»   » ಅಬ್ಬಾ! ಕೆಂಪು ಕೂದಲಿಗಾಗಿ ಅರ್ಧ ಕೋಟಿ ಖರ್ಚು ಮಾಡಿದ್ರಾ ಕ್ಯಾಟ್

ಅಬ್ಬಾ! ಕೆಂಪು ಕೂದಲಿಗಾಗಿ ಅರ್ಧ ಕೋಟಿ ಖರ್ಚು ಮಾಡಿದ್ರಾ ಕ್ಯಾಟ್

By: ಸೋನು ಗೌಡ
Subscribe to Filmibeat Kannada

ನಟಿ ಕತ್ರಿನಾ ಕೈಫ್ ಅವರು ತಮ್ಮ ಮುಂದಿನ ರೊಮ್ಯಾಂಟಿಕ್ ಸಿನಿಮಾ 'ಫಿತೂರ್' ಸಿನಿಮಾದಲ್ಲಿನ ಹೇರ್ ಸ್ಟೈಲ್ ಗಾಗಿ ಒಂದಲ್ಲಾ-ಎರಡಲ್ಲಾ, ಬರೋಬ್ಬರಿ 55 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇದನ್ನು ತಿಳಿದ ಬರೀ ಅಭಿಮಾನಿಗಳು ಮಾತ್ರವಲ್ಲ ಸ್ವತಃ ಚಿತ್ರದ ನಿರ್ಮಾಪಕರೇ ದಂಗಾಗಿದ್ದಾರಂತೆ.

ನಟ ಆದಿತ್ಯಾ ರಾಯ್ ಕಪೂರ್ ಜೊತೆ ಕಾಣಿಸಿಕೊಳ್ಳುತ್ತಿರುವ 'ಫಿತೂರ್' ಚಿತ್ರಕ್ಕಾಗಿ ಮಾಡಿರುವ ಕೆಂಪು ಬಣ್ಣದ ಕೇಶ ವಿನ್ಯಾಸಕ್ಕಾಗಿ ಬರೋಬ್ಬರಿ 55 ಲಕ್ಷ ಅಂದರೆ ಅರ್ಧ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಇದೀಗ ಇವರ ಕೆಂಪು ಕೂದಲು ಸಾಮಾಜಿಕ ಜಾಲತಾಣಗಳಲ್ಲಿನ ಫ್ಯಾಶನ್ ಪ್ರೀಯರಲ್ಲಿ ಅತೀ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.[ರಣಬೀರ್ ಮೇಲೆ ಸೇಡಿನ ಜ್ವಾಲೆ, ಸಲ್ಲು ಜೊತೆ ಸೇರಿಕೊಂಡ ಕ್ಯಾಟ್ ]

ನಟಿ ಕತ್ರಿನಾ ಅವರು ತಮ್ಮ ಕೇಶಕ್ಕೆ ನಿರ್ದಿಷ್ಟ ಕೆಂಪು ಬಣ್ಣವನ್ನು ನೀಡಲು ಮುಂಬೈನ ಸ್ಥಳೀಯ ಕೇಶ ವಿನ್ಯಾಸಕಾರರಿಗೆ ಸಾಧ್ಯವಾಗದ ಕಾರಣ ಫ್ಲೈಟ್ ಹತ್ತಿ ಲಂಡನ್ ನ ಕೇಶ ವಿನ್ಯಾಸಕಾರರ ಮೊರೆ ಹೋಗಿ ತಮ್ಮ ಕೂದಲಿಗೆ ಕೆಂಪು ಬಣ್ಣ ಹೊಡೆಸಿಕೊಂಡು ಬಂದಿದ್ದಾರೆ.[ಅಬ್ಬಾ! ಲವ್ ಬ್ರೇಕ್ ಅಪ್ ಆದ್ರೂ ಕ್ಯಾಟ್ ಹ್ಯಾಪಿ, ಹೇಗೆ]

ಇನ್ನು ಹಾಕಿಸಿಕೊಂಡ ಬಣ್ಣ ಸ್ವಲ್ಪ ಡಲ್ ಆದಾಗ ಮತ್ತೆ ಕತ್ರಿನಾ ಅವರು ಕಾಶ್ಮೀರದಿಂದ ದಿಲ್ಲಿಗೆ ಬಂದು ಲಂಡನ್ ಗೆ ಪ್ರಯಾಣ ಬೆಳೆಸುತ್ತಿದ್ದರು. ಹೀಗೆ ಕ್ಯಾಟ್ ಅವರ ಸವಾರಿ ನಾಲ್ಕೈದು ಬಾರಿ ಲಂಡನ್ ಗೆ ಹೋಗುತ್ತಿದ್ದಾಗ ಅವರು ಕುಟುಂಬ ಸಮೇತರಾಗಿ ಪ್ರಯಾಣ ಬೆಳೆಸುತ್ತಿದ್ದರು. ಮುಂದೆ ಓದಿ....

