»   » ಉಗ್ರರೊಂದಿಗೆ ನಂಟಿಟ್ಟುಕೊಂಡ ತಾರೆ ಕೊಲೆಯಾದಳೆ

ಉಗ್ರರೊಂದಿಗೆ ನಂಟಿಟ್ಟುಕೊಂಡ ತಾರೆ ಕೊಲೆಯಾದಳೆ

Posted By:
Subscribe to Filmibeat Kannada
Actress Laila Khan
ಬಾಲಿವುಡ್ ನಟ ರಾಜೇಶ್ ಖನ್ನ ಜೊತೆ ವಫಾ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ಲೈಲಾ ಖಾನ್ ಎಂಬ ತಾರೆಗೆ ಲಷ್ಕರ್ ಇ ತೊಯ್ಬಾ (ಎಲ್‌ಇಟಿ) ಉಗ್ರರ ಜೊತೆ ಸಂಬಂಧ ಇರುವುದು ಅಂಶ ಪತ್ತೆಯಾಗಿದೆ. ಮುಂಬೈ ಹೈಕೋರ್ಟ್ ಸ್ಫೋಟಕ್ಕೆ ಈಕೆಯ ಕಾರಿನಲ್ಲೇ ಬಾಂಬ್‌ನ್ನು ಸಾಗಿಸಲಾಗಿತ್ತು ಎಂಬ ಅಂಶ ಪತ್ತೆಯಾಗಿದೆ.

2011ರಲ್ಲಿ ಈಕೆ ತನ್ನ ಮಲತಂದೆ, ಸಹೋದರಿ ಮತ್ತು ಕುಟುಂಬದ ಸ್ನೇಹಿತನೊಂದಿಗೆ ನಾಪತ್ತೆಯಾಗಿದ್ದರು. ಲೈಲಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದಕ್ಕೆ ಹಲವಾರು ದಾಖಲೆಗಳು ಪೊಲೀಸರಿಗೆ ಲಭ್ಯವಾಗಿವೆ.

ಈಕೆ ನಾಪತ್ತೆಯಾದಾಗ ಅದರ ನಿಗೂಢತೆಯನ್ನು ಭೇದಿಸಲು ಜಮ್ಮು ಕಾಶ್ಮೀರ ಪೊಲೀಸರು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಬೆಚ್ಚಿ ಬೀಳಿಸುವಂತಹ ಮಾಹಿತಿಗಳು ಹೊರಬಿದ್ದಿವೆ. ಲೈಲಾ ಮತ್ತು ಆಕೆಯ ಸಂಬಂಧಿಗಳು ಲಷ್ಕರ್ ಇ ತೊಯ್ಬಾ ಉಗ್ರರ ಜೊತೆ ಸಂಬಂಧ ಹೊಂದಿರುವುದು, ವಿಧ್ವಂಸಕ ಕೃತ್ಯಗಳಿಗೆ ಆಕೆಯ ಮನೆಯಲ್ಲೇ ರಹಸ್ಯ ಸಭೆಗಳು ನಡೆದಿರುವ ಅಂಶಗಳು ಪತ್ತೆಯಾಗಿವೆ.

ದೆಹಲಿ ಹೈಕೋರ್ಟ್ ಸ್ಫೋಟಕ್ಕೆ ಲೈಲಾ ತೋಟದ ಮನೆಯಲ್ಲಿ ಎಲ್‌ಇಟಿ ಮುಖಂಡ ಡಾ.ವಾಸಿಂ ಯಾಸೀನ್ ಹಾಗೂ ಗುಲಾಂ ಜೊತೆ ಸಭೆ ನಡೆಸಿ ಇಡೀ ಕಟ್ಟಡಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯಾಧಾರಗಳನ್ನು ನಾಶ ಮಾಡಿರುವ ಅಂಶವನ್ನೂ ಗುಪ್ತಚರ ಇಲಾಖೆ ಖಚಿತಪಡಿಸಿದೆ.

ಇವರು ಸಭೆ ನಡೆಸಿದ ಬಳಿಕ ಈಕೆಯ ಐಶಾರಾಮಿ ಕಾರಿನಲ್ಲೇ ಸ್ಫೋಟಕವನ್ನು ಸಾಗಿಸಲಾಗಿತ್ತು. ಈಕೆಯ ಕಾರಿನಲ್ಲೇ ಉಗ್ರರು ಜಮ್ಮು ಕಾಶ್ಮೀರದ ಕಿಸ್ತಾವರ್ ವರೆಗೂ ಸಂಚರಿಸಿದ್ದಾರೆ. ಮುಂಬೈನಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು.

ದೆಹಲಿ ಹೈಕೋರ್ಟ್ ಸ್ಫೋಟಿದ ನಂತರ ಲೈಲಾ ಖಾನ್ ಹಾಗೂ ಈಕೆಯ ಸಂಬಂಧಿಕರು ಹಣದೊಂದಿಗೆ ತೆರಳುತ್ತಿದ್ದಾಗ ಉಗ್ರರು ಕೊಂದು ಹಾಕಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಮೂಲದ ಪ್ರಕಾರ, ಈಕೆ ದುಬೈನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಸಾಧ್ಯತೆಗಳಿವೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಂಪ್ಯೂಟರ್ ಲಾಕ್ ಸಿಸ್ಟಂ ಹೊಂದಿರುವ ಈಕೆಯ ಕಾರಿನ ಪರಿಶೀಲನೆ ನಡೆಯುತ್ತಿದೆ. ದೆಹಲಿಯಲ್ಲಿ ನಡೆದ ಸ್ಫೋಟದಲ್ಲಿ 11 ಮಂದಿ ಸಾವಪ್ಪಿ 76 ಮಂದಿ ಗಾಯಗೊಂಡಿದ್ದರು. (ಏಜೆನ್ಸೀಸ್)

English summary
It has come to light that Laila Khan, the Bollywood starlet who has been missing since last year, recced Mumbai in 2011 along with her stepfather, sister and a family friend, and provided maps and photographs from the trip to the Pakistan-based terror outfit Lashkar-e-Taiba, which was then planning a terror attack in Mumbai.
Please Wait while comments are loading...