For Quick Alerts
  ALLOW NOTIFICATIONS  
  For Daily Alerts

  200 ಕೋಟಿ ಸುಲಿಗೆ ಪ್ರಕರಣ: 'ಮದ್ರಾಸ್ ಕೆಫೆ' ನಟಿ ಬಂಧನ

  |

  ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ, ರೂಪದರ್ಶಿ ಲೀನಾ ಮರಿಯಾ ಪೌಲ್ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವ ವಿಚಾರ ಹೊರಬಿದ್ದಿದೆ. ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಮಾಡಲು ಯತ್ನಿಸಿರುವ ಕೇಸ್‌ನಲ್ಲಿ ತನ್ನ ಬಾಯ್‌ಫ್ರೆಂಡ್‌ಗೆ ಸಹಾಯ ಮಾಡಿರುವ ಆರೋಪದಲ್ಲಿ ನಟಿಯನ್ನು ಭಾನುವಾರ (ಸೆಪ್ಟೆಂಬರ್ 5) ಅರೆಸ್ಟ್ ಮಾಡಲಾಗಿದೆ ಎಂದು ತಿಳಿದಿದೆ.

  ಪಿಟಿಐನಲ್ಲಿ ವರದಿಯ ಪ್ರಕಾರ, ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಎಂಸಿಒಸಿಎ (Maharashtra Control of Organised Crime (MCOCA) ಕಾಯ್ದೆ ಜಾರಿ ಮಾಡಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

  200 ಕೋಟಿ ಸುಲಿಗೆ ಪ್ರಕರಣ: ನಟಿ ಲೀನಾ ಪೌಲ್ ವಿಚಾರಣೆ ನಡೆಸಿದ ಇಡಿ200 ಕೋಟಿ ಸುಲಿಗೆ ಪ್ರಕರಣ: ನಟಿ ಲೀನಾ ಪೌಲ್ ವಿಚಾರಣೆ ನಡೆಸಿದ ಇಡಿ

  ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರಚಾರಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರನ್ನು ವಂಚಿಸಲು ಬಾಯ್‌ಫ್ರೆಂಡ್‌ಗೆ ಲೀನಾ ಮರಿಯಾ ಸಹಾಯ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಹಿರಂಗಪಡಿಸಿದರು. 2019ರಲ್ಲಿ ಮನಿ ಲಾಂಡರಿಂಗ್ ಕೇಸ್‌ನಲ್ಲಿ ಶಿವಿಂದರ್ ಬಂಧನವಾಗಿತ್ತು.

  ಕಳೆದ ತಿಂಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ಇಡಿ (ಜಾರಿ ನಿರ್ದೇಶನಾಲಯ) ನಟಿ ಲೀನಾ ಮರಿಯಾ ಪೌಲ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಈಗಾಗಲೇ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೆ ಕಾರ್ಪೊರೇಟ್‌ ಸಂಸ್ಥೆಗಳನ್ನು, ಉದ್ಯಮಿಗಳಿಗೆ ಬೆದರಿಕೆ ಹಾಕಿ ಅವರಿಂದ ನೂರಾರು ಕೋಟಿ ಹಣ ವಸೂಲಿ ಮಾಡಿದ್ದಾನೆ. ಇದೇ ಪ್ರಕರಣದಲ್ಲಿ 'ಮದ್ರಾಸ್ ಕೆಫೆ' ಲೀನಾ ಮರಿಯಾ ಪೌಲ್ ಆತನಿಗೆ ಸಹಾಯವಾಗಿ ನಿಂತಿದ್ದಳು ಎಂಬ ಆರೋಪ ಕೇಳಿ ಬಂದಿದೆ.

  ಅದಕ್ಕೂ ಮುಂಚೆ ಸುಕೇಶ್ ಚಂದ್ರನಿಗೆ ಸೇರಿದ ಚೆನ್ನೈನ ಮನೆ ಮೇಲೆ ಸಿಬಿಐ ಮತ್ತು ಇಡಿ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ದಾಳಿ ವೇಳೆ ಐಶಾರಾಮಿ ಮನೆಯಲ್ಲಿದ್ದ 16 ದುಬಾರಿ ಕಾರುಗಳು, ಕೇಜಿಗಟ್ಟಲೆ ಚಿನ್ನ ಇನ್ನಿತರ ಐಶಾರಾಮಿ ವಸ್ತುಗಳನ್ನು ಇಡಿ ವಶಪಡಿಸಿಕೊಂಡಿತ್ತು.

  ಇನ್ನು ಅದಾಗಲೇ ಜೈಲಿನಲ್ಲಿರುವ ತನ್ನ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಹಾಯ ಮಾಡುತ್ತೇನೆ ಎಂದು ವ್ಯಕ್ತಿಯೊಬ್ಬ ಸಂಪರ್ಕಿಸಿದ್ದು, ಕೋಟ್ಯಾಂತರ ರೂಪಾಯಿ ಹಣದ ಬೇಡಿಕೆಯಿಟ್ಟಿರುವ ವಿಚಾರವನ್ನು ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಿತಿ ಸಿಂಗ್ ಮಾಹಿತಿ ಹಿನ್ನೆಲೆ ಆಗಸ್ಟ್ 7 ರಂದು ಕೇಸ್ ದಾಖಲಿಸಿ ಎಫ್ ಐ ಆರ್ ಮಾಡಲಾಗಿತ್ತು.

  ತಾನೊಬ್ಬ ಕಾನೂನು ಸಚಿವಾಲಯದ ಹಿರಿಯ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಅದಿತಿ ಸಿಂಗ್‌ಗೆ ಕರೆ ಮಾಡಿದ್ದ ಸುಕೇಶ್ ಚಂದ್ರಶೇಖರ್ ಮೇಲೆ ಮೊದಲೇ ಪೊಲೀಸರು ನಿಗಾವಹಿಸಿದ್ದರು. ಬಳಿಕ, ಅದಿತಿ ಸಿಂಗ್ ಜೊತೆ ಮಾತನಾಡಿದ ಬಳಿಕ ಆ ಫೋನ್‌ಕಾಲ್‌ನ್ನು ನಟಿ ಲೀನಾಗೆ ವರ್ಗಾಯಿಸಲಾಗಿದೆ. ಆ ಆಧಾರದಲ್ಲಿ ಮದ್ರಾಸ್ ಕೆಫೆ ನಟಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

  ಬಂಧನಕ್ಕೂ ಮುಂಚೆಯೂ ನಟಿ ಲೀನಾ ಮರಿಯಾ ಪೌಲ್ ಜಾರಿ ನಿರ್ದೇಶನಾಲಯದ ಕಣ್ಗಾವಲಿನಲ್ಲಿದ್ದಳು.

  English summary
  'Madras Cafe' Fame Actress Leena Maria Paul Arrested in Rs 200 Crore Extortion Case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X