ಎಲ್ಲಾ ಖರ್ಚು ಸೇರಿ ಅರ್ಧ ಕೋಟಿ

ನಟಿ ಕತ್ರಿನಾ ಅವರು ಪದೇ ಪದೇ ಲಂಡನ್ ಗೆ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ಅವರ ಫ್ಯಾಮಿಲಿ ಕೂಡ ತೆರಳುತ್ತಿದ್ದು, ವಿಮಾನದ ಟಿಕೆಟ್ ಖರ್ಚು, ಅಲ್ಲಿ ಉಳಿದುಕೊಳ್ಳು ಫೈವ್‌ ಸ್ಟಾರ್ ಹೋಟೆಲ್ ನ ಖರ್ಚು-ವೆಚ್ಚ, ಊಟೋಪಚಾರ, ಡಿಸೈನಿಂಗ್ ಶುಲ್ಕ ಎಲ್ಲಾ ಸೇರಿ ಒಟ್ಟು 55 ಲಕ್ಷ ರೂಪಾಯಿ ವೆಚ್ಚ ತಗುಲಿದೆ.[ನಿಖಿಲ್ 'ಜಾಗ್ವಾರ್' ನಲ್ಲಿ ಸೊಂಟ ಬಳುಕಿಸಲು ಕ್ಯಾಟ್ ಬರ್ತಾರಂತೆ.!]

ಕ್ಯಾಟ್-ಆದಿ

ನಟಿ ಕತ್ರಿನಾ ಕೈಫ್ ಮತ್ತು ನಟ ಆದಿತ್ಯಾ ರಾಯ್ ಕಪೂರ್ ಅವರು 'ಫಿತೂರ್' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಕಂಡುಬಂದಿದ್ದು ಹೀಗೆ.

ಫಿತೂರ್ ಸಿನಿಮಾ

ರೊಮ್ಯಾಂಟಿಕ್ ಸಿನಿಮಾ 'ಫಿತೂರ್' ನಲ್ಲಿ ಕತ್ರಿನಾ ಕತ್ತು ಆದಿತ್ಯಾ ಅವರು ಲವ್ ಬರ್ಡ್ಸ್ ಆಗಿರುತ್ತಾರೆ. ಚಿತ್ರದಲ್ಲಿ ಕತ್ರಿನಾ ಅವರು ಬಹಳ ಪವರ್ ಫುಲ್ ಜೊತೆಗೆ ಮುಖ್ಯವಾದ ಪಾತ್ರ ವಹಿಸಿದ್ದಾರೆ.

ಕತ್ರಿನಾ ಕೈಫ್

'ಫಿತೂರ್' ಸಿನಿಮಾದಲ್ಲಿ ಇಂತಹ ರೊಮ್ಯಾಂಟಿಕ್ ರೋಲ್ ಮಾಡಲು ಕತ್ರಿನಾ ಅವರನ್ನು ಸಂಪರ್ಕಿಸಿ ಕೇಳಿಕೊಂಡಿದ್ದು, ಚಿತ್ರದ ನಿರ್ದೇಶಕ ಅಭಿಷೇಕ್ ಕಪೂರ್ ಅವರು. ಇನ್ನು ಕ್ಯಾಟ್ ಅವರಿಗೂ ಲವ್ ಸ್ಟೋರಿ ಹಾಗೂ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸೋದು ಅಂದ್ರೆ ತುಂಬಾ ಇಷ್ಟವಂತೆ.

ಕ್ಯಾಟ್

ಫೆಬ್ರವರಿ 12ಕ್ಕೆ ಸಿನಿಮಾ ತೆರೆ ಕಾಣುತ್ತಿದ್ದು, ಪ್ರೇಮಿಗಳ ದಿನಾಚರಣೆ ದಿನ ಅಭಿಮಾನಿಗಳಿಗೆ ಗಿಫ್ಟ್ ಆಗಿ ಬಿಡುಗಡೆ ಆಗಲಿದೆ. ಸದ್ಯಕ್ಕೆ ನಟಿ ಕತ್ರಿನಾ ಅವರು ರಣಬೀರ್ ಕಪೂರ್ ಜೊತೆ ತಮ್ಮ ಲವ್ ಬ್ರೇಕ್ ಅಪ್ ಆದ ಮೇಲೆ ನಟ ಆದಿತ್ಯಾ ಹಾಗೂ ನಿರ್ದೇಶಕ ಅಭಿಷೇಕ್ ಕಪೂರ್ ಜೊತೆ ಚಿತ್ರದ ಪ್ರೊಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಕತ್ರಿನಾ ಮತ್ತು ಆದಿತ್ಯಾ

'ಫಿತೂರ್' ಚಿತ್ರದ ಪ್ರೊಮೋಷನ್ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಚಿತ್ರದ ಕಥೆ ಮತ್ತು ಶೂಟಿಂಗ್ ಅನುಭವಗಳನ್ನು ಹಂಚಿಕೊಂಡ ಸಂದರ್ಭದಲ್ಲಿ ಕತ್ರಿನಾ ಮತ್ತು ಆದಿತ್ಯಾ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದು.

English summary
Katrina Kaif's red hair in Fitoor costs Rs 55 lakhs. Not just that, even the producers of the movie were shocked to know their leading lady's hair colour's price.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada