»   » ಕ್ಯಾಟ್ ವಾಕ್ ಮಾಡುತ್ತಿದ್ದ ಕರೀನಾ ದಿಢೀರ್ ಕಣ್ಣೀರು ಸುರಿಸಿದ್ಯಾಕೆ.?

ಕ್ಯಾಟ್ ವಾಕ್ ಮಾಡುತ್ತಿದ್ದ ಕರೀನಾ ದಿಢೀರ್ ಕಣ್ಣೀರು ಸುರಿಸಿದ್ಯಾಕೆ.?

By: ಸೋನು ಗೌಡ
Subscribe to Filmibeat Kannada

ಅಂತೂ ಎಲ್ಲರೂ ಕಾಯುತ್ತಿದ್ದ ಆ ಸುಂದರ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ, ಭಾನುವಾರ (ಆಗಸ್ಟ್ 28) ದಂದು ನೆರವೇರಿದೆ. ಮಹಾನಗರಿ ಮುಂಬೈನಲ್ಲಿ 'ಲ್ಯಾಕ್ಮೆ ಫ್ಯಾಷನ್ ವೀಕ್ - 2016' ಗ್ರ್ಯಾಂಡ್ ಸಮಾರಂಭದಲ್ಲಿ ಫ್ಯಾಷನ್ ಬೆಡಗಿಯರು ತಮ್ಮ ಝಲಕ್ ತೋರಿದರು.

ಲ್ಯಾಕ್ಮೆ ರಾಯಭಾರಿಯಾಗಿರುವ ನಟಿ ಕರೀನಾ ಕಪೂರ್, ನಟ ರಣಬೀರ್ ಕಪೂರ್ ಮತ್ತು ನಟಿ ದೀಪಿಕಾ ಪಡುಕೋಣೆ, ಬಿಪಾಶಾ ಬಸು, ಕರೀಷ್ಮಾ ಕಪೂರ್, ದಿಯಾ ಮಿರ್ಜಾ ಮುಂತಾದವರು ಈ ಅದ್ದೂರಿ ಸಮಾರಂಭದಲ್ಲಿ, ಎಲ್ಲರ ಕೇಂದ್ರ ಬಿಂದುವಾಗಿದ್ದರು.[ಮಾಧ್ಯಮದ ಮೇಲೆ ಹರಿಹಾಯ್ದ ಬೆಬೋ ಕರೀನಾ ಕಪೂರ್]

ಅಂದಹಾಗೆ ನಟಿ ಕರೀನಾ ಕಪೂರ್ ಅವರು ಸ್ಟೇಜ್ ಮೇಲೆ ರ್ಯಾಂಪ್ ವಾಕ್ ಮಾಡೋದು ಇದೇ ಮೊದಲೇನಲ್ಲಾ. ಆದರೆ ಈ ಬಾರಿ ಅವರಿಗೆ, ತಾವು ಮಾಡಿದ ರ್ಯಾಂಪ್ ವಾಕ್ ತುಂಬಾ ವಿಶೇಷವಾಗಿತ್ತು, ಹಾಗೂ ಈ ಸಂದರ್ಭವನ್ನು ನಾನು ನನ್ನ ಜೀವನಪೂರ್ತಿ ಮರೆಯೋದಿಲ್ಲ ಎಂದು ಹೇಳಿ ಕಣ್ಣೀರು ಸುರಿಸಿದ್ದಾರೆ.[ಲಿಂಗ ಪತ್ತೆ ವದಂತಿ ಹಬ್ಬಿಸಿದವರಿಗೆ ಕರೀನಾ ಖಡಕ್ ಎಚ್ಚರಿಕೆ]

ಅಷ್ಟಕ್ಕೂ ಕರೀನಾ ಅವರು ಅಷ್ಟೊಂದು ಎಮೋಷನಲ್ ಆಗಲು ಕಾರಣವೇನು ಅನ್ನೋದನ್ನು ನಾವು ಹೇಳ್ತೀವಿ, ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ....

ಕಂಗೊಳಿಸುತ್ತಿದ್ದ ಕರೀನಾ ಕಪೂರ್

ಫ್ಯಾಶನ್ ಡಿಸೈನರ್ ಸಭ್ಯಸಾಚಿ ಅವರು ಡಿಸೈನ್ ಮಾಡಿದ್ದ ವಿಶೇಷ-ಆಕರ್ಷಕ ಬಟ್ಟೆ ತೊಟ್ಟು ಕರೀನಾ ಅವರು ಲಕ-ಲಕ ಹೊಳೆಯುತ್ತಿದ್ದರು. ಜೊತೆಗೆ ವಿಶೇಷವಾಗಿ ಕರೀನಾ ಅವರು ಅಮ್ಮ ಆಗುತ್ತಿರುವುದರಿಂದ ಬೇಬಿ ಬಂಪ್ ನಲ್ಲಿಯೇ ಕ್ಯಾಟ್ ವಾಕ್ ಮಾಡಿದ್ದಾರೆ.[ನನ್ನ ಮತ್ತು ಕರೀನಾ ಮಗು ಒಟ್ಟಿಗೆ ಸ್ಕೂಲ್ ಗೆ ಹೋಗ್ತಾರೆ: ತುಷಾರ್]

ಸದಾ ನೆನಪಿನಲ್ಲುಳಿಯುವ ರ್ಯಾಂಪ್ ವಾಕ್

'ಲ್ಯಾಕ್ಮೆ ಫ್ಯಾಶನ್ ವೀಕ್-2016' ನಲ್ಲಿ ಖ್ಯಾತ ಡಿಸೈನರ್ ಸಭ್ಯಸಾಚಿ ಅವರಿಗಾಗಿ ರ್ಯಾಂಪ್ ವಾಕ್ ಮಾಡಿ, ಮಾತನಾಡಿದ ಕರೀನಾ ಅವರು "ಈ ರ್ಯಾಂಪ್ ವಾಕ್ ನನಗೆ ಯಾವಾಗಲೂ ನೆನಪಿನಲ್ಲಿರುತ್ತದೆ. ಯಾಕೆಂದರೆ ಮೊದಲ ಬಾರಿಗೆ, ನಾನು ನನ್ನ ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು ವಾಕ್ ಮಾಡುತ್ತಿದ್ದೇನೆ" ಎಂದು ಕೊಂಚ ಭಾವುಕಳಾಗಿ, ವೇದಿಕೆ ಮೇಲೆ ಆನಂದಭಾಷ್ಪ ಸುರಿಸಿದರು.[ಓಹ್..! ಪ್ರಿಯಾಮಣಿ ಜೊತೆ ಕಪೂರ್ ಕಣ್ಮಣಿ ಕರೀನಾ.!]

ಒಬ್ಬರೇ ಅಲ್ಲ, ಇಬ್ಬರು.!

"ಈ ಹಿಂದೆ ಸಭ್ಯಸಾಚಿ ಅವರು ವಿನ್ಯಾಸ ಮಾಡಿದ್ದ ಬಟ್ಟೆಯನ್ನು ಹಾಕಿ ಯಾವತ್ತಿಗೂ ರ್ಯಾಂಪ್ ವಾಕ್ ಮಾಡಿರಲಿಲ್ಲ. ಜೊತೆಗೆ ನಾವಿಬ್ಬರೂ ಈ ಮೊದಲು ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಆದರೆ ಈ ದಿನ ಸಭ್ಯಸಾಚಿ ವಿನ್ಯಾಸ ಮಾಡಿದ ಬಟ್ಟೆ ತೊಟ್ಟು, ಮೊದಲ ಬಾರಿಗೆ ನನ್ನ ಮಗುವಿನೊಂದಿಗೆ ರ್ಯಾಂಪ್ ವಾಕ್ ಮಾಡುತ್ತಿದ್ದೇನೆ. ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಕರೀನಾ ಅವರು ಉದ್ಘರಿಸಿದ್ದಾರೆ.

ಸಾಯೋವರೆಗೆ ನಟಿಸುತ್ತೇನೆ

ಇದೇ ಸಂದರ್ಭದಲ್ಲಿ ಮಾತನಾಡಿದ ಕರೀನಾ ಅವರು, "ನಾನು ಗರ್ಭಿಣಿ ಆಗಿದ್ದಕ್ಕೆ ತುಂಬಾ ಸಂತೋಷದಿಂದಿದ್ದೇನೆ. ಗರ್ಭಿಣಿ ಹೆಂಗಸು ನಾರ್ಮಲ್ ಆಗಿ ನಡೆದಾಡುತ್ತಾರೆ. ಇನ್ನು ನನ್ನ ಕೆಲಸದ ವಿಚಾರಕ್ಕೆ ಬಂದರೆ, ನಟಿಸೋದು ನನ್ನ ಉತ್ಸಾಹ, ನಾನು ಸಾಯೋವರೆಗೂ ಸಿನಿಮಾದಲ್ಲಿ ನಟಿಸುತ್ತೇನೆ". ಎಂದು ಕರೀನಾ ಕಪೂರ್ ಅವರು ತಿಳಿಸಿದ್ದಾರೆ.

ಮಾಜಿ ಪ್ರಿಯಕರನಿಗೆ ಮಗು ಆಯ್ತು

ಎರಡು ದಿನಗಳ ಹಿಂದೆಯಷ್ಟೇ ನಟ ಶಾಹೀದ್ ಕಪೂರ್ ಅವರಿಗೆ ಹೆಣ್ಣು ಮಗುವಾಗಿದೆ. ಕಪೂರ್ ಫ್ಯಾಮಿಲಿಗೆ ಪುಟ್ಟ ರಾಜಕುಮಾರಿ ಎಂಟ್ರಿಯಾಗಿದ್ದಕ್ಕೆ, ಇಡೀ ಕುಟುಂಬವೇ ಸಂಭ್ರಮ ಪಟ್ಟಿದೆ. ಇದೀಗ ಶಾಹೀದ್ ಕಪೂರ್ ಫ್ಯಾಮಿಲಿಯ ನಂತರ ಸೈಫ್ ಅಲಿಖಾನ್-ಕರೀನಾ ಕಪೂರ್ ಫ್ಯಾಮಿಲಿ ಕೂಡ ಸಂಭ್ರಮದ ಕ್ಷಣಗಳಲ್ಲಿ ಭಾಗಿಯಾಗಲು ಕಾತರದಿಂದ ಕಾಯುತ್ತಿದ್ದಾರೆ. ಅಂತೂ ಮಾಜಿ ಪ್ರೇಮಿಗೆ ಮಗು ಆದ ಬೆನ್ನಲ್ಲೇ ಕರೀನಾ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

English summary
The finale of Lakme Fashion Week is here and it ends on a glamorous note. Celebs including Deepika Padukone, Kareena Kapoor, Ranbir Kapoor, Karisma Kapoor, Bipasha Basu, Dia Mirza and others spotted walking the ramp at the LFW finale. Actress Kareena was seen proudly flaunting her baby bump in an elegant with a glowing face adding more spark to her beautiful persona. Kareena says that this edition was different for her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada