»   » ಭಾರತದಲ್ಲಿ ಸುಲ್ತಾನ್ ಕಲೆಕ್ಷನ್ ಮಾಡಿದ ಒಟ್ಟು ಮೊತ್ತ ಇಷ್ಟು.!

ಭಾರತದಲ್ಲಿ ಸುಲ್ತಾನ್ ಕಲೆಕ್ಷನ್ ಮಾಡಿದ ಒಟ್ಟು ಮೊತ್ತ ಇಷ್ಟು.!

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ತಮ್ಮ 'ಸುಲ್ತಾನ್' ಚಿತ್ರದ ಮೂಲಕ ಬಾಕ್ಸಾಫೀಸ್ ನಲ್ಲಿ ಅಬ್ಬರಿಸುತ್ತಿದ್ದಾರೆ. ಇದೀಗ ಭಾರತದಾದ್ಯಂತ 'ಸುಲ್ತಾನ್' ಸಿನಿಮಾ ಮಾಡಿದ ಕಲೆಕ್ಷನ್ಸ್ ರಿಪೋರ್ಟ್ ಹೊರಬಿದ್ದಿದ್ದು, ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಿದೆ.['ಸುಲ್ತಾನ್' ಭರ್ಜರಿ ಕಲೆಕ್ಷನ್: 'ಪಿ.ಕೆ' ದಾಖಲೆ ಮುರಿಯುವತ್ತ ಸಲ್ಲು]

ಈಗಾಗಲೇ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವುದನ್ನು ಮುಂದುವರಿಸಿರುವ 'ಸುಲ್ತಾನ್' ಇನ್ನೊಂದು ದಾಖಲೆ ಬರೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ಮೊದಲು ಸಿನಿಮಾ ಬಿಡುಗಡೆ ಆದ ಕೇವಲ 12 ದಿನಗಳಲ್ಲಿ, ಇಡೀ ವಿಶ್ವದಾದ್ಯಂತ ಬರೋಬ್ಬರಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸುದ್ದಿ ಮಾಡಿತ್ತು.['ಸುಲ್ತಾನ್' ಭರ್ಜರಿ ಕಲೆಕ್ಷನ್: 'ಪಿ.ಕೆ' ದಾಖಲೆ ಮುರಿಯುವತ್ತ ಸಲ್ಲು]

ಇದೀಗ ಭಾರತದಲ್ಲಿ 'ಸುಲ್ತಾನ್' ಚಿತ್ರದ ಮಾಡಿದ ಕಲೆಕ್ಷನ್ ರಿಪೋರ್ಟ್ ನೋಡ್ತಾ ಇದ್ರೆ, ಸಲ್ಮಾನ್ ಖಾನ್ ಅವರು ಎಲ್ಲಾ ದಾಖಲೆ ಮುರಿಯುವ ಲಕ್ಷಣ ಕಂಡುಬರುತ್ತಿದೆ. ಅಷ್ಟಕ್ಕೂ ಸುಲ್ತಾನ್ ಗಳಿಸಿದ್ದೆಷ್ಟು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

ಭಾರತದಲ್ಲಿ ಗಳಿಸಿದ್ದೆಷ್ಟು.?

ಅಂದಹಾಗೆ ಇಡೀ ಭಾರತದಾದ್ಯಂತ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಗಳಿಸಿದ್ದು, ಬರೋಬ್ಬರಿ 300 ಕೋಟಿ ರೂಪಾಯಿ. ಐದನೇ ವಾರದಲ್ಲಿ ಭರ್ತಿ 300 ಕೋಟಿ ರೂಪಾಯಿ ಕಮಾಯಿಸಿರುವ ಸುಲ್ತಾನ್ ಅಮೀರ್ ಖಾನ್ ಅವರ 'ಪಿ.ಕೆ' ಚಿತ್ರದ ದಾಖಲೆ ಮುರಿಯುವತ್ತ ಧಾವಂತದಿಂದ ಮುನ್ನುಗ್ಗುತ್ತಿದೆ. [ವಿಮರ್ಶೆ: 440 ವೋಲ್ಟ್ ನಲ್ಲಿ ಅಬ್ಬರಿಸಿದ ಹರ್ಯಾಣದ 'ಸುಲ್ತಾನ್']

ಕಳೆದ ಶುಕ್ರವಾರದಿಂದ ಸುಲ್ತಾನ್ ಗಳಿಕೆ

ಶುಕ್ರವಾರ 24 ಲಕ್ಷ, ಶನಿವಾರ 49 ಲಕ್ಷ, ಭಾನುವಾರ 78 ಲಕ್ಷ, ಸೋಮವಾರ 16 ಲಕ್ಷ, ಮಂಗಳವಾರ 16 ಲಕ್ಷ, ಅಂತ ಒಟ್ಟು 300 ಕೋಟಿ ರೂಪಾಯಿ ಭಾರತದಲ್ಲಿ ಕಮಾಯಿಸಿದೆ.

ಹೊಚ್ಚ ಹೊಸ ಪೋಸ್ಟರ್

ಇದೀಗ ಇದೇ ಖುಷಿಯಲ್ಲಿ ಚಿತ್ರತಂಡ ಹೊಸ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ. 300 ಕೋಟಿ ಗಳಿಕೆ ಮಾಡಿರುವ ಬಗ್ಗೆ, ಸಿನಿಮಾ ವೀಕ್ಷಿಸಿ, ಬೆಂಬಲಿಸಿದ ಪ್ರೇಕ್ಷಕರಿಗೆ ಸಿನಿಮಾ ತಂಡದವರು ಪೋಸ್ಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಪಿ.ಕೆ ದಾಖಲೆ ಮುರಿಯುವತ್ತ ಸುಲ್ತಾನ್

ಈ ಮೊದಲು ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ 'ಭಜರಂಗಿ ಭಾಯ್ ಜಾನ್' ಹಾಗೂ ಅಮೀರ್ ಖಾನ್ ನಟನೆಯ 'ಪಿ.ಕೆ' 300 ಕೋಟಿ ರೂಪಾಯಿ ಗಡಿ ದಾಟಿತ್ತು. ಇದೀಗ ಸುಲ್ತಾನ್ ಕೂಡ ಈ ಎಲ್ಲಾ ದಾಖಲೆ ಮುರಿಯುವ ಮುನ್ಸೂಚನೆ ದೊರೆತಿದೆ.

ಕೋಟಿ ಸರದಾರ

ಇನ್ನೇನು ಈ ಸಿನಿಮಾ 500 ಕೋಟಿ ಕ್ಲಬ್ ಸೇರಿದರೆ, ಸಲ್ಮಾನ್ ಖಾನ್ ಅವರು, ಬಾಲಿವುಡ್ ನ ಏಕಮಾತ್ರ 500 ಕೋಟಿ ಕ್ಲಬ್ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಅಲಿ ಅಬ್ಬಾಸ್ ಸಿನಿಮಾ

ಸಲ್ಮಾನ್ ಖಾನ್, ಅನುಷ್ಕಾ ಶರ್ಮಾ, ರಣದೀಪ್ ಹೂಡ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಸುಲ್ತಾನ್' ಚಿತ್ರಕ್ಕೆ ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡಿದ್ದರು.

English summary
Hindi Actor Salman Khan and Actress Anushka Sharma starrer 'Sultan' has entered Rs 300 crore club in India. On the occasion makers have released new poster of the films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada