ನಾನು ವರ್ಜಿನ್, ಯಾರ ಜೊತೆಗೂ ಮಲಗಿಲ್ಲ: ಸಲ್ಲು
ಈ ರೀತಿ ತಮ್ಮ ಸಾಚಾತನದ ಬಗ್ಗೆ ಷರ್ಟ್ ಬಿಚ್ಚಿದಷ್ಟೇ ಸಲೀಸಾಗಿ ಮನಬಿಚ್ಚಿ ಹೇಳಿಕೊಂಡಿದ್ದಾರೆ 47ರ ಹರೆಯದ ಬಾಲಿವುಡ್ ನಟ ಸಲ್ಮಾನ್ ಖಾನ್. ತಮ್ಮ ಜೀವನದಲ್ಲಿ ಪಾತಿವ್ರತ್ಯ ಕಳೆದುಕೊಳ್ಳಲು ಸಾಕಷ್ಟು ಅವಕಾಶಗಳೂ ಸಿಕ್ಕಿದರೂ ತಾವು ಶೀಲ ಕಳೆದುಕೊಳ್ಳಲಿಲ್ಲ ಎಂಬರ್ಥದಲ್ಲಿ ಸಲ್ಲು ಹೇಳಿಕೊಂಡಿದ್ದಾರೆ.
ನಟ ಕರಣ್ ಜೋಹರ್ ನಡೆಸಿಕೊಡುವ ಟಾಕ್ ಶೋ 'ಕಾಫಿ ವಿತ್ ಕರಣ್' ಓಪನಿಂಗ್ ಎಪಿಸೋಡ್ ನಲ್ಲಿ ಸಲ್ಲು ತಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡರು. ಇದೇ ಡಿಸೆಂಬರ್ 1ರಿಂದ ಸ್ಟಾರ್ ವರ್ಲ್ಡ್ ಇಂಡಿಯಾ ನಾಲ್ಕನೇ ಸೀಸನ್ ಆರಂಭಿಸಿದೆ. [ಸಣ್ಣ ಕಥೆ : ಆರ್ ಯೂ ಎ ವರ್ಜಿನ್? ]

ಮೊದಲು ಐಶ್ವರ್ಯಾ ರೈ ಜೊತೆಗಿನ ಐಸ್ ಪೈಸ್ ದೊಡ್ಡ ಸುದ್ದಿಯಾಗಿತ್ತು. ಆ ಬಳಿಕ ಕತ್ರಿನಾ ಕೈಫ್ ಜೊತೆಗಿನ ಜೂಟಾಟವೂ ಮದುವೆವರೆಗೂ ಬಂದು ನಿಂತಿತ್ತು. ಇಷ್ಟೆಲ್ಲಾ ಆದ ಬಳಿಕ ವಿದೇಶಿ ಬೆಡಗಿ ಜೊತೆಗೂ ಸಲ್ಲು ಹೆಸರು ಥಳುಕು ಹಾಕಿಕೊಂಡಿತ್ತು.
ಆದರೆ ಅವೆಲ್ಲವೂ ಕೇವಲ ಕಾಲ್ಪನಿಕ ಕಥೆಗಳಷ್ಟೇ ಎಂದು ಸಲ್ಲು ಸ್ಪಷ್ಟಪಡಿಸಿದ್ದಾರೆ. ನನಗೆ ಯಾರೂ ಗರ್ಲ್ ಫ್ರೆಂಡ್ಸ್ ಇಲ್ಲ. ಯಾರೊಂದಿಗೂ ಸೆಕ್ಸ್ ನಲ್ಲಿ ಭಾಗಿಯಾಗಿಲ್ಲ. ನಾನು ಈಗಲೂ ವರ್ಜಿನ್ ಎಂದು ಸಲ್ಮಾನ್ ಖಾನ್ ತಮಗೆ ತಾವೇ ಸರ್ಟಿಫಿಕೇಟ್ ನೀಡಿಕೊಂಡಿದ್ದಾರೆ. ["I am a virgin! Do you love me?!"]
ಮದುವೆ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಕಾಲ ಕೂಡಿಬಂದಿದ್ದು ಶೀಘ್ರದಲ್ಲೇ ಮದುವೆಯಾಗಲಿದ್ದೇನೆ. ನನ್ನನ್ನು ನಾನು ರಕ್ಷಿಸಿಕೊಳ್ಳುವ ಸಲುವಾಗಿಯಾದರೂ ಮದುವೆಯಾಗಲೇಬೇಕಾಗಿದೆ ಎಂದು ಸಲ್ಲು ಮಿಯಾ ಕರಣ್ ಜೊತೆ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











