»   » ಬಾಲಿವುಡ್ ತಾರೆ ಮನೀಷಾ ಕೋಯಿರಾಲಾಗೆ ಕ್ಯಾನ್ಸರ್

ಬಾಲಿವುಡ್ ತಾರೆ ಮನೀಷಾ ಕೋಯಿರಾಲಾಗೆ ಕ್ಯಾನ್ಸರ್

Posted By:
Subscribe to Filmibeat Kannada
ಬಾಲಿವುಡ್ ತಾರೆ ಮನೀಷಾ ಕೋಯಿರಾಲಾ ಅವರಿಗೆ ಕ್ಯಾನ್ಸರ್ ಕಾಯಿಲೆ ಇದೆ ಎಂಬ ಸಂಗತಿ ವೈದ್ಯಕೀಯ ವರದಿಯಲ್ಲಿ ಬಹಿರಂಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಮುಂಬೈನ ಜಾಸ್ಲಕ್ ಆಸ್ಪತ್ರೆಗೆ ದಾಖಲಾಗಿದ್ದರು.

ವೈದ್ಯರು ಆಕೆಯನ್ನು ಪರೀಕ್ಷಿಸಲಾಗಿ ಆಕೆ ಕ್ಯಾನ್ಸರ್ ಇರುವುದು ಬೆಳಕಿಗೆ ಬಂದಿದೆ. ತೀವ್ರವಾಗಿ ಬಳಲಿದ್ದ ಅವರು ಪ್ರಜ್ಞೆ ತಪ್ಪಿ ಬಿದ್ದ ಕಾರಣ ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರಿಗೆ ಏನಾಗಿದೆ ಎಂಬ ವೈದ್ಯಕೀಯ ವರದಿ ಇನ್ನೂ ಬಂದಿರಲಿಲ್ಲ.

ಇದೀಗ ಅದರ ರಿಪೋರ್ಟ್ ಬಂದಿದ್ದು ಆಕೆಯಗೆ ಕ್ಯಾನ್ಸರ್ ಇರುವ ಅಂಶ ಪತ್ತೆಯಾಗಿದೆ. ಇಷ್ಟು ದಿನಗಳ ಕಾಲ ಅವರು ಕಠ್ಮಡುನಲ್ಲಿ ವಾಸವಾಗಿದ್ದರು. ನೇಪಾಳದಲ್ಲಿ ಹೊಸ ಮನೆ ನಿರ್ಮಿಸುತ್ತಿರುವ ಅವರು ಕೆಲದಿನಗಳ ಹಿಂದೆ ಅನಾರೋಗ್ಯಕ್ಕೆ ಗುರಿಯಾಗಿದ್ದರು.

ಆಹಾರನಂಜಾದ ಕಾರಣ ಹೀಗಾಗಿರಬಹುದು ಎಂದು ಆರಂಭದಲ್ಲಿ ಭಾವಿಸಿದ್ದರು. ಈ ಬಗ್ಗೆ ಟ್ವಿಟ್ಟರ್ ನಲ್ಲೂ ಸುದ್ದಿಯಾಗಿತ್ತು. ಆದರೆ ಆಕೆಯ ಪರಿಸ್ಥಿತಿ ತೀರಾ ಹದಗೆಟ್ಟ ಬಳಿಕ ಅವರು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಕ್ಯಾನ್ಸರ್ ಇರುವ ಬಗ್ಗೆ ಪಾಸಿಟೀವ್ ವರದಿ ಬಂದಿದೆ. ಅದು ಯಾವ ರೀತಿಯ ಕ್ಯಾನ್ಸರ್ ಎಂಬುದು ಇನ್ನಷ್ಟೇ ಗೊತ್ತಾಗಬೇಕು. (ಏಜೆನ್ಸೀಸ್)

English summary
Bollywood actress Manisha Koirala has been diagnosed with cancer. The lady who was hospitalized following illness is suffering from the disease, it has been reported. The actress is currently admitted to Jaslok hospital, Mumbai.
Please Wait while comments are loading...