»   » ಅಬಾರ್ಷನ್ ಮಾಡಿಸಿಕೊಂಡಿದ್ದ ತಾರೆ ಜಿಯಾ ಖಾನ್

ಅಬಾರ್ಷನ್ ಮಾಡಿಸಿಕೊಂಡಿದ್ದ ತಾರೆ ಜಿಯಾ ಖಾನ್

Posted By:
Subscribe to Filmibeat Kannada

ಬಾಲಿವುಡ್ ತಾರೆ ಜಿಯಾ ಖಾನ್ ಆತ್ಮಹತ್ಯೆ ಬಳಿಕ ಆಕೆಯ ಬಗೆಗಿನ ಒಂದೊಂದೇ ಸಂಗತಿಗಳು ಹೊರಬೀಳುತ್ತಿವೆ. ಜೂನ್ 3ರಂದು ಮುಂಬೈನ ತನ್ನ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಜಿಯಾ ಈಗ್ಗೆ ಒಂದು ವರ್ಷದ ಹಿಂದೆ ಗರ್ಭಪಾತ ಮಾಡಿಸಿಕೊಂಡಿದ್ದರು ಎಂಬ ವಿಷಯ ಬಹಿರಂಗವಾಗಿದೆ.

ಜಿಯಾರನ್ನು ಗರ್ಭಿಣಿ ಮಾಡಿದ್ದು ಬೇರಾರು ಅಲ್ಲ ಆಕೆಯ ಬಾಯ್ ಫ್ರೆಂಡ್ ಸುರೂಜ್ ಪಂಚೋಲಿ ಎನ್ನಲಾಗಿದೆ. ಅಬಾರ್ಷನ್ ವೇಳೆ ಈತನೂ ಜೊತೆಗಿದ್ದ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಈ ಬಗ್ಗೆ ಪೊಲೀಸರು ಕೊಟ್ಟ ವಿವರಗಳು ಹೀಗಿವೆ...

"ಈ ವರ್ಷದ ಆರಂಭದ ಎರಡು ತಿಂಗಳಲ್ಲಿ ಗುಳಿಗೆಗಳನ್ನು ನೀಡಿ ಜಿಯಾ ಖಾನ್ ಅವರಿಗೆ ಗರ್ಭಪಾತ ಮಾಡಿಸಲಾಗಿದೆ. ಈ ಸಂಬಂಧ ವೈದ್ಯರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ." ಎಂದಿದ್ದಾರೆ. ಜಿಯಾ ಸಾವಿಪ್ಪಿದ ಮೂರು ದಿನಗಳ ಬಳಿಕ ಆಕೆಯ ಡೆತ್ ನೋಟ್ ಸಿಕ್ಕಿತ್ತು.

ಜಿಯಾ ಮೇಲೆ ಬಾಯ್ ಫ್ರೆಂಡ್ ಅತ್ಯಾಚಾರ

ಜಿಯಾರ ಮೇಲೆ ಆಕೆಯ ಬಾಯ್ ಫ್ರೆಂಡ್ ಅತ್ಯಾಚಾರವೆಸಗಿ, ಆಕೆಯ ಮೇಲೆ ದೌರ್ಜನ್ಯ ಮಾಡಿ ಮಾನಸಿಕವಾಗಿ ಹಿಂಸಿಸಿದ್ದ. ಡೆಟ್ ನೋಟ್ ನ ಆರನೇ ಪುಟದಲ್ಲಿ ಅಬಾರ್ಷನ್ ಬಗ್ಗೆಯೂ ಹೇಳಿಕೊಂಡಿದ್ದಾಳೆ.

