For Quick Alerts
  ALLOW NOTIFICATIONS  
  For Daily Alerts

  ನುಸ್ರುತ್ ಮಗುವಿನ ಜನನ ಪ್ರಮಾಣಪತ್ರದಿಂದ ಬಹಿರಂಗವಾಯ್ತು ತಂದೆಯ ಸೀಕ್ರೆಟ್

  By ಫಿಲ್ಮಿಬೀಟ್ ಡೆಸ್ಕ್
  |

  ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ಹಾಗು ಚಲನಚಿತ್ರ ನಟಿ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಮಗುವಿನ ತಂದೆ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡುತ್ತಿದೆ. ನುಸ್ರುತ್ ಆಗಸ್ಟ್ 26ರಂದು ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ನುಸ್ರುತ್ ಅವರಿಗೆ ತನ್ನ ಮಗುವಿನ ತಂದೆ ಯಾರೆನ್ನುವ ಪ್ರಶ್ನೆ ಪದೆ ಪದೇ ಎದುರಾಗಿತ್ತು.

  ಇತ್ತೀಚಿಗಷ್ಟೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ನುಸ್ರುತ್ ಅವರಿಗೆ ಮಗುವಿನ ತಂದೆ ಯಾರು ಎಂದು ಪ್ರಶ್ನೆ ಮಾಡಲಾಗಿತ್ತು. ತನ್ನ ಮಗುವಿನ ತಂದೆ ಯಾರೆಂದು ಕೇಳುತ್ತಿದ್ದವರಿಗೆ ನುಸ್ರುತ್ ಖಡಕ್ ಆಗಿ ಉತ್ತರ ನೀಡಿದ್ದರು. "ತಂದೆ ಯಾರೆಂದು ತಂದೆಗೆ ಖಂಡಿತ ತಿಳಿದಿದೆ. ಈ ಸಮಯದಲ್ಲಿ ನಾನು ಮತ್ತು ಯಶ್ (ನಟ ಯಶ್ ದಾಸ್ ಗುಪ್ತ) ಉತ್ತಮ ಪೋಷಕರನ್ನು ಹೊಂದಿದ್ದೇವೆ. ಉತ್ತಮ ಸಮಯ ಹೊಂದಿದ್ದೇವೆ" ಎಂದು ಹೇಳಿದರು. ಆದರೂ ನುಸ್ರುತ್ ಮಗುವಿನ ತಂದೆ ಯಾರೆನ್ನುವ ಪ್ರಶ್ನೆ ನಿಂತಿರಲಿಲ್ಲ. ಇದೀಗ ಅದಕ್ಕೂ ಉತ್ತರ ಸಿಕ್ಕಿದೆ.

  ಜನನ ಪ್ರಮಾಣ ಪಾತ್ರದಲ್ಲೇನಿದೆ ತಂದೆಯ ಹೆಸರು

  ಜನನ ಪ್ರಮಾಣ ಪಾತ್ರದಲ್ಲೇನಿದೆ ತಂದೆಯ ಹೆಸರು

  ನುಸ್ರುತ್ ಮಗುವಿನ ತಂದೆ ಯಾರು ಎನ್ನುವ ಸೀಕ್ರೆಟ್ ಮಗುವಿನ ಜನನ ಪ್ರಮಾಣ ಪಾತ್ರದಲ್ಲಿ ಬಹಿರಂಗವಾಗಿದೆ. ನುಸ್ರುತ್ ತನ್ನ ಮಗನಿಗೆ ಯಿಶಾನ್ ಜೆ ದಾಸ್ ಗುಪ್ತ (Yishaan) ಎಂದು ಹೆಸರಿಟ್ಟಿದ್ದಾರೆ. ತಂದೆಯ ಹೆಸರು ಯಶ್ ದಾಸ್ ಗುಪ್ತ ಎಂದು ಇದೆ. ಈ ಮೂಲಕ ಮಗುವಿನ ತಂದೆ ಯಾರೆನ್ನುವುದು ಈಗ ಅಧಿಕೃತವಾದಂತಾಗಿದೆ.

  ಮಗುವನ್ನು ನೋಡಿಕೊಳ್ಳುತ್ತಿರುವ ನುಸ್ರುತ್-ಯಶ್

  ಮಗುವನ್ನು ನೋಡಿಕೊಳ್ಳುತ್ತಿರುವ ನುಸ್ರುತ್-ಯಶ್

  ನುಸ್ರುತ್ ಉದ್ಯಮಿ ನಿಖಿಲ್ ಜೈನ್ ಜೊತೆ ಮದುವೆಯಾದ ಬಳಿಕವೂ ನಟ ಯಶ್ ದಾಸ್ ಗುಪ್ತ ಜೊತೆ ಡೇಟಿಂಗ್ ನಲ್ಲಿದ್ದರು. ಯಶ್ ಜೊತೆಗಿನ ಅತಿಯಾದ ಆಪ್ತತೆ ಪಿ ನಿಖಿಲ್ ಅವರಿಂದ ದೂರ ಆಗುವಂತೆ ಮಾಡಿತು. ಆದರೆ ಯಶ್ ಜೊತೆಗಿನ ಸಂಬಂಧದ ಬಗ್ಗೆ ನುಸ್ರುತ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಇಬ್ಬರೂ ತುಂಬಾ ಆಪ್ತರಾಗಿದ್ದಾರೆ. ತನ್ನ ಮಗುವನ್ನು ಯಶ್ ಮತ್ತು ತಾನು ಇಬ್ಬರು ಸೇರಿ ನೋಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

  2019ರಲ್ಲಿ ನುಸ್ರುತ್ ಮದುವೆ

  2019ರಲ್ಲಿ ನುಸ್ರುತ್ ಮದುವೆ

  ನುಸ್ರುತ್ 2019ರಲ್ಲಿ ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡು ವರ್ಷದೊಳಗೆ ಇಬ್ಬರು ಬೇರೆ ಬೇರೆ ಆಗಿದ್ದಲ್ಲದೇ ಬೀದಿ ರಂಪಾಟ ಮಾಡಿಕೊಂಡಿದ್ದರು. ಭಾರತೀಯ ಕಾನೂನಿನ ಪ್ರಕಾರ ಮದುವೆ ಅಸಿಂಧು ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಇಬ್ಬರು ದೂರ ದೂರ ಆಗಲು ಕಾರಣ ನಟ ಯಶ್ ಎಂದು ಹೇಳಲಾಗುತ್ತಿದೆ. ನುಸ್ರುತ್ ಜೊತೆ ನಟ ಯಶ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪತಿ ನಿಖಿಲ್ ಯಿಂದ ದೂರ ಆದ ಬಳಿಕ ನುಸ್ರುತ್ ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಮಾಜಿ ಪತಿ ನಿಖಿಲ್ ತಾನು ಈ ಮಗುವಿಗೆ ತಂದೆಯಲ್ಲ ಎಂದು ಹೇಳಿದ್ದರು.

  ಯಶ್ ಮತ್ತು ನುಸ್ರುತ್ ಸ್ನೇಹ

  ಯಶ್ ಮತ್ತು ನುಸ್ರುತ್ ಸ್ನೇಹ

  ಯಶ್ ಮತ್ತು ನುಸ್ರುತ್ ಇಬ್ಬರು ಅನೇಕ ವರ್ಷಗಳಿಂದ ಸ್ನೇಹಿತರು. ಆದರೆ 2020ರಲ್ಲಿ ಬಿಡುಗಡೆಯಾದ ಬೆಂಗಾಲಿಯ 'SOS Kolkata' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಳಿಕ ಇಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಗಿತ್ತು. ಈ ಸಿನಿಮಾ ನಂತರ ಇಬ್ಬರ ಕ್ಲೋಸ್ ನೆಸ್ ಗಾಳಿಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಇಬ್ಬರ ಅತಿಯಾದ ಸ್ನೇಹ ಪತಿ ನಿಖಿಲ್ ಅವರಿಂದ ದೂರ ಆಗುವಂತೆ ಮಾಡಿತು ಎನ್ನಲಾತ್ತಿದೆ. ಇದೀಗ ಪತಿ ನಿಖಿಲ್ ಅವರಿಂದ ದೂರ ಆಗಿ ನುಸ್ರುತ್, ಯಶ್ ಜೊತೆ ವಾಸಿಸುತ್ತಿದ್ದಾರೆ.

  English summary
  Actress, MP Nusrat Jahan's son's birth certificate reveals the name of father as Yash Dasgupta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X