For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆಯಲ್ಲ, ಅವರದ್ದು ಕೊಲೆ. ಪೂರ್ವ ನಿಯೋಜಿತವಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದವರಲ್ಲಿ ನಟಿ ಕಂಗನಾ ರಣಾವತ್ ಪ್ರಮುಖರು.

  ಸುಶಾಂತ್ ಸಿಂಗ್ ರಜಪೂತ್ ಅವರನ್ನು ಬಾಲಿವುಡ್‌ ಇಂಡಸ್ಟ್ರಿಯ ಪ್ರಭಾವಿಗಳು ಸೇರಿ ಕೊಲೆ ಮಾಡಿದ್ದಾರೆ. ನೆಪೋಟಿಸಂಗೆ ನಟ ಬಲಿಯಾಗಿದ್ದಾರೆ ಎಂದು ಕಂಗನಾ ಬಿಟೌನ್ ಇಂಡಸ್ಟ್ರಿಯನ್ನು ಎದುರು ಹಾಕಿಕೊಂಡಿದ್ದರು. ಸುಶಾಂತ್ ಸಾವಿನ ವಿಚಾರದಲ್ಲಿ ಪ್ರತಿ ಬಾರಿಯೂ ಕೊಲೆ ಕೊಲೆ ಎಂದು ಟೀಕಿಸುತ್ತಿದ್ದ ನಟಿ ಈಗ ಯೂಟರ್ನ್ ಹೊಡೆದರಾ ಎಂಬ ಪ್ರಶ್ನೆ ಎತ್ತಿದ್ದಾರೆ ನೆಟ್ಟಿಗರು. ಅದಕ್ಕೆ ಕಾರಣ ಕಂಗನಾ ರಣಾವತ್ ಅವರು ಮಾಡಿರುವ ಟ್ವೀಟ್.

  ಸುಶಾಂತ್ ಸಿಂಗ್ ಅವರಂತೆ ಕಾರ್ತಿಕ್ ಆರ್ಯನ್ ಜೀವನ ಅಂತ್ಯಗೊಳಿಸಬೇಡಿ

  ಕರಣ್ ಜೋಹರ್ ಚಿತ್ರದಿಂದ ಕಾರ್ತಿಕ್ ಆರ್ಯನ್ ಹೊರಬಂದ ವಿಚಾರವಾಗಿ ಟ್ವೀಟ್ ಮಾಡಿರುವ ಕಂಗನಾ ಅವರು ಈಗ ಸುಶಾಂತ್ ಸಿಂಗ್ ಅಭಿಮಾನಿಗಳು ಹಾಗೂ ನೆಟ್ಟಿಗರ ಕೆಂಗಣ್ಣಿಗೆ ಬಿದ್ದಿದ್ದಾರೆ. ಅಷ್ಟಕ್ಕೂ, ಸುಶಾಂತ್ ಸಾವಿನ ಕುರಿತು ಕಂಗನಾ ಹೇಳಿದ್ದೇನು? ಮುಂದೆ ಓದಿ...

  ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ್ರಾ?

  ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ್ರಾ?

  ಕರಣ್ ಜೋಹರ್ ನಿರ್ಮಾಣದ ದೋಸ್ತಾನ 2 ಚಿತ್ರದಿಂದ ಕಾರ್ತಿಕ್ ಆರ್ಯನ್ ಅವರನ್ನು ಕೈಬಿಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಕಂಗನಾ, ''ನೆಪೋಟಿಸಂ ಗ್ಯಾಂಗ್‌ಗೆ ಮತ್ತೊಬ್ಬ ನಟನ ವೃತ್ತಿ ಜೀವನ ಸಿಲುಕಿದೆ. ಸುಶಾಂತ್ ಸಿಂಗ್‌ ನೇಣು ಹಾಕಿಕೊಳ್ಳಲು ಒತ್ತಾಯಿಸಿದಂತೆ ಈ ನಟನಿಗೆ ಮಾಡಬೇಡಿ'' ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಟ್ವೀಟ್‌ನಲ್ಲಿ ''ಸುಶಾಂತ್ ಸಿಂಗ್ ತನಗೆ ತಾನೇ ನೇಣು ಹಾಕಿಕೊಂಡರು'' ಎಂದು ಕಂಗನಾ ಹೇಳಿರುವ ಸಾಲನ್ನು ನೆಟ್ಟಿಗರು ಹಾಗೂ ಸುಶಾಂತ್ ಅಭಿಮಾನಿಗಳು ಖಂಡಿಸಿದ್ದಾರೆ.

  ಅವಕಾಶವಾದಿ ಕಂಗನಾ ರಣಾವತ್

  ಅವಕಾಶವಾದಿ ಕಂಗನಾ ರಣಾವತ್

  ಕಂಗನಾ ರಣಾವತ್ ಅವಕಾಶವಾದಿ ಮಹಿಳೆ. ಸುಶಾಂತ್ ಸಿಂಗ್ ಅವರದ್ದು ಕೊಲೆ ಎಂದು ನೀವೇ ಈ ಹಿಂದೆ ಟ್ವೀಟ್ ಮಾಡಿದ್ದೀರಿ. ಈಗ ತನಗೆ ತಾನೇ ನೇಣು ಹಾಕಿಕೊಂಡರು ಎಂದು ಹೇಳುತ್ತಿದ್ದೀರಿ. ದಯವಿಟ್ಟು ನಿಮ್ಮ ವಾಕ್ಯ ಬದಲಿಸಿ ಹಾಗೂ ನಿಮ್ಮ ಮಾತಿನ ಬಗ್ಗೆ ಸ್ಪಷ್ಟನೆ ಕೊಡಿ ಎಂದು ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

  ತಾಪ್ಸಿಯನ್ನು ಕಂಡರೆ ಉರಿದು ಬೀಳುತ್ತಿದ್ದ ಕಂಗನಾಗೆ ಈಗ ದಿಢೀರ್ ಪ್ರೀತಿ ಉಕ್ಕಿದ್ದೇಕೆ?

  ಬಾಯ್‌ಕಾಟ್ ಬಾಲಿವುಡ್

  ಬಾಯ್‌ಕಾಟ್ ಬಾಲಿವುಡ್

  ಸುಶಾಂತ್ ಸಿಂಗ್ ನೇಣು ಹಾಕಿಕೊಂಡರು ಅಂತ ಹೇಳುವುದಕ್ಕೆ ನಿಮಗೆ ನಾಚಿಕೆ ಆಗ್ಬೇಕು. ಅವರದ್ದು ಆತ್ಮಹತ್ಯೆಯಲ್ಲ, ಕೊಲೆ. ಇದನ್ನು ನೀವು ಕೂಡ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹೇಳಿ ಟ್ವೀಟ್ ಮಾಡಿದ್ದೀರಿ. ಈಗ ಅದಕ್ಕೆ ವಿರೋಧವಾದ ಹೇಳಿಕೆ ಕೊಟ್ಟಿರುವುದರ ಹಿಂದಿನ ಮರ್ಮವೇನು ಎಂದು ಟೀಕಿಸಿ ಬಾಯ್‌ಕಾಟ್ ಬಾಲಿವುಡ್ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ.

  ತನಿಖೆ ಹಂತದಲ್ಲಿ ಸುಶಾಂತ್ ಸಾವಿನ ಪ್ರಕರಣ

  ತನಿಖೆ ಹಂತದಲ್ಲಿ ಸುಶಾಂತ್ ಸಾವಿನ ಪ್ರಕರಣ

  ಜುಲೈ 14, 2020 ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಪ್ರಸ್ತುತ, ಸಿಬಿಐ ಈ ಕೇಸ್ ತನಿಖೆ ಮಾಡ್ತಿದೆ. ಇದುವರೆಗೂ ಅಂತಿಮ ವರದಿ ನೀಡಿಲ್ಲ. ಸುಶಾಂತ್ ಸಾವಿನ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಟಾರ್ಗೆಟ್ ಆಗಿದ್ದರು. ಈ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಮತ್ತೊಮ್ಮೆ ಚರ್ಚೆಗೆ ಬಂದಿದೆ.

  English summary
  Actor Sushant Singh Rajput Fans slam Kangana Ranaut for Saying SSR 'Hanged Himself'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X