ಸಮಾಜಕ್ಕೆ ಹೆದರಿ ಗರ್ಭಪಾತ ಮಾಡಿಸಿಕೊಂಡೆ

ಅತ್ಯಾಚಾರದ ಬಳಿಕ ತಾನು ಗರ್ಭಿಣಿಯಾಗಿ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಇದಕ್ಕಾಗಿ ತುಂಬ ನೊಂದುಕೊಂಡಿದ್ದೇನೆ. ಸಮಾಜಕ್ಕೆ ಹೆದರಿ ಕಡೆಗೆ ಗರ್ಭಪಾತ ಮಾಡಿಸಿಕೊಂಡೆ ಎಂದು ಆಕೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಆಕೆಯ ಬಾಯ್ ಫ್ರೆಂಡ್ ಸೂರಜ್ ಸಹ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.

ಸೂರಜ್ ಜೊತೆ ಲಿವ್ ಇನ್ ಸಂಬಂಧ

ಜಿಯಾ ಖಾನ್ ಜೊತೆ ಲಿವ್ ಇನ್ ಸಂಬಂಧ ಹೊಂದಿದ್ದಾಗಿ ಸೂರಜ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಒಟ್ಟಿನಲ್ಲಿ ಪೊಲೀಸರು ತನಿಖೆಯ ಆಳಕ್ಕೆ ಇಳಿದಷ್ಟೂ ಒಂದೊಂದೇ ವಿವರಗಳು ಬಯಲಾಗುತ್ತಿವೆ.

ಜಿಯಾ ಸಾವಿಗೆ ಬಾಯ್ ಫ್ರೆಂಡ್ ಹೊಣೆ

ಜಿಯಾ ಸಾವಿಗೆ ಸೂರಜ್ ಪಂಚೋಲಿ (ಆದಿತ್ಯ ಪಂಚೋಲಿ ಮಗ) ಅವರನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ. "ನಿನಗಾಗಿ ಎಲ್ಲವನ್ನೂ ಧಾರೆಯೆರೆದೆ, ಆದರೆ ನೀನು ನನ್ನ ಸಂತೋಷವನ್ನು ಕಿತ್ತುಕೊಂಡೆ. ನನ್ನ ಭವಿಷ್ಯ ಮತ್ತು ನನ್ನ ಜೀವನವನ್ನೇ ಸಂಪೂರ್ಣ ನಾಶ ಮಾಡಿದೆ. ನೀನು ನನ್ನ ಪ್ರೀತಿಯನ್ನು ಗೌರವಿಸಲೇ ಇಲ್ಲ. ಹೀಗೆ ಮಾಡಿ ನನ್ನ ಮುಖಕ್ಕೆ ಬಾರಿಸಿದೆ. ನನ್ನ ವಿಶ್ವಾಸ, ಆತ್ಮಗೌರವ ಸತ್ತುಹೋಗಿದೆ" ಎಂದು ಅವರು ಪತ್ರದ ಕೊನೆಯ ಭಾಗದಲ್ಲಿ ಬರೆದಿದ್ದಾರೆ.

ಕನಸುಗಳನ್ನು ನುಚ್ಚುನೂರು ಮಾಡಿದ ಸೂರಜ್

ಜಿಯಾ ಅವರು ತಮ್ಮ ಮೈಮಾಟ, ಬೋಲ್ಡ್ ನಟನೆ, ಸೆಕ್ಸ್ ಅಫೀಲ್ ನಿಂದ ಎಲ್ಲರ ಗಮನಸೆಳೆದಿದ್ದರು. ಇದು ಆಕೆಯ ಆತ್ಮವಿಶ್ವಾಸವನ್ನು ದುಪ್ಪಟ್ಟು ಮಾಡಿತ್ತು. ಆದರೆ ಆಕೆಯ ಎಲ್ಲ ಕನಸುಗಳನ್ನು ಬಾಯ್ ಫ್ರೆಂಡ್ ನುಚ್ಚುನೂರು ಮಾಡಿದ.

English summary
It has been confirmed that Bollywood actress Jiah Khan, who committed suicide on June 3rd, had undergone an abortion earlier this year.
Please Wait while comments are loading...