Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿವಾಹಪೂರ್ವ ಲೈಂಗಿಕತೆ ಬಗ್ಗೆ ನಟಿ ದಿಯಾ ಮಿರ್ಜಾ ಮಾತು
'ರೆಹನಾ ಹೇ ತೆರೆ ದಿಲ್ ಮೇ' ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ದಿಯಾ ಮಿರ್ಜಾ ವೃತ್ತಿಯುದ್ದಕ್ಕೂ ಸೌಮ್ಯ ನಾಯಕಿಯ ಪಾತ್ರಗಳಲ್ಲೇ ನಟಿಸಿದ್ದು ಹೆಚ್ಚು. ಆದರೆ ತಮ್ಮ ಪಾತ್ರಗಳಂತೆ ಮೃದು ಅವರಲ್ಲ. ಬಹಳ ಗಟ್ಟಿಗಿತ್ತಿ ದಿಯಾ ಮಿರ್ಜಾ.
ಸಿನಿಮಾಗಳಲ್ಲಿ ಅವಕಾಶಗಳು ತುಸು ಕಡಿಮೆ ಆಗುತ್ತಿದ್ದಂತೆ ನಿರ್ಮಾಪಕಿ ಸ್ಥಾನಕ್ಕೆ ತನಗೆ ತಾನೇ ಬಡ್ತಿ ಪಡೆದುಕೊಂಡ ದಿಯಾ ಮಿರ್ಜಾ ಕೆಲವು ಒಳ್ಳೆಯ ಮಹಿಳಾ ಪ್ರಧಾನ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.
ಕಳೆದ ವರ್ಷ ಎರಡನೇ ಬಾರಿ ವಿವಾಹವಾದ ಈ ಮುದ್ದು ಮುಖದ ನಟಿ ಒಂದು ಮಗುವಿನ ತಾಯಿಯೂ ಹೌದು. ಮದುವೆಗೆ ಮುನ್ನವೇ ದಿಯಾ ಮಿರ್ಜಾ ಗರ್ಭಿಣಿ ಆಗಿದ್ದರು ಎಂಬ ಮಾತುಗಳು ಅವರು ಮದುವೆಯಾದಾಗ ಕೇಳಿ ಬಂದಿತ್ತು. ಇದೀಗ ನಟಿ ದಿಯಾ ಮಿರ್ಜಾ ವಿವಾಹ ಪೂರ್ವ ಲೈಂಗಿಕತೆಯ ಬಗ್ಗೆ ಮಾತನಾಡಿದ್ದಾರೆ.

ವಿವಾಹ ಪೂರ್ವ ಲೈಂಗಿಕತೆ ಬಗ್ಗೆ ದಿಯಾ ಮಾತು
ವಿವಾಹಪೂರ್ವ ಲೈಂಗಿಕತೆ ಅಪರಾಧವೆಂದೇ ಬಹುಪಾಲು ಭಾರತೀಯರು ಭಾವಿಸುತ್ತಾರೆ. ಈ ಬಗ್ಗೆ ಮಾತನಾಡಿರುವ ದಿಯಾ ಮಿರ್ಜಾ ವಿವಾಹಪೂರ್ವ ಲೈಂಗಿಕತೆ ವ್ಯಕ್ತಿಯ ವೈಯಕ್ತಿಕ ಆಯ್ಕೆ. ಆ ವ್ಯಕ್ತಿಗೆ ಅದು ಸರಿ ಎನಿಸಿದರೆ ಅದು ಸರಿಯಷ್ಟೆ, ಅದನ್ನು ಬೇರೆ ಅರ್ಥದಲ್ಲಿ ನೋಡುವ ಅವಶ್ಯಕತೆ ಇಲ್ಲ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.

ಅಂದುಕೊಳ್ಳುವಷ್ಟು ನಾವು ಪ್ರಗತಿಪರರಲ್ಲ: ದಿಯಾ
''ವೈಯಕ್ತಿಕ ಆಯ್ಕೆ ಮತ್ತು ಆ ಆಯ್ಕೆಗೆ ಇರುವ ಶಕ್ತಿ ಮತ್ತು ನಂಬಿಕೆಯನ್ನು ವೈಯಕ್ತಿಕ ಆಯ್ಕೆ ಮಾಡುವವರು ಮಾತ್ರವೇ ಸಂಭ್ರಮಿಸಬಲ್ಲರು. ಯಾವುದೇ ಬೆದರಿಕೆಗಳಿಗೆ ಒಳಪಡದ, ಯಾವುದೇ ಅನ್ಯಜನರ ಬಗ್ಗೆ ಯೋಚಸದೇ ವೈಯಕ್ತಿಕ ಆಯ್ಕೆಯನ್ನು ಮಾಡುವುದು ಸಹ ಅತ್ಯಂತ ಅವಶ್ಯಕ'' ಎಂದಿದ್ದಾರೆ ದಿಯಾ ಮಿರ್ಜಾ. ಅಲ್ಲದೆ, ನಾವು ಊಹಿಸಿರುವಂತೆ ಅಥವಾ ನಾವು ನಮ್ಮನ್ನು ನಾವು ಪರಿಗಣಿಸಿರುವಷ್ಟು ನಾವು ಪ್ರಗತಿಪರರು ಅಲ್ಲ ಎನಿಸುತ್ತದೆ'' ಎಂದೂ ಸಹ ಹೇಳಿದ್ದಾರೆ ದಿಯಾ.

ಗರ್ಭಿಣಿ ಆದ ಬಳಿಕ ವಿವಾಹ!
ದಿಯಾ ಮಿರ್ಜಾ 2014 ರಲ್ಲಿ ಉದ್ಯಮಿ ಸಾಹಿಲ್ ಸಂಘಾ ಎಂಬುವರನ್ನು ಬಹು ಅದ್ದೂರಿಯಾಗಿ ವಿವಾಹವಾದರು. ಆ ಬಳಿಕ 2019ರಲ್ಲಿ ಅವರಿಂದ ದೂರಾದರು. ಆ ಬಳಿಕ 2021 ರ ಫೆಬ್ರವರಿಯಲ್ಲಿ ಉದ್ಯಮಿ ವೈಭವ್ ರೇಖಿ ಎಂಬುವರೊಡನೆ ವಿವಾಹವಾದರು. ಅದಾದ ಕೆಲವೇ ದಿನಗಳಲ್ಲಿ ತಾವು ತಾಯಿಯಾಗುತ್ತಿರುವ ವಿಷಯ ಬಹಿರಂಗಪಡಿಸಿದರು. ಹಾಗೂ ಮದುವೆಯಾದ ಆರು ತಿಂಗಳ ಬಳಿಕ ಮೊದಲ ಮಗುವಿಗೆ ಜನ್ಮ ನೀಡಿದರು. ಮೊದಲ ಪತಿಯಿಂದ ದಿಯಾ ಮಗು ಪಡೆದಿರಲಿಲ್ಲ.

ದಿಯಾ ವಿರುದ್ಧ ಟೀಕೆ ವ್ಯಕ್ತವಾಗಿತ್ತು
ದಿಯಾ ಮಿರ್ಜಾ, ತಾವು ತಾಯಿಯಾಗುತ್ತಿರುವ ವಿಷಯ ಘೋಷಿಸಿದಾಗ ಹಲವರು ಟೀಕೆ ವ್ಯಕ್ತಪಡಿಸಿದ್ದರು. ಗರ್ಭಿಣಿ ಆಗಿರುವ ಕಾರಣಕ್ಕೆ ದಿಯಾ ಮಿರ್ಜಾ ಮದುವೆಯಾಗಿದ್ದಾರೆ ಎಂದಿದ್ದರು. ಆಗ ಹೆಚ್ಚೇನು ಮಾತನಾಡದೇ ಇದ್ದ ದಿಯಾ ಮಿರ್ಜಾ ಈಗ ವಿವಾಹ ಪೂರ್ವ ಲೈಂಗಿಕತೆ ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು ಎಂದಿದ್ದಾರೆ. ಇದೀಗ 'ಬೀಡ್' ಹೆಸರಿನ ಸಿನಿಮಾದಲ್ಲಿ ದಿಯಾ ಮಿರ್ಜಾ ನಟಿಸಿದ್ದು ಆ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.