For Quick Alerts
  ALLOW NOTIFICATIONS  
  For Daily Alerts

  ಮಾಧ್ಯಮದ ಮೇಲೆ ಹರಿಹಾಯ್ದ ಬೆಬೋ ಕರೀನಾ ಕಪೂರ್

  By Sonu Gowda
  |

  ಅಂತೂ-ಇಂತೂ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿಖಾನ್ ದಂಪತಿಗಳು ಮನೆಗೊಂದು ಹೊಸ ಅತಿಥಿಯನ್ನು ಸ್ವಾಗತಿಸಲು ತಯಾರಾಗಿದ್ದಾರೆ. ಈ ಖುಷಿಯ ನಡುವೆಯೂ ಕರೀನಾ ಅವರು ಮಾಧ್ಯಮದ ಮೇಲೆ ಕೊಂಚ ಗರಂ ಆಗಿದ್ದಾರೆ.

  ಅಂದಹಾಗೆ ಕರೀನಾ ಅವರು ತಾಯಿಯಾಗುತ್ತಿದ್ದಾರೆ ಅಂತ ಸೈಫ್ ಅವರು ಘೋಷಣೆ ಮಾಡಿದ್ದೇ ತಡ ಮಾಧ್ಯಮಗಳು ಇವರಿಬ್ಬರ ಸುದ್ದಿ ಬರೆಯುವುದರಲ್ಲಿ ಸಿಕ್ಕಾಪಟ್ಟೆ ಬಿಜಿ ಆಗ್ಬಿಟ್ರು. ಕರೀನಾ ನಿಂತರೂ ಸುದ್ದಿ, ನಡೆದರೂ ಸುದ್ದಿ, ಓಡಿದರೂ ಸುದ್ದಿ, ಕೂತರು ಸುದ್ದಿ. ಒಟ್ನಲ್ಲಿ ಈ ಸುದ್ದಿಗಳ ಭರಾಟೆಯಿಂದ ರೋಸಿ ಹೋದ ಕರೀನಾ ಮಾಧ್ಯಮದ ಮೇಲೆ ಕಿಡಿ ಕಾರಿದ್ದಾರೆ.[ಲಿಂಗ ಪತ್ತೆ ವದಂತಿ ಹಬ್ಬಿಸಿದವರಿಗೆ ಕರೀನಾ ಖಡಕ್ ಎಚ್ಚರಿಕೆ]

  "ನಾನು ತಾಯಿ ಆಗುತ್ತಿರೋದು ನಿಜ, ಅದರಲ್ಲೇನಿದೆ ವಿಶೇಷ?, ಒಬ್ಬಳು ತಾಯಿ ಮಗುವಿಗೆ ಜನ್ಮ ನೀಡುವುದು ಸಾಮಾನ್ಯ ವಿಷಯ. ನಾನು ಬರೀ ಗರ್ಭಿಣಿ ಆಗಿರೋದಷ್ಟೇ, ನಾನು ಶವವಲ್ಲ. ಆದ್ರೆ ಮಾಧ್ಯಮಗಳು ನನ್ನ ಪ್ರೆಗ್ನೆನ್ಸಿ ವಿಚಾರವನ್ನು ದೊಡ್ಡ ರಾಷ್ಟ್ರೀಯ ದುರ್ಘಟನೆ ಎಂಬಂತೆ ಬಿಂಬಿಸುತ್ತಿದೆ" ಎಂದು ಮಮ್ಮಿ ಆಗುತ್ತಿರುವ ಕರೀನಾ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.[ನನ್ನ ಮತ್ತು ಕರೀನಾ ಮಗು ಒಟ್ಟಿಗೆ ಸ್ಕೂಲ್ ಗೆ ಹೋಗ್ತಾರೆ: ತುಷಾರ್]

  "ನಾನು ಗರ್ಭಿಣಿ ಆದರೂ ನನ್ನ ಕೆಲಸಗಳು ಮೊದಲಿನಂತೆ ನಡೆಯುತ್ತಿವೆ. ಇದೇನು ರಾಷ್ಟ್ರಮಟ್ಟದ ಸುದ್ದಿಯಲ್ಲ, ಮಾಧ್ಯಮದವರು ನನ್ನನ್ನು ವಿಭಿನ್ನವಾಗಿ ನೋಡುವುದನ್ನು ಮೊದಲು ನಿಲ್ಲಿಸಿ. ನಾವೀಗ 2016ನೇ ಇಸವಿಯಲ್ಲಿ ಇದ್ದೇವೆ, 1800ನೇ ಕಾಲದಲ್ಲಿ ಅಲ್ಲ" ಎಂದು ಬಾಲಿವುಡ್ ಬೆಬೋ ಕರೀನಾ ಮಾಧ್ಯಮದ ಮೇಲೆ ಚಾಟಿ ಬೀಸಿದ್ದಾರೆ.[ಓಹ್..! ಪ್ರಿಯಾಮಣಿ ಜೊತೆ ಕಪೂರ್ ಕಣ್ಮಣಿ ಕರೀನಾ.!]

  ಇತ್ತೀಚೆಗೆ ಕರೀನಾ ಮತ್ತು ಸೈಫ್ ಅವರು ಏರ್ ಪೋರ್ಟ್ ನಲ್ಲಿ ಕಂಡು ಬಂದಾಗ ಕರೀನಾ ಅವರ ಬೇಬಿ ಬಂಪ್ ಮಾಧ್ಯಮಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದವು.

  English summary
  Actor Saif Ali Khan confirmed his wife Kareena Kapoor Khan's pregnancy. The news spread like wildfire with loads of speculations associated to it. But Kareena Kapoor is disappointed with the news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X