For Quick Alerts
  ALLOW NOTIFICATIONS  
  For Daily Alerts

  ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ನಟಿ ಕಂಗನಾ ರಣೌತ್

  |

  ಬಿಜೆಪಿ ಪರ ಅತೀವ ಒಲವು ಹೊಂದಿರುವ ನಟಿ ಕಂಗನಾ ರಣೌತ್ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು. ಆದರೆ ಈ ಭೇಟಿ ಸಿನಿಮಾಕ್ಕೆ ಸಂಬಂಧಿಸಿದ್ದಾಗಿತ್ತೇ ಹೊರತು, ರಾಜಕೀಯ ಸಂಬಂಧಿಸಿದ್ದಲ್ಲ. ಹೌದು, ಕಂಗನಾ ರಣೌತ್, ತಮ್ಮ ಮುಂದಿನ ಸಿನಿಮಾ ಒಂದರ ಸಂಬಂಧವಾಗಿ ರಕ್ಷಣಾ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

  'ತೇಜಸ್' ಹೆಸರಿನ ಭಾರತೀಯ ವಾಯುಸೇನೆ ಸಂಬಂಧಿತ ಸಿನಿಮಾದಲ್ಲಿ ಕಂಗನಾ ರಣೌತ್ ನಟಿಸಲಿದ್ದು, ಆ ಸಿನಿಮಾದ ಕುರಿತು ಮಾತುಕತೆ ನಡೆಸಲು ಕಂಗನಾ ಅವರು ಇಂದು ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿದ್ದರು.

  ರಾಜನಾಥ್ ಸಿಂಗ್ ಅವರೊಂದಿಗಿನ ಚಿತ್ರವನ್ನು ಪ್ರಕಟಿಸಿರುವ ಕಂಗನಾ ರಣೌತ್, 'ತಂಡದೊಂದಿಗೆ, ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ, ನಮ್ಮ ಸಿನಿಮಾದ ಬಗ್ಗೆ ಮಾಹಿತಿ ನೀಡಿ ಅವರಿಂದ ಆಶೀರ್ವಾದ ಪಡೆದುಕೊಂಡೆವು' ಎಂದಿದ್ದಾರೆ.

  ಅಷ್ಟೇ ಅಲ್ಲದೆ, ತೇಜಸ್ ಸಿನಿಮಾದ ಚಿತ್ರಕತೆಯನ್ನು ಭಾರತೀಯ ವಾಯುಸೇನೆಗೆ ನೀಡಿ ಅವರಿಂದ ಅನುಮತಿಯನ್ನು ಸಹ ಕಂಗನಾ ರಣೌತ್ ಹಾಗೂ ಚಿತ್ರತಂಡ ಪಡೆದುಕೊಂಡಿತಂತೆ. ತೇಜಸ್ ಸಿನಿಮಾವು ವಾಯುಸೇನೆ ಆಧರಿತವಾಗಿದ್ದು, ಪೈಲೆಟ್ ಪಾತ್ರದಲ್ಲಿ ನಟಿ ಕಂಗನಾ ರಣೌತ್ ನಟಿಸುತ್ತಿದ್ದಾರೆ.

  ಕಂಗನಾ ರಣೌತ್ ನಿನ್ನೆಯಷ್ಟೆ ಅವರ ನಟನೆಯ ಮೊದಲ ತಮಿಳು ಸಿನಿಮಾ, 'ತಲೈವಿ' ಯ ಚಿತ್ರೀಕರಣ ಮುಗಿಸಿದ್ದಾರೆ. ತಲೈವಿ ಸಿನಿಮಾವು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಜೀವನ ಆಧರಿಸಿದ್ದಾಗಿದೆ.

  ಉಹಾಪೋಹಗಳಿಗೆ ತೆರೆ ಎಳೆದ ಮಾಧವನ್ | Madhavan | Filmibeat Kannada

  ಕಂಗನಾ ರಣೌತ್ ಅವರು ಕೆಲ ತಿಂಗಳುಗಳಿಂದಲೂ ಪ್ರೊ ಬಿಜೆಪಿ ಆಗಿದ್ದಾರೆ. ಬಿಜೆಪಿಯ ವಿಚಾರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತಾ, ಬಿಜೆಪಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಶಿವಸೇನಾ, ಸಿಪಿಐಗಳನ್ನು ತೀವ್ರವಾಗಿ ನಿಂದಿಸಿ ಟ್ವೀಟ್ ಮಾಡುತ್ತಿದ್ದಾರೆ. ಹತ್ತಿರದಲ್ಲೇ ಕಂಗನಾ ಬಿಜೆಪಿ ಸೇರಲಿದ್ದಾರೆ ಎನ್ನುವ ಗಾಳಿಸುದ್ದಿಗಳು ಸಹ ಕೇಳಿಬರುತ್ತಿವೆ.

  English summary
  Actress Kangana Ranaut met defense minister Rajnath Singh today along with her Tejas movie team and took blessings from Rajnath Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X