»   » ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಜೊತೆಗೆ ಜೆನಿಲಿಯಾ

ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಜೊತೆಗೆ ಜೆನಿಲಿಯಾ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ 'ಸತ್ಯ ಇನ್ ಲವ್' ಚಿತ್ರದಲ್ಲಿ ಅಭಿನಯಿಸಿದ್ದ ಲವ್ಲಿ ಬೆಡಗಿ ಜೆನಿಲಿಯಾ ಡಿಸೋಜಾ ಅವರು ಗಂಡುಮಗುವನ್ನು ಹೆತ್ತಿರುವುದು ಗೊತ್ತೇ ಇದೆ. ಇದೀಗ ತನ್ನ ಕಂದಮ್ಮನೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ ಜೆನಿಲಿಯಾ.

ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿರುವ ಕಾರಣ ಎಲ್ಲರೂ ಸಖತ್ ಖುಷಿಯಾಗಿದ್ದಾರೆ. ತಾಯ್ತನದ ಮಧುರಾನುಭವಗಳನ್ನು ಸವಿಯುತ್ತಿರುವ ಜೆನಿಲಿಯಾ ಅವರೂ ಅಷ್ಟೇ ಖುಷಿಯಾಗಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. [ಸತ್ಯ ಇನ್ ಲವ್ ಬೆಡಗಿ ಜೆನಿಲಿಯಾಗೆ ಗಂಡುಮಗು]

Genelia2

ಮದುವೆಯಾದ ಬಳಿಕ ಬಣ್ಣದ ಜಗತ್ತಿನಿಂದ ದೂರವಾದ ಜೆನಿಲಿಯಾ ಇನ್ನು ಮಗುವಿನ ಲಾಲನೆ ಪಾಲನೆಯಲ್ಲೇ ಇರಲಿದ್ದು, ಬೆಳ್ಳಿಪರದೆಗೆ ಅಡಿಯಿಡುವುದು ಅಸಾಧ್ಯ ಎನ್ನುತ್ತವೆ ಮೂಲಗಳು. 2003ರಿಂದ ರಿತೇಶ್ ಮತ್ತು ಜೆನಿಲಿಯಾ ಪ್ರೇಮಿಸಿಕೊಳ್ಳುತ್ತಿದ್ದರು.

2012ರಲ್ಲಿ ಮದುವೆಯಾಗುವ ಮೂಲಕ ಇವರಿಬ್ಬರ ಪ್ರೇಮ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದಿತ್ತು. ಬಾಲಿವುಡ್ ನ ಕ್ಯೂಟ್ ದಂಪತಿಗಳೆಂದೇ ಕರೆಸಿಕೊಂಡಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಅವರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಜೆನಿಲಿಯಾ ಹಾಗೂ ರಿತೇಶ್ ಕಾಣಿಸಿಕೊಂಡಿದ್ದರು.

ಜೆನಿಲಿಯಾ ಐದು ಭಾಷೆಗಳಲ್ಲಿ ಮಿಂಚಿ ಪಡ್ಡೆಗಳ ಕಣ್ಣು ಕುಕ್ಕಿದವರು. ಬಾಲಿವುಡ್, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಒಂದು ಸುತ್ತು ಹಾಕಿಕೊಂಡು ಬಂದವರು. ಈಗ ಚೊಚ್ಚಲ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾರೆ. (ಏಜೆನ್ಸೀಸ್)

English summary
Beautiful actress Genelia has given birth to a cute bay boy on November 25th evening in a private hospital in Mumbai. Iluvcinema.in provide you the first look of Genelia’s son.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada