For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಕೇಸ್‌ನಲ್ಲಿ ಮತ್ತೊಬ್ಬ ನಟಿಯ ಹೆಸರು, ಕನ್ನಡದಲ್ಲೂ ನಟನೆ

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮತ್ತೊಬ್ಬ ನಟಿಯ ಹೆಸರು ಚರ್ಚೆಯಾಗುತ್ತಿದೆ. ಅದಾಗಲೇ ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ ಹೆಸರುಗಳು ಈ ಕೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದೀಗ, ಮತ್ತೊಬ್ಬ ಖ್ಯಾತ ನಟಿಯ ನಂಟು ಹೊಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

  ಹೌದು, ಹಿಂದಿ ಚಿತ್ರರಂಗದ ನಟಿ, ಮಾಡೆಲ್ ಫ್ಲೋರಾ ಸೈನಿ ಹೆಸರು ಈ ಕೇಸ್‌ನಲ್ಲಿ ತಳುಕು ಹಾಕಿಕೊಂಡಿದೆ. ಬಂಧಿತ ಉದ್ಯಮಿ ರಾಜ್ ಕುಂದ್ರಾ ಮತ್ತು ಉಮೇಶ್ ಕಾಮತ್ ನಡುವಿನ ವಾಟ್ಸಾಪ್ ಚಾಟ್ ಬಹಿರಂಗವಾಗಿದ್ದು, ಇದರಲ್ಲಿ ಫ್ಲೋರಾ ಸೈನಿ ಹೆಸರು ಚರ್ಚೆಯಾಗಿದೆ ಎಂಬ ವಿಚಾರವನ್ನು ಜುಲೈ 24 ರಂದು ಹಿಂದಿ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿರುವ ಬಗ್ಗೆ ವರದಿಯಾಗಿದೆ.

  ರಾಜ್ ಕುಂದ್ರಾ ವಿರುದ್ಧ 4 ಸಿಬ್ಬಂದಿಗಳು ಸಾಕ್ಷ್ಯ: ಪೊಲೀಸರಿಂದ ಮಾಹಿತಿರಾಜ್ ಕುಂದ್ರಾ ವಿರುದ್ಧ 4 ಸಿಬ್ಬಂದಿಗಳು ಸಾಕ್ಷ್ಯ: ಪೊಲೀಸರಿಂದ ಮಾಹಿತಿ

  ಈ ಸುದ್ದಿ ವರದಿಯಾಗುತ್ತಿದ್ದಂತೆ ನಟಿ ಫ್ಲೋರಾ ಸೈನಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ನಡೆಯುತ್ತಿರುವ ಬೆಳವಣಿಗೆಗೆ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಬಾಂಬೆ ಟೈಮ್ಸ್ ಜೊತೆ ಮಾತನಾಡಿರುವ ನಟಿ ಫ್ಲೋರಾ, ''ನಾನು ಯಾವತ್ತೂ ರಾಜ್ ಕುಂದ್ರಾ ಜೊತೆ ಚರ್ಚೆ ಮಾಡಿಲ್ಲ. ಅದಕ್ಕಾಗಿಯೇ ಇಂತಹ ಸುಳ್ಳು ಸುದ್ದಿಗಳ ವಿರುದ್ಧ ನಾನು ಸ್ಪಷ್ಟನೆ ಕೊಡುತ್ತಿದ್ದೇನೆ'' ಎಂದಿದ್ದಾರೆ.

  ''ನಾನು ಈ ಬಗ್ಗೆ ಪ್ರತಿಕ್ರಿಯಿಸದೆ ಸುಮ್ಮನೆ ಕೂತಿದ್ದರೆ, ನನ್ನದು ಏನೋ ಪಾತ್ರ ಇರಬೇಕು ಎಂದು ಜನ ತಿಳಿದುಕೊಳ್ಳಬಹುದು. ಇಬ್ಬರು ಚಾಟ್‌ನಲ್ಲಿ ನನ್ನ ಹೆಸರು ಚರ್ಚಿಸಿದ್ದಾರೆ ಎಂದ ಮಾತ್ರಕ್ಕೆ, ನಾನು ಅದರಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಯುವುದು ತಪ್ಪಾಗುತ್ತದೆ. ಬೋಲ್ಡ್ ಪಾತ್ರಗಳಲ್ಲಿ ನಟಿಸುವ ಇತರೆ ನಟಿಯರ ಹೆಸರು ಉಲ್ಲೇಖವಾಗಿರಬಹುದು ಎಂದು ನಂಬುತ್ತೇನೆ. ಇದರಲ್ಲಿ ಒಬ್ಬ ಮಹಿಳೆಯ ಹೆಸರನ್ನು ಸುಮ್ಮನೆ ಎಳೆಯುವುದು ಸೂಕ್ತವಲ್ಲ ಎಂದು ಜನರು ಅರ್ಥ ಮಾಡಿಕೊಳ್ಳುತ್ತಾರೆಯೇ?'' ಎಂದು ಪ್ರಶ್ನಿಸಿದ್ದಾರೆ.

  ''ನಾನು 'ಗಾಂಧಿ ಬಾತ್' ಎಂಬ ವೆಬ್ ಸಿರೀಸ್‌ನಲ್ಲಿ ನಟಿಸಿದ್ದೇನೆ. ಅದು ತುಂಬಾ ಬೋಲ್ಡ್ ಆಗಿದೆ. ಸ್ಟ್ರೀ, ಬೇಗಂ ಜಾನ್ ಮತ್ತು ಲಕ್ಷ್ಮಿ ಅಂತಹ ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಆದರೆ, ಜನರು ಅದನ್ನು ಬೇಗ ಮರೆತು ಹೋಗ್ತಾರೆ. ಇದರಲ್ಲಿ ನನ್ನ ಹೆಸರನ್ನು ಎಳೆಯುವುದು ಒಳ್ಳೆಯದು ಎಂದು ಅವರು ಭಾವಿಸಿದ್ದರು. ಈ ರೀತಿಯ ಪ್ರಚಾರ ನನಗೆ ಬೇಡ'' ಎಂದು ಹೇಳಿದ್ದಾರೆ.

  Actress Flora Saini gives clarification about her connection with Raj Kundra

  ಕನ್ನಡದಲ್ಲೂ ನಟಿಸಿರುವ ಫ್ಲೋರಾ ಸೈನಿ

  ಫ್ಲೋರಾ ಸೈನಿ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್-ರವಿಚಂದ್ರನ್ ನಟಿಸಿದ್ದ ಕೋದಂಡರಾಮ, ಸುದೀಪ್ ಜೊತೆ 'ನಮ್ಮಣ್ಣ', ಧೀಮಾಕು, ಗಿರಿ, ವಿಸ್ಮಯ ಪ್ರಮೇಯ, ಸಿಐಡಿ ಈಶ ಅಂತಹ ಚಿತ್ರಗಳಲ್ಲಿ ಫ್ಲೋರಾ ಅಭಿನಯಿಸಿದ್ದಾರೆ.

  English summary
  Bollywood Actress Flora Saini gives clarification about her connection with Raj Kundra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X