twitter
    For Quick Alerts
    ALLOW NOTIFICATIONS  
    For Daily Alerts

    ನನ್ನ‌ ತಾಯಿ ಇಲ್ಲದೆ ಇದ್ದರೆ ನನ್ನ ಸ್ಥಿತಿ ಏನಾಗುತ್ತಿತ್ತೋ..? ಖಿನ್ನತೆ ಬಗ್ಗೆ ದೀಪಿಕಾ ಪಡುಕೋಣೆ ಮಾತು!

    |

    ಬಾಲಿವುಡ್‌ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ನಟನೆಯ ಜೊತೆಗೆ ಸದ್ಯ‌ ಜನರಿಗೆ ಸಹಾಯವಾಗುವ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ. ಮಾನಸಿಕ ಖಿನ್ನತೆಯ ನೋವು ಖಂಡಿರುವ ದೀಪಿಕಾ ಪಡುಕೋಣೆ ಸದ್ಯ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

    ಈ ಹಿಂದೆ ಮಾನಸಿಕ ಖಿನ್ನತೆಯ ವಿರುದ್ಧ ಹೋರಾಡಿ ಗೆದ್ದು ಬಂದಿರುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಗ್ರಾಮೀಣ ಸಮುದಾಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ಮುಂದುವರಿಸಿದ್ದಾರೆ. ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನದಂದು ತಮ್ಮ ಲಿವ್‌ ಲವ್ ಲಾಫ್‌ ಸಂಸ್ಥೆಯ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

    Actress Deepika Padukone Again Openup About Mental Health

    ಈ ಬಗ್ಗೆ ಮಾತನಾಡಿರುವ ದೀಪಿಕಾ ಪಡುಕೋಣೆ ಮಾನಸಿಕ ಖಿನ್ನತೆಯ ಸಂಧರ್ಭದಲ್ಲಿ ತಮ್ಮನ್ನು ಆರೈಕೆ ಮಾಡುವವರ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಜೊತೆಗೆ ಸ್ವತಃ ತಾವು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗ ನನ್ನ ತಾಯಿ ಅದನ್ನು ಗುರುತಿಸದೇ ಇದ್ದಿದ್ದರೆ, ತನ್ನ ಸ್ಥಿತಿ ಹೇಗಿರುತ್ತಿತ್ತೋ ಎಂದು ಊಹಿಸಲು ಅಸಾಧ್ಯ ಎಂದಿದ್ದಾರೆ.

    "ಒಬ್ಬ ವ್ಯಕ್ತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗ ಅವರನ್ನು ಆರೈಕೆ ಮಾಡುವವರ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ನನ್ನ ವಿಚಾರದಲ್ಲಿ ನನ್ನ ತಾಯಿ ಹಾಗೂ ಸಹೋದರಿಯ ಪಾತ್ರ ತುಂಬಾ ದೊಡ್ಡದು. ಇಲ್ಲಿ ನಾನು ಕಂಡುಕೊಂಡ ಬಹುಮುಖ್ಯ ಅಂಶವೆಂದರೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗ ಆರೈಕೆ ಮಾಡುವವರ ಭಾವನಾತ್ಮಕ ಯೋಗಕ್ಷೇಮವು, ಖಿನ್ನತೆಗೊಳಗಾದ ವ್ಯಕ್ತಿಯ ಭಾವನಾತ್ಮಕ ಯೋಗಕ್ಷೇಮದಷ್ಟೇ ಮುಖ್ಯ" ಎಂದಿದ್ದಾರೆ ದೀಪಿಕಾ ಪಡುಕೋಣೆ.

    ಉದಾಹರಣೆಗೆ ನಾನು ಮಾನಸಿಕ ಖಿನ್ನತೆಗೊಳಗಾದಾಗ ನನ್ನ ತಾಯಿ ಅದನ್ನು ಗುರುತಿಸದೇ ಇದ್ದಿದ್ದರೆ ಹಾಗೂ ನನ್ನಲ್ಲಿರುವ ದುರ್ಬಲತೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡದೇ ಇದ್ದಿದ್ದರೆ ಇಂದು ನನ್ನ ಸ್ಥಿತಿ ಯಾವ ಹಂತಕ್ಕೆ ತಲುಪುತ್ತಿತ್ತೋ ಎಂದು ದೀಪಿಕಾ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಸದ್ಯ ನಾನು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದೇನೆ. ನನ್ನ‌ ಚಿಕಿತ್ಸೆ ಸಂದರ್ಭದಲ್ಲಿ ನನ್ನ ಹಾಗೂ ಡಾಕ್ಟರ್‌ ನಡುವಿನ ಸಮಾಲೋಚನೆ ಸಹ ಉತ್ತಮವಾಗಿತ್ತು. ಹಾಗಾಗಿ ಬೇಗ ಚೇತರಿಸಿಕೊಂಡೆ. ಯಾವುದೇ ಕಾಯಿಲೆ ಆಗಿರಲಿ ಅದರ ಚೇತರಿಕೆ ಆರೈಕೆದಾರರನ ಮೇಲಿರುತ್ತದೆ ಎಂದು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ.

    Actress Deepika Padukone Again Openup About Mental Health

    ಬಾಲಿವುಡ್‌ನಲ್ಲಿ ಬ್ಯುಸಿ‌ ನಟಿಯಾಗಿರುವ ದೀಪಿಕಾ ಪಡುಕೋಣೆ ಕಳೆದ ಕೆಲ ವರ್ಷಗಳ‌ ಹಿಂದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಬಳಿಕ ಸೂಕ್ತ ಚಿಕಿತ್ಸೆಗೊಳಗಾದ ಅವರು 2015 ರಲ್ಲಿ ತಮ್ಮ ಮಾನಸಿಕ ಖಿನ್ನತೆಯಿಂದ ಹೊರಬಂದರು. ಈ ಬಗ್ಗೆ ಸ್ವತಃ ನಟಿ ಹೇಳಿಕೊಂಡಿದ್ದರು.

    ಮಾನಸಿಕ ಖಿನ್ನತೆಯ ನೋವು ಕಂಡಿದ್ದ ದೀಪಿಕಾ ಪಡುಕೋಣೆ ಬಳಿಕ ಲಿವ್ ಲವ್ ಲಾಫ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ನೆರವಿಗೆ ನಿಂತರು. ಮಾನಸಿಕ ಖಿನ್ನತೆಯಿಂದ ಹೊರಬರಲು ಲಿವ್ ಲವ್ ಲಾಫ್ ನೆರವಾಗುತ್ತಿದ್ದು, ಎಷ್ಟೋ ಜನರಿಗೆ ಹೊಸ ಬದುಕು ಜೀವನ‌ ಆರಂಭಿಸಲು ನೆರವಾಗುತ್ತಿದ್ದಾರೆ.

    ಸದ್ಯ ದೀಪಿಕಾ ಪಡುಕೋಣೆ ಜನವರಿ 25 ರಂದು ಬಿಡುಗಡೆಯಾಗಲಿರುವ ಶಾರುಖ್ ಖಾನ್ ನಟನೆಯ 'ಪಠಾನ್' ಚಿತ್ರದಲ್ಲಿ ನಟಿಸುತ್ತಿದ್ದು ,ಹೃತಿಕ್ ರೋಷನ್ ಅವರ 'ಫೈಟರ್' ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.

    English summary
    Bollywood actress Deepika Padukone open up on mental health.Know More.
    Sunday, October 9, 2022, 20:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X