For Quick Alerts
  ALLOW NOTIFICATIONS  
  For Daily Alerts

  ಹೈಕೋರ್ಟ್‌ನಲ್ಲಿ ನಟಿ ಗೆಹನಾ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಬಂಧನ ಆಗಿದೆ. ಇದೇ ಕೇಸ್ ಸಂಬಂಧಿತವಾಗಿ ನಟಿ ಗೆಹನಾ ವಸಿಷ್ಠ್ ಅವರಿಗು ಬಂಧನದ ಭೀತಿ ಎದುರಾಗಿದ್ದು, ಮುಂಬೈ ಹೈ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಾಕಿದ್ದಾರೆ. ಕಳೆದ ವಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮಂಗಳವಾರ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಮಾದರ್ ಅವರ ಪೀಠವು ನಟಿಯ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದೆ.

  ನಟಿಯ ಪರ ವಕೀಲ ಅಭಿಷೇಕ್ ಯೆಂಡೆ ಅವರು ''ಈ ಪ್ರಕರಣಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಎಫ್‌ಐಆರ್‌ಗಳಲ್ಲಿ ಈ ಹಿಂದೆ ನಾಲ್ಕು ತಿಂಗಳ ಕಾಲ ನಟಿ ಗೆಹನಾ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ ಈಗ ಹೊಸದೊಂದು ಎಫ್‌ ಐ ಆರ್ ಆಧರಿಸಿ ನಟಿಯನ್ನು ಬಂಧಿಸಲು ಮುಂಬೈ ಪೊಲೀಸರು ಮುಂದಾಗಿದ್ದಾರೆ' ಎಂದು ಹೈಕೋರ್ಟ್‌ಗೆ ತಿಳಿಸಿದರು.

  ರಾಜ್ ಕುಂದ್ರಾ ಬೆಂಬಲಕ್ಕೆ ನಿಂತಿದ್ದ ನಟಿಗೆ ಮತ್ತೆ ಬಂಧನದ ಭೀತಿರಾಜ್ ಕುಂದ್ರಾ ಬೆಂಬಲಕ್ಕೆ ನಿಂತಿದ್ದ ನಟಿಗೆ ಮತ್ತೆ ಬಂಧನದ ಭೀತಿ

  ''ಈ ಕೇಸ್‌ನಲ್ಲಿ ನಟಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಒಂದೇ ಆರೋಪದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ'' ಎಂದು ನಟಿ ಪರ ವಕೀಲರು ವಾದ ಮಂಡಿಸಿದರು.

  ಈ ಹಿಂದೆ ಸೆಷನ್ ನ್ಯಾಯಾಲಯ ಜಾಮೀನು ನೀಡಿದ ಸಂದರ್ಭದಲ್ಲಿಯೇ ಕಠಿಣ ಷರತ್ತುಗಳನ್ನು ವಿಧಿಸಿದೆ. ಆ ಷರತ್ತು ಅಡಿಯಲ್ಲಿ ನಟಿ ಇದ್ದಾರೆ ಎಂದು ಹೈ ಕೋರ್ಟ್ ನ್ಯಾಯಾಧೀಶರ ಮುಂದೆ ಮನವಿ ಮಾಡಿದರು. ಗೆಹನಾ ಪರ ವಾದ ಆಲಿಸಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆಗಸ್ಟ್ 26 ರಂದು ನಡೆಸುವುದಾಗಿ ಹೇಳಿದೆ.

  ರಾಜ್ ಕುಂದ್ರಾ ಪರವಾಗಿದ್ದ ನಟಿ ಗೆಹನಾ

  ರಾಜ್ ಕುಂದ್ರಾ ಬಂಧನದ ಬಳಿಕ ನಟಿ ಗೆಹನಾ ವಸಿಸ್ತ್, ಕುಂದ್ರಾ ಪರವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. "ಬೋಲ್ಡ್ ಮತ್ತು ಎರೋಟಿಕಾ ಸಿನಿಮಾಗಳನ್ನು ಪೋರ್ನ್ ಸಿನಿಮಾಗಳಿಗೆ ಹೋಲಿಸಬೇಡಿ. ರಾಜ್ ಕುಂದ್ರಾ ಕಂಪೆನಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿದೆ. ರಾಜ್ ಕುಂದ್ರಾ ನಿರ್ಮಿಸಿದ ಆಪ್ ಗಳಲ್ಲಿ ಮೂರು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ಅವರು ಎಂದಿಗೂ ನನಗೆ ಇದನ್ನು ಮಾಡಿ ಎಂದು ಒತ್ತಾಯ ಮಾಡಿಲ್ಲ. ನಾನು ಮಾಡಿದ ಕೆಲಸದ ಪ್ರಕಾರ ನನಗೆ ಸಂಬಳ ನೀಡಲಾಗಿದೆ" ಎಂದು ಹೇಳಿದ್ದರು.

  ರಾಜ್ ಕುಂದ್ರಾಗೆ ಮಧ್ಯಂತರ ರಿಲೀಫ್: ಆಗಸ್ಟ್ 25ಕ್ಕೆ ಜಾಮೀನು ಅರ್ಜಿ ವಿಚಾರಣೆ ರಾಜ್ ಕುಂದ್ರಾಗೆ ಮಧ್ಯಂತರ ರಿಲೀಫ್: ಆಗಸ್ಟ್ 25ಕ್ಕೆ ಜಾಮೀನು ಅರ್ಜಿ ವಿಚಾರಣೆ

  ಅಂದ್ಹಾಗೆ, ನಟಿ ಗೆಹನಾ ವಸಿಸ್ತ್ ಈ ಹಿಂದೆಯೇ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಕೇಸ್‌ನಲ್ಲಿ ಐದು ತಿಂಗಳು ಕಾಲ ಜೈಲಿನಲ್ಲಿದ್ದರು ಗೆಹನಾ. ಈಗಲೂ ನಟಿಯ ಮೊಬೈಲ್, ಲ್ಯಾಪ್‌ಟ್ಯಾಪ್ ಪೋಲಿಸರ ವಶದಲ್ಲಿದೆ. ಇದೇ ಪ್ರಕರಣದಲ್ಲಿ ಈಗ ರಾಜ್ ಕುಂದ್ರಾ ಬಂಧನ ಆಗಿದೆ.

  2020ರಲ್ಲಿ ಮುಂಬೈ ಸೈಬರ್ ಪೊಲೀಸರು ದಾಖಲಿಸಿಕೊಂಡಿದ್ದ ಕೇಸ್ ಕುಂದ್ರಾಗೆ ಸಂಕಷ್ಟ ತಂದಿದೆ. ಈ ಕೇಸ್ ಸಂಬಂಧ ಬಾಂಬೆ ಹೈ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಕುಂದ್ರಾ ಮನವಿಯನ್ನು ಪುರಸ್ಕರಿಸಿರುವ ಹೈ ಕೋರ್ಟ್ ಒಂದು ವಾರಗಳ ಕಾಲ ರಿಲೀಫ್ ಕೊಟ್ಟಿತ್ತು. ಮುಂದಿನ ವಿಚಾರಣೆಯನ್ನು ಆಗಸ್ಟ್ 25 ರಂದು ಮಾಡಲಾಗುತ್ತದೆ ಎಂದು ಆಗಸ್ಟ್ 18ರ ವಿಚಾರಣೆಯಲ್ಲಿ ನ್ಯಾಯಾಲಯ ತಿಳಿಸಿತ್ತು.

  ರಾಜ್ ಕುಂದ್ರಾ ಸಲ್ಲಿಸಿರುವ ಅರ್ಜಿಯಲ್ಲಿ, "ಕಳೆದ ವರ್ಷ ಸೈಬರ್ ಪೊಲೀಸರು ಸಲ್ಲಿಸಿದ ಎಫ್ ಐ ಆರ್ ನಲ್ಲಿ ತನ್ನ ಹೆಸರು ಪ್ರತಿಫಲಿಸುವುದಿಲ್ಲ. ಪೊಲೀಸರಿಗೆ ವಿವರವಾದ ಹೇಳಿಕೆಯನ್ನು ನೀಡಿದ್ದೆ, ತನಿಖೆಗೆ ಸಹಕರಿಸಲು ಅನೇಕ ಸಂದರ್ಭಗಳಲ್ಲಿ ತನಿಖಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದೆ, ಸಂಬಂಧಪಟ್ಟ ಅಧಿಕಾರಿಯಿಂದ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಿರುವುದಾಗಿ" ಹೇಳಿದ್ದಾರೆ.

  English summary
  Porn Films Case: Actress Gehana Vashisth approaches Bombay HC for anticipatory bail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X