್ಲಿ ರಕ್ತದ ಕಲೆ ಇರುವುದು ಪತ್ತೆಯಾಗಿದೆ. ಜಿಯಾ ಅವರ ಬೆರಳುಗಳಿಗೆ ಮನುಷ್ಯನ ಮಾಂಸದ ತುಣುಕುಗಳೂ ಅಂಟಿದ್ದವು. ಇವೆಲ್ಲವನ್ನೂ ನೋಡಿದರೆ ಜಿಯಾ ಖಾನ್ ಅವರದು ಆತ್ಮಹತ್ಯೆಯಲ್ಲ ಕೊಲೆ ಇರಬಹುದು ಎಂಬ ಗುಮಾನಿಗಳು ಬಲವಾಗುತ್ತಿವೆ ಎನ್ನುತ್ತಿವೆ ಪೊಲೀಸ್ ಮೂಲಗಳು.


ಈ ಹಿಂದೆ ಜಿಯಾ ಅವರ ತಾಯಿ ರಬಿಯಾ ಅಮಿನ್ ಅವರು ತಮ್ಮ ಪುತ್ರಿಯದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದರು. ಈ ಸಂಬಂಧ ಅವರು ಬಾಂಬೆ ಹೈಕೋರ್ಟ್ ಗೂ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದ್ದರು.

ಆರೋಪಿ ಸೂರಜ್ ಪಾಂಚೋಲಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಎಷ್ಟು ಸರಿ. ನೇಣಿಗೆ ಮೊದಲೇ ಜಿಯಾ ಅವರನ್ನು ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳನ್ನು ರಬಿಯಾ ಮಾಡಿದ್ದರು.

ಬಾಲಿವುಡ್ ನ ಮಾದಕ ಬೆಡಗಿ ನಫೀಸಾ ಅಲಿಯಾಸ್ ಜಿಯಾ ಖಾನ್ ಸೋಮವಾರ (ಜೂ.3) ಮಧ್ಯರಾತ್ರಿ ತಮ್ಮ ನಿವಾಸದಲ್ಲಿ ಸಾವಪ್ಪಿದ್ದರು. ನೇಣು ಬಿಗಿದುಕೊಂಡು ಸ್ಥಿತಿಯಲ್ಲಿದ್ದ ಅವರ ದೇಹ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಎಂದು ಮೇಲ್ಮೋಟಕ್ಕೆ ಗೊತ್ತಾದರೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹತ್ಯೆ ಇರಬಹುದು ಎಂಬ ಶಂಕೆ ಇತ್ತು.

English summary
The Central Forensic Science Laboratory (CFSL) at Kalina, Mumbai, indicates signs of struggle by late actor Jiah Khan before her death. The August 16 report, commissioned by the Juhu police station, says that human tissues and blood were found under the nail clippings taken from both hands of the actor’s body.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada