»   » ಅಮೀರ್ ಖಾನ್ ಬೆತ್ತಲಾದ ಮೇಲೆ ಅನುಷ್ಕಾ ಸರದಿ

ಅಮೀರ್ ಖಾನ್ ಬೆತ್ತಲಾದ ಮೇಲೆ ಅನುಷ್ಕಾ ಸರದಿ

Posted By:
Subscribe to Filmibeat Kannada

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರ 'ಪಿ.ಕೆ' ಚಿತ್ರದ ಇನ್ನೊಂದು ಪೋಸ್ಟರ್ ಬಿಡುಗಡೆಯಾಗಿದೆ. ಈ ಹಿಂದೆ ಅಮೀರ್ ಖಾನ್ ಅವರು ಅರೆಬೆತ್ತಲಾಗಿ ಚಿತ್ರದ ಪೋಸ್ಟರ್ ನಲ್ಲಿ ಕಾಣಿಸಿಕೊಂಡು ಭಾರಿ ವಿವಾದಕ್ಕೆ ಕಾರಣರಾಗಿದ್ದರು.

ಇದೀಗ 'ಪಿ.ಕೆ' ಚಿತ್ರಕ್ಕೆ ಸಂಬಂಧಿಸಿದಂತೆ ಅನುಷ್ಕಾ ಶರ್ಮಾ ಅವರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದು ಒಂಥರಾ ಆಕರ್ಷಕ ಪೋಸ್ಟರ್ ಎನ್ನಬಹುದು. ಚಿತ್ರದಲ್ಲಿ ಅನುಷ್ಕಾ ಅವರದು ಪತ್ರಕರ್ತೆ ಪಾತ್ರ ಎನ್ನುತ್ತವೆ ಮೂಲಗಳು. [ಸಲ್ಲು ಶರ್ಟ್ ಬಿಚ್ಚಿದಂತೆ ಪ್ಯಾಂಟ್ ಬಿಚ್ಚಲಿ: ಅಮೀರ್]

Anushka Sharma

ಅನುಷ್ಕಾ ಶರ್ಮಾ ಅವರು ನೀಟಾಗಿ ಕ್ರಾಪ್ ಮಾಡಿಕೊಂಡು ಭಿನ್ನ ಗೆಟಪ್ ನಲ್ಲಿ ಕಾಣಿಸಿದ್ದಾರೆ. ಉದಯೋನ್ಮುಖ ಪತ್ರಕರ್ತೆಯಾದ ಅನುಷ್ಕಾಗೆ ಸುಶಾಂತ್ ಸಿಂಗ್ ರಜ್ ಪುತ್ ಅವರು ಜೋಡಿ. ಭಾರತಕ್ಕೆ ಬರುವ ಅನುಷ್ಕಾಗೆ ಇಲ್ಲಿನ ಅನ್ಯಲೋಕದ ಜೀವಿತರಹ ಇರುವ ಅಮೀರ್ ಖಾನ್ ರನ್ನು ಭೇಟಿ ಮಾಡುತ್ತಾರೆ.

ಇವರಿಬ್ಬರ ನಡುವೆ ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು. ರಾಜ್ ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು ಅಮೀರ್ ಅಭಿಮಾನಿಗಳು ಕಾತುರದಿಂದ ಚಿತ್ರವನ್ನು ನಿರೀಕ್ಷಿಸುವಂತಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
After Aamir Khan revealed the first poster of PK, now Anushka Sharma dons a different hairstyle in the film PK. She is sporting a short hairdo. The film required her to even chop off her long tress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada