For Quick Alerts
  ALLOW NOTIFICATIONS  
  For Daily Alerts

  ಅಪ್ಪನಾಗುತ್ತಿದ್ದಾನೆ ಬ್ಯಾಚುಲರ್ ನಟ ಕರಣ್ ಜೋಹಾರ್

  By ಉದಯರವಿ
  |
  ಇದೊಂದು ತರಹಾ ವಿಚಿತ್ರ ಸುದ್ದಿ ಅನ್ನಿಸಿದರೂ ನಿಜ. ಬಾಲಿವುಡ್ ನಟ ಕರಣ್ ಜೋಹರ್ ಅಪ್ಪನಾಗುತ್ತಿದ್ದಾರೆ. ಅರೆ ಇಸ್ಕಿ ಅವರಿಗೆ ಇನ್ನೂ ಮದುವೇನೆ ಆಗಿಲ್ಲ. ಆಗಲೆ ಅಪ್ಪನಾಗಲು ಹೇಗೆ ಸಾಧ್ಯ. ಏನಾದರೂ ಅಕ್ರಮ ಸಕ್ರಮ ಸಂಬಂಧ....ಛೇ! ಛೇ! ಅಂತಹದ್ದೇನು ಇಲ್ಲ ಬಿಡಿ.

  ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ, ತಮ್ಮ ಮನದಾಳದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ಮಗುವೊಂದನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು. ಆ ಮಗುವಿನ ತಂದೆಯಾಗಿ ನಾನೇ ಸಾಕಿಕೊಳ್ಳುತ್ತೇನೆ. ಲಾಲನೆ ಪಾಲೆನೆ ನಮ್ಮ ತಾಯಿ ನೋಡಿಕೊಳ್ಳುತ್ತಾರೆ ಎಂದಿದ್ದಾರೆ. ಅಲ್ಲಿಗೆ ಅವರು ಅಪ್ಪನಾದಂತೆ ಆಯಿತು ಅಲ್ಲವೆ?

  ಅಕ್ರಮವೂ ಇಲ್ಲ ಸಕ್ರಮವೂ ಇಲ್ಲ. ಎಲ್ಲವೂ ಉಪಕ್ರಮ. ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ, ತಾನು ಮಗುವೊಂದನ್ನು ದತ್ತು ತೆಗೆದುಕೊಳ್ಳಲಿದ್ದೇನೆ ಎಂದಿದ್ದಾರೆ. ಈಗ ಕರಣ್ ಅವರ ವಯಸ್ಸು 41 ಗಡಿದಾಟುತ್ತಿದ್ದರೂ ಅವರಿಗೆ ಇನ್ನೂ ಕಂಕಣಭಾಗ್ಯ ಕೂಡಿಬಂದಿಲ್ಲ.

  ಕೇವಲ ಮಗುವನ್ನು ದತ್ತು ತೆಗೆದುಕೊಳ್ಳುವುದಷ್ಟೇ ಅಲ್ಲ. ತಾನೊಬ್ಬ ಒಳ್ಳೆಯ ತಂದೆ ಎಂದೂ ಅನ್ನಿಸಿಕೊಳ್ಳುತ್ತೇನೆ ನೋಡ್ತಾ ಇರಿ ಎಂದಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಮಂದಿ ತಾರೆಗಳು ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸುತ್ತಿದ್ದಾರೆ. ಸುಶ್ಮಿತಾ ಸೇನ್, ರವೀನಾ ಟಂಡನ್ ಅವರನ್ನು ಹೆಸರಿಸಬಹುದು.

  English summary
  Popular filmmaker Karan Johar is still a bachelor, so how come the question of a baby arises here? Wanna know how? KJo has decided to adopt a baby anytime soